ರಾಜ್ಯದಲ್ಲಿ ಎರಡು “ಮಾದರಿ ವೈನ್‌ ಬೊಟಿಕ್‌’


Team Udayavani, Jun 21, 2017, 12:35 PM IST

wine.jpg

ಬೆಂಗಳೂರು: ವೈನ್‌ ಪ್ರಿಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಸ್ವಾದದ ವೈನ್‌ಗಳು ಒಂದೇ ಸೂರಿನಡಿ  ಲಭ್ಯವಾಗುವಂತೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಎರಡು ಮಾದರಿ ವೈನ್‌ ಬೊಟಿಕ್‌ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ.

ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ವೈನ್‌ ಸಗಟು ಮಾರಾಟ ಮಳಿಗೆ (ವೈನ್‌ ಬೊಟಿಕ್‌) ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ. ರಾಜ್ಯದ 17 ವೈನರಿಗಳಲ್ಲಿ ತಯಾರಿಸಲಾಗುವ ಸುಮಾರು 300ರಿಂದ 400 ವೈನ್‌ ಬ್ರಾಂಡ್‌ಗಳನ್ನು ಮಾತ್ರ ಈ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ. 

ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ಪ್ರೋತ್ಸಾಹ ಮತ್ತು ವೈನ್‌ ಪ್ರಿಯರಿಗೆ ರಾಜ್ಯದ ತಾಜಾ ವೈನ್‌ ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಸ. ರಾಜ್ಯದಲ್ಲಿ ವೈನ್‌ ಬೊಟಿಕ್‌ ಪರವಾನಗಿ ಪಡೆದವರು ಮಳಿಗೆಗಳನ್ನು ಹೇಗೆ ನಿರ್ಮಾಣ ಮಾಡಬೇಕು, ವೈನ್‌ಗಳ ಪ್ರದರ್ಶನ ಹೇಗೆ ಎಂಬಿತ್ಯಾದಿ ಮಾಹಿತಿ ನೀಡುವ ಸಲುವಾಗಿ ಈ ಎರಡು  ಮಾದರಿ ವೈನ್‌ ಬೊಟಿಕ್‌ಗಳನ್ನು ತೆರೆಯಲಾಗುತ್ತಿದೆ. ಬೆಂಗಳೂರಿನಲ್ಲೂ ಮಾದರಿ ವೈನ್‌ಬೊಟಿಕ್‌ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. 

ಮಾದರಿ ವೈನ್‌ ಬೊಟಿಕ್‌: ಸುಮಾರು 150ರಿಂದ 200 ಚದರ ಅಡಿ ಜಾಗದಲ್ಲಿ ಮಾದರಿ ವೈನ್‌ ಬೊಟಿಕ್‌ ನಿರ್ಮಾಣಗೊಳ್ಳಲಿದೆ.  ವೈನ್‌ ಗುಣಮಟ್ಟ ಕಾಪಾಡುವ ಉದ್ದೇಶದಿಂದ ಹವಾನಿಯಂತ್ರಿತ (ಎಸಿ) ವ್ಯವಸ್ಥೆ, ವಿವಿಧ ಪ್ರದೇಶಗಳಲ್ಲಿ ತಯಾರಿಸಲಾದ ವಿವಿಧ ವೈನ್‌ಗಳ ಪ್ರದರ್ಶನ, ವೈನ್‌ ಬ್ರಾಂಡ್‌ಗಳ ನಿಖರ ಬೆಲೆ ಪ್ರದರ್ಶಿಸುವ ಡಿಜಿಟಲ್‌ ಫ‌ಲಕ, ವಿವಿಧ ಕಂಪನಿಗಳ ವೈನ್‌, ರಿಯಾಯಿತಿ ಇತ್ಯಾದಿ ಮಾಹಿತಿ ಇಲ್ಲಿರಲಿದೆ.

ದ್ರಾಕ್ಷಿ ತಳಿವಾರು ವೈನ್‌ ಬಾಟಲ್‌ಗ‌ಳ ಕಪಾಟು (ರ್ಯಾಕ್‌), ಪ್ರತಿಯೊಂದಕ್ಕೂ ಪ್ರತ್ಯೇಕವಾದ ಕಪಾಟುಗಳ ವ್ಯವಸ್ಥೆ ಮಾಡಲಾಗುತ್ತದೆ. ಇದರೊಂದಿಗೆ ವೈನ್‌ ಮಂಡಳಿಯ ಕಾರ್ಯ ಚಟುವಟಿಕೆ ಮತ್ತು ವೈನ್‌ ಸೇವೆನೆಯಿಂದ ಆಗುವ ಆರೋಗ್ಯದ ಲಾಭಗಳ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ ಎಂದು ವೈನ್‌ ಬೋರ್ಡ್‌ ಪ್ರಧಾನ ವ್ಯವಸ್ಥಾಪಕ ಸರ್ವೇಶ್‌ಕುಮಾರ್‌ ತಿಳಿಸಿದ್ದಾರೆ. 

ಯಾವ್ಯಾವ ತಳಿ ದ್ರಾಕ್ಷಿಯ ವೈನ್‌ ಸಿಗಲಿದೆ?: ವೈನ್‌ ದ್ರಾಕ್ಷಿಗಳನ್ನು ಬೆಳೆಯುವ ಪ್ರದೇಶಗಳಾದ ನಂದಿ ಕಣವೆಯ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ, ತುಮಕೂರು. ಕೃಷ್ಣಾ ಕಣಿವೆಯ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್‌. ಕಾವೇರಿ ಕಣಿವೆಯ ವಿಭಾಗದ ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಂಪಿ ಹಿಲ್ಸ್‌ ವೈನ್‌ ಪ್ರದೇಶಗಳಾದ ಕೊಪ್ಪಳ,

ಗದಗ, ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ  ಬೆಳೆಯುವ ಕೆಂಪು ವೈನ್‌ ತಳಿಯ ದ್ರಾಕ್ಷಿಗಳಾದ ಕೆಬರ್‌ನೆಟ್‌ ಸವಿನ್ಯೋ, ಮೆರ್ಲಟ್‌, ಪಿನೋಟ್‌ ನಯರ್‌, ಬ್ಯೂಜೋಲಾಯಿಸ್‌, ಗ್ರೆನಾಶ್‌, ಕಿಯಾಂತಿ, ಜಿನ್‌ಫ‌ಂಡೆಲ್‌, ಗೇಮಿ, ಬೋಡೋ, ಸಂಜೊವೇಸ್‌, ಸಿರಾಜ್‌, ನೆಬೊಲೊ, ಆಗ್ಲಿಯಾನಿಕೊ, ಬಾರ್ಬರ, ಕೆಬರ್ನೆಟ್‌ಪ್ರಾಂಕ್‌ ಹಾಗೂ ಬಿಳಿ ವೈನ್‌ ತಯಾರಿಕೆಗೆ ಬಳಸುವ ಶಾರ್ಡೊನ್ನೆ, ಶೆನಿನ್‌ ಬ್ಲಾಂಕ್‌, ಸವಿನ್ಯೊ, ಮಸ್ಕಟ್‌, ಸೆಮಿಯಾನ್‌, ಪಿನೊ ಬ್ಲಾಂಕ್‌, ವಿಯನ್ಯೆ, ಗ್ರುನರ್‌ ವೆಟಿಸರ್‌ಮ ರಿಸ್ಲಿಂಗ್‌ ತಳಿಯ ದ್ರಾಕ್ಷಿಗಳಿಂದ ತಯಾರಾದ ವೈನ್‌ಗಳು ಈ ವೈನ್‌ ಬೊಟಿಕ್‌ಗಳಲ್ಲಿ ಸಿಗಲಿವೆ. 

ಒಂದು ಕೋಟಿ ವೈನ್‌ ಬಾಟಲಿ ಮಾರಾಟ: ಎಲೈಟ್‌ ವಿಂಟೇಜ್‌ ವೈನರಿ, ಹಂಪಿ ಹೆರಿಟೇಜ್‌ ವೈನರಿ, ನಂದಿವ್ಯಾಲಿ ವೈನರಿ, ದಾದಾ ವೈನರಿ, ನಿಸರ್ಗ ವೈನರಿ, ಎಸ್‌ಡಿಯು ವೈನರಿ, ಕೆಆರ್‌ಎಸ್‌ಎಂ ಎಸ್ಟೇಟ್‌ ವೈನರಿ, ಹೆರಿಟೇಜ್‌ ಗ್ರೇಪ್‌ ವೈನರಿ, ಸಿಲಿಕಾನ್‌ ವ್ಯಾಲಿ ವೈನರಿ ಹೀಗೆ ರಾಜ್ಯದ 17 ವೈನರಿಗಳಲ್ಲಿ ಸುಮಾರು 300ರಿಂದ 400 ವೈನ್‌ ಬ್ರಾಂಡ್‌ಗಳು ತಯಾರಾಗುತ್ತವೆ. ಪ್ರತಿ ವರ್ಷ ಶೇ.30ರಿಂದ 35ರಷ್ಟು ವೈನ್‌ ಸೇವಿಸುವವರ ಸಂಖ್ಯೆ ಹೆಚ್ಚುತ್ತಿದೆ.

ವರ್ಷಕ್ಕೆ 75 ಲಕ್ಷ ಲೀಟರ್‌ ವೈನ್‌ ಮಾರಾಟವಾಗುತ್ತಿದೆ. 2015-16ನೇ ಸಾಲಿನಲ್ಲಿ 1.33 ಕೋಟಿ ವೈನ್‌ ಬಾಟಲ್‌ಗ‌ಳು ಉತ್ಪಾದನೆಯಾಗಿದ್ದು, 1 ಕೋಟಿಗೂ ಅಧಿಕ ಬಾಟಲ್‌ಗ‌ಳು ಮಾರಾಟವಾಗಿವೆ ಎಂದು ಕರ್ನಾಟಕ ದ್ರಾಕ್ಷಾ ರಸ ಮಂಡಳಿ ಮಾಹಿತಿ ನೀಡಿದೆ. ಇದರಿಂದ ಸರ್ಕಾರ ಕಳೆದ ಸಾಲಿನಲ್ಲಿ 250 ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ನಡೆಸಿದೆ ಎನ್ನಲಾಗಿದೆ. 

ವೈನ್‌ ಬೊಟಿಕ್‌(Boutique) ತೆರೆಯುವವರಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ಈ ವೈನ್‌ಬೊಟಿಕ್‌ ಆರಂಭಿಸಲಾಗುತ್ತಿದೆ. ವೈನ್‌ ಸಂರಕ್ಷಣೆಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸಲಾಗುವುದು. ವಿವಿಧ ವೈನ್‌ದ್ರಾಕ್ಷಿ ತಳಿಗಳಿಂದ ತಯಾರಾದ ವೈನನ್ನು ಗ್ರಾಹಕರು ಸುಲಭವಾಗಿ ಗುರುತಿಸಲು ಅನುಕೂಲ ಒದಗಿಸಲಾಗುವುದು. ರಾಜ್ಯದ ವೈನರಿಗಳಲ್ಲಿ ತಯಾರಿಸಲಾದ ವೈನ್‌ಗೆ ಮೊದಲ ಆದ್ಯತೆ.
– ಟಿ.ಸೋಮು, ವ್ಯವಸ್ಥಾಪಕ ನಿರ್ದೇಶಕ, ವೈನ್‌ ಬೋರ್ಡ್‌

* ಸಂಪತ್‌ ತರೀಕೆರೆ

ಟಾಪ್ ನ್ಯೂಸ್

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.