ನಕಲಿ ಪತ್ರಕರ್ತ ಸೇರಿ ಇಬ್ಬರು ಪೊಲೀಸ್ ಬಲೆಗೆ
Team Udayavani, Oct 20, 2017, 12:03 PM IST
ಬೆಂಗಳೂರು: ಆನ್‌ಲೈನ್ ಮೂಲಕ ಚರಸ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ನಕಲಿ ಪತ್ರಕರ್ತ ಸೇರಿದಂತೆ ಇಬ್ಬರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಕಲಿ ಪತ್ರಕರ್ತ, ಮಂಗಳೂರು ಮೂಲದ ಅಮೂಲ್ ಹಸನ್ (23) ಮತ್ತು ರಾಕೇಶ್ (26) ಬಂಧಿತರು.
ಇವರಿಂದ 3,200 ರೂ. ಮೌಲ್ಯದ ಒಂದು ಕೆ.ಜಿ. ತೂಕದ ಚರಸ್, ನಗದು ಮತ್ತು ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಮಂಗಳೂರು, ಬೀದರ್ ಮತ್ತು ಒಡಿಶಾದಿಂದ ಚರಸ್ ಮತ್ತು ಗಾಂಜಾವನ್ನು ತರಿಸಿ ಆನ್‌ಲೈನ್ ದಂಧೆ ನಡೆಸುತ್ತಿದ್ದರೆಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಂಗಳೂರು ಮೂಲದ ಅಮೂಲ್ ಹಸನ್ ಪತ್ರಿಕೋದ್ಯಮ ಪದವೀಧರನಾಗಿದ್ದು, ಚರಸ್, ಗಾಂಜಾ ವ್ಯಸನಿಯಾಗಿದ್ದಾನೆ,
ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ, ಬಳಿಕ ಎರಡು ವರ್ಷಗಳಿಂದ ಆಲ್ ಇಂಡಿಯಾ ನ್ಯೂಸ್ 24*7 ನ್ಯೂಸ್‌ನಲ್ಲಿ ವರದಿಗಾರ ಎಂದು ಹೇಳಿಕೊಂಡು ಸುದ್ದಿ ಸಂಗ್ರಹಿಸಿದ್ದ. ಜತೆಗೆ ನಗರದಲ್ಲಿ ನಡೆಯುತ್ತಿದ್ದ ಮಾದಕ ವಸ್ತು ಮಾರಾಟದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದ ಎಂದರು.
ಈ ಮಧ್ಯೆ ಹಸನ್, ಗಾರೆ ಕೆಲಸ ಮಾಡಿಕೊಂಡು ಡ್ರಗ್ಸ್ ಮಾಫಿಯಾ ಜತೆ ನಂಟು ಹೊಂದಿದ್ದ ರಾಕೇಶ್‌ನನ್ನು ಸಂಪರ್ಕಿಸಿ ದಂಧೆ ಮೂಲಕ ಅಧಿಕ ಹಣ ಸಂಪಾದಿಸಲು ಸಂಚು ರೂಪಿಸಿದ್ದಾನೆ. ಪ್ರಾರಂಭದಲ್ಲಿ ಗ್ರಾಹಕರನ್ನು ಗುರುತಿಸಿ ಮಾರಾಟ ಮಾಡುತ್ತಿದ್ದವರು, ನಂತರ ಆನ್‌ಲೈನ್ ದಂಧೆಗೆ ಇಳಿದು ಖಾಸಗಿ ಕಂಪನಿ ಉದ್ಯೋಗಿಗಳಿಗೆ ಸರಬರಾಜು ಮಾಡುತ್ತಿದ್ದರು. ಈ ಮಾಹಿತಿ ಸಂಗ್ರಹಿಸಿದ ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ, ಕೋರಮಂಗಲ ಠಾಣೆ ಪಿಐ ಮಂಜುನಾಥ್ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಚರಣೆಗೆ ಮುಂದಾಗಿದ್ದಾಗಿ ಆಯುಕ್ತ ತಿಳಿಸಿದರು.
ಹಣದಾಸೆಗೆ ಕೃತ್ಯ: ಹಸನ್ ಪತ್ರಕರ್ತ, ಪೊಲೀಸ್ ಮಾಹಿತಿದಾರ ಎಂದು ಹೇಳಿಕೊಂಡು ಪೊಲೀಸರಿಗೆ ಪರಿಚಯಿಸಿಕೊಳ್ಳುತ್ತಿದ್ದ. ಜೊತೆಗೆ ಮಾದಕ ವಸ್ತು ಜಾಲದ ಮಾಹಿತಿ ಕಲೆ ಹಾಕುತ್ತಿದ್ದ. ಇತ್ತೀಚೆಗೆ ಕಸ್ತೂರ ಬಾ ರಸ್ತೆಯಲ್ಲಿರುವ ಐಷಾರಾಮಿ ಹೋಟೆಲ್‌ವೊಂದಕ್ಕೆ ಭೇಟಿ ನೀಡಿ ಅಲ್ಲಿಯೂ ದೊಡ್ಡ ಮಟ್ಟದಲ್ಲಿ ದಂಧೆ ಪ್ರಾರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವೆಬ್‌ಸೈಟ್ ಸೃಷ್ಟಿ: ಇತ್ತ ಹೆಚ್ಚಾಗಿ ನಡೆಯುತ್ತಿದ್ದ ಆನ್‌ಲೈನ್ ದಂಧೆಗೆ ಕಡಿವಾಣ ಹಾಕಲು ಪೊಲೀಸರು ತಂತ್ರ ರೂಪಿಸಿ, ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್ ಸೃಷ್ಟಿಸಿ ಹಸನ್‌ನನ್ನು ಸಂಪರ್ಕಿಸಿದ್ದರು. ಜೊತೆಗೆ ಖರೀದಿಗೂ ಮುಂದಾದರು ಆದರೆ ಟ್ರೂ ಕಾಲರ್ ಮೂಲಕ ಮಾಹಿತಿ ಸಂಗ್ರಹಿಸಿದ ಹಸನ್ ಪೊಲೀಸ್ ಬಗ್ಗೆ ಶಂಕಿಸಿದ್ದ. ಇದನ್ನು ಅರಿತ ಪೊಲೀಸರು ಖಾತೆಯಲ್ಲಿ ಟ್ರಗ್ ಅಡಿಟ್ ಚಿತ್ರ, ದೃಶ್ಯಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಇದನ್ನು ನೋಡಿದ ಹಸನ್ ಮಾದಕ ದ್ರವ್ಯ ನೀಡಲು ಒಪ್ಪಿದ್ದ. ನಂತರ ಸಂಚು ರೂಪಿಸಿದ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಗಿಫ್ಟ್ಬಾಕ್ಸ್‌ನಲ್ಲಿದ್ದ ಮಾದಕ ವಸ್ತು: ಹಸನ್ ಬಂಧಿಸಿದ ಪೊಲೀಸರು ರಾಕೇಶ್ ಬಂಧನಕ್ಕೆ ಸಂಚುರೂಪಿಸಿ ಮೊಬೈಲ್ ಮೂಲಕ ಈತನನ್ನು ಸಂಪರ್ಕಿಸಿ ಚರಸ್ ತರುವಂತೆ ಸೂಚಿಸಿತ್ತು. ಅದರಂತೆ ಆರೋಪಿ ಗಿಫ್ಟ್ ಬಾಕ್ಸ್‌ನಲ್ಲಿ ಒಂದು ಕೆ.ಜಿ.ಚರಸ್ ಅನ್ನು ಬಸ್ ಮೂಲಕ ನಗರಕ್ಕೆ ತಂದಿದ್ದ. ಈತ ಬಸ್ ನಿಲ್ದಾಣದಲ್ಲಿರುವಾಗಲೇ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಯಿತು. ಹಿಂದೆಯೂ ಮಂಗಳೂರಿನಿಂದ ಚರಸ್ ತರಿಸುತ್ತಿರುವುದಾಗಿ ಆರೋಪಿ ತಿಳಿಸಿದ್ದಾನೆ.
ವಾಟ್ಸ್‌ಪ್ ಗ್ರೂಫ್: ಈ ಹಿಂದೆ ಹಸನ್ ಸುದ್ದಿ ಸಂಗ್ರಹಿಸಲು ಹಲವು ಕಾರ್ಯಕ್ರಮಗಳು, ಪ್ರತಿಭಟನಾ ಸ್ಥಳಗಳಿಗೆ ಬರುತ್ತಿದ್ದ. ಈ ವೇಳೆ ಪರಿಚಯಿಸಿಕೊಂಡಿದ್ದ ಪ್ರತಿಷ್ಠಿತ ಮಾಧ್ಯಮಗಳ ಪತ್ರಕರ್ತರ ನಂಬರ್‌ಗಳನ್ನು ಪಡೆದು ವಾಟ್ಸ್‌ಆ್ಯಪ್ ಗ್ರೂಪ್ ಅನ್ನು ಕೂಡ ಕ್ರಿಯೆಟ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.