ಟ್ವಿಟರ್ ಇಂಡಿಯಾ ಎಂಡಿ ವಿರುದ್ದ ಕೇಸ್: ಹೈ ತರಾಟೆ
Team Udayavani, Jul 7, 2021, 5:34 PM IST
ಬೆಂಗಳೂರು: ವೃದ್ಧನ ಮೇಲಿನ ಹಲ್ಲೆ ಪ್ರಕರಣದವಿಡಿಯೋ ಸಂಬಂಧ ಟ್ವಿಟರ್ ಇಂಡಿಯಾವ್ಯವಸ್ಥಾಪಕ ನಿರ್ದೇಶಕ ಮನೀಶ್ ಅವರನ್ನುವಿಚಾರಣೆಗೆ ಹಾಜರಾಗಲು ಒತ್ತಡ ಹೇರುತ್ತಿರುವಉತ್ತರ ಪ್ರದೇಶದ ಲೋನಿ ಬಾರ್ಡರ್ ಠಾಣಾಪೊಲೀಸರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದಹೈಕೋರ್ಟ್, ಪ್ರಕರಣದ ಮೂಲ ಸತ್ಯಾಂಶವನ್ನೇ ಪೊಲೀಸರು ತಿಳಿದುಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣ ಸಂಬಂಧ ಖುದ್ದು ಹಾಜರಾಗಿ ಸಾಕ್ಷ Âನುಡಿಯುವಂತೆ ಸೂಚಿಸಿ ಗಾಜಿಯಾಬಾದ್‌ನಲೋನಿ ಬಾರ್ಡರ್ ಠಾಣಾ ಪೊಲೀಸರು ತಮಗೆನೀಡಿರುವ ನೋಟಿಸ್ ರದ್ದುಪಡಿಸುವಂತೆ ಕೋರಿಮನೀಶ್ ಮಹೇಶ್ವರಿ ಸಲ್ಲಿಸಿದ್ದ ಅರ್ಜಿ ನ್ಯಾ. ಜಿ.ನರೇಂದರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠದಮುಂದೆ ವಿಚಾರಣೆಗೆ ಬಂದಿತ್ತು.ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರುವಾದಿಸಿ, ಅರ್ಜಿದಾರರು ಟ್ವಿಟರ್ ಇಂಡಿಯಾದಲ್ಲಿಓರ್ವ ಉದ್ಯೋಗಿಯಾಗಿದ್ದಾರೆ.
ಅಪ್‌ಲೋಡ್‌ಮಾಡಲಾದ ವಿಡಿಯೋ ಮೇಲಿನ ಯಾವುದೇನಿಯಂತ್ರಣ ಹೊಂದಿಲ್ಲ. ಕೆಲ ಪತ್ರಕರ್ತರು ಹಾಗೂರಾಜಕಾರಣಿಗಳು ವಿಡಿಯೋವನ್ನು ಟ್ವಿಟರ್ ವೇದಿಕೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಪ್ರಕರಣದಲ್ಲಿಅರ್ಜಿದಾರರ ತಪ್ಪಿಲ್ಲ ಹಾಗೂ ಪ್ರಕರಣವು ಐಟಿಕಾಯ್ದೆಯ ಸೆಕ್ಷನ್ 79ರ ವ್ಯಾಪ್ತಿಗೆ ಬರುವುದಿಲ್ಲ.ವಿಡಿಯೋ ಕಾನ್ಫರೆನ್ಸ ಮೂಲಕ ಅರ್ಜಿದಾರರನ್ನುವಿಚಾರಣೆ ನಡೆಸಲು ಹೈಕೋರ್ಟ್ ಸೂಚಿಸಿದ್ದರೂ ಯುಪಿ ಪೊಲೀಸರು ವಿಚಾರಣೆ ನಡೆಸಿಲ್ಲ.
ಪೊಲೀಸರು ಭರವಸೆ ನೀಡಿದರೆ ವಿಚಾರಣೆಗೆಹಾಜರಾಗಲು ಅರ್ಜಿದಾರರು ಸಿದ್ಧರಿದ್ದಾರೆ ಎಂದುನ್ಯಾಯಾಲಯದ ಗಮನಕ್ಕೆ ತಂದರು.ಇದಕ್ಕೆ ಯುಪಿ ಪೊಲೀಸರ ವಿರುದ್ಧಅಸಮಧಾನಗೊಂಡ ನ್ಯಾಯಪೀಠ, ಟ್ವಿಟರ್‌ವೇದಿಕೆಯಲ್ಲಿ ವಿಡಿಯೋ ಅಪ್‌ಲೋಡ್ ಆಗಿದೆ.ಈ ಘಟನೆಯೊಂದಿಗೆ ಟ್ವಿಟರ್ ಇಂಡಿಯಾಯಾವುದೇ ಸಂಬಂಧ ಹೊಂದಿಲ್ಲ. ಇಂತಹಘಟನೆಗಳನ್ನು ತಡೆಯವ ಸಾಮರ್ಥ್ಯ ಟ್ವಿಟರ್‌ಇಂಡಿಯಾ ಹೊಂದಿದೆಯೇ? ಪ್ರಕರಣದಲ್ಲಿಟ್ವಿಟರ್ ಇಂಡಿಯಾ ವಿರುದ್ಧ ಯಾವಆರೋಪವಿದೆ? ಟ್ವಿಟರ್ ಇಂಡಿಯಾನೊಂದಿಗೆಪ್ರಕರಣದ ದೂರುದಾರ ಯಾವ ರೀತಿ ಸಂಬಂಧಹೊಂದಿದ್ದಾರೆ? ಎಂದು ಪ್ರಶ್ನಿಸಿತು.
ಅಲ್ಲದೆ, ಇಂತಹ ಘಟನೆಗಳನ್ನು ತಡೆಯುವಸ್ಥಿತಿಯಲ್ಲಿ ಟ್ವಿಟರ್ ಇಂಡಿಯಾ ಇದೆ ಎಂಬವಿಚಾರವನ್ನೂ ಯುಪಿ ಪೊಲೀಸರುತೋರಿಸಿಕೊಟ್ಟಿಲ್ಲ. ಟ್ವಿಟರ್‌ನಿಂದ ಅಪರಾಧ ಕೃತ್ಯನಡೆದಿದೆ ಎಂಬುದನ್ನು ತೋರಿಸಲು ಸಾಕ್ಷ್ಯಇದೆಯೇ? ಘಟನೆಯಲ್ಲಿ ಭಾಗಿಯಾಗಿರುವವ್ಯಕ್ತಿಗಳನ್ನು ಗುರುತಿಸಲು ತನಿಖೆ ನಡೆಸಿ. ಒಂದುಸಂಸ್ಥೆಯು ಕೃತ್ಯವನ್ನು ನಡೆಸಲು ಸಾಧ್ಯವಾಗದಿದ್ದರೆಮತ್ಯಾಕೆ ಇಂತಹ ಕ್ರಮಗಳನ್ನು ಪೊಲೀಸರುಕೈಗೊಳ್ಳಬೇಕು ಎಂದು ಕೇಳಿದ ನ್ಯಾಯಪೀಠವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.