‘ಹೆಂಡ್ತಿ’ ವಿಚಾರಕ್ಕೆ ಇಬ್ಬರು ಗಂಡಂದಿರ ಜಗಳ ಕೊಲೆಯಲ್ಲಿ ಅಂತ್ಯ!
Team Udayavani, Jan 24, 2020, 8:41 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಬೆಂಗಳೂರು: ಪತ್ನಿಯ ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಮಹಿಳೆಯ ಮೊದಲನೇ ಪತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾವಲ್‌ಭೈರಸಂದ್ರದಲ್ಲಿ ನಡೆದಿದೆ. ಶ್ರೀನಿವಾಸ ನಗರದ ಇರ್ಫಾನ್ ಕೊಲೆಯಾದವರು. ಕೊಲೆ ಆರೋಪಿ ತೌಫೀಕ್ ಎಂಬಾತನನ್ನು ಬಂಧಿಸಿರುವ ಡಿ.ಜೆ ಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಎಲೆಕ್ಟ್ರೀಶಿಯನ್ ಕೆಲಸ ಮಾಡುವ ಇರ್ಫಾನ್ ಕೆಲವು ವರ್ಷಗಳ ಹಿಂದೆ ತಸ್ಲಿಮಾ (ಹೆಸರು ಬದಲಿಸಲಾಗಿದೆ) ಎಂಬಾಕೆಯನ್ನು ಮದುವೆ ಆಗಿದ್ದು ಸಂಸಾರ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ಪತ್ನಿಯನ್ನು ಆತ ತೊರೆದಿದ್ದು ಬೇರೆ ಬೇರೆಯಾಗಿದ್ದರು.
ಆ ಬಳಿಕ ತಸ್ಲಿಮಾ ತೌಫೀಕ್‌ನನ್ನು ಮದುವೆಯಾಗಿ ಆತನೊಂದಿಗೆ ವಾಸಿಸುತ್ತಿದ್ದಳು. ಈ ವಿಚಾರವಾಗಿ ತೌಫೀಕ್‌ನೊಂದಿಗೆ ಇರ್ಫಾನ್ ಹಲವು ಬಾರಿ ಜಗಳ ಮಾಡಿದ್ದನು.
ಬುಧವಾರ ರಾತ್ರಿ ಪಾನಮತ್ತನಾಗಿದ್ದ ಇರ್ಫಾನ್ ಕಾವಲ್ ಭೈರಸಂದ್ರದ ಆಟೋ ನಿಲ್ದಾಣದಲ್ಲಿ ತೌಫೀಕ್ ಜತೆ ಜಗಳವಾಡಿದಾಗ ಇಬ್ಬರ ನಡುವೆ ಹೊಡೆದಾಟ ನಡೆದಿತ್ತು. ಈ ಸಂದರ್ಭದಲ್ಲಿ ತೌಫೀಕ್ ಚಾಕುವಿನಿಂದ ಇರ್ಫಾನ್‌ಗೆ ಹಲವು ಬಾರಿ ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇರ್ಫಾನ್‌ನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.