ಕಾಶ್ಮೀರಿ ಯುವಕರ ಥಳಿಸಿದ ಇಬ್ಬರ ಸೆರೆ
Team Udayavani, Dec 20, 2017, 12:10 PM IST
ಬೆಂಗಳೂರು: ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಜಮ್ಮು-ಕಾಶ್ಮೀರ ಮೂಲದ ಸೋದರರ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹರೀಶ್ (24) ಮತ್ತು ಮಹೇಶ್ (25) ಬಂಧಿತರು. ಹಲ್ಲೆ ಸಂಬಂಧ ಲಿಸಾನ್ ಅಹ್ಮದ್ (24) ಎಂಬುವವರು ಸಂಜಯನಗರ ಠಾಣೆಗೆ ದೂರು ನೀಡಿದ್ದರು. ಡಿ.10ರಂದು ಸೋದರರು ಹೋಟೆಲ್ನಲ್ಲಿ ಊಟ ಮುಗಿಸಿ ಮನೆಗೆ ವಾಪಸ್ ಬರುವಾಗ ಆರೋಪಿಗಳು ಕನ್ನಡ ಮಾತನಾಡಲು ತಿಳಿಸಿದ್ದಾರೆ. ಕನ್ನಡ ಬರುವುದಿಲ್ಲ ಎಂದಾಗ ಥಳಿಸಿದ್ದಾರೆ ಎಂದು ಲಿಸಾನ್ ಅಹ್ಮದ್ ದೂರು ನೀಡಿದ್ದಾರೆ.
ಲಿಸಾನ್ ಅಹ್ಮದ್ ಒಂದೂವರೆ ವರ್ಷದ ಹಿಂದೆ ಕಾಶ್ಮೀರದಿಂದ ಬೆಂಗಳೂರಿಗೆ ಬಂದಿದ್ದು, ಸೋದರನ ಜತೆ ನಾಗಶೆಟ್ಟಿ ಹಳ್ಳಿಯ ಬಸವೇಶ್ವರ ಲೇಔಟ್ನಲ್ಲಿದ್ದರು. ಡಿ.10ರಂದು ರಾತ್ರಿ ಊಟಕ್ಕೆ ಹೋಗಿದ್ದೆವು. ರಾತ್ರಿ 12.30ರ ಸುಮಾರಿಗೆ ಕಾರಿನಲ್ಲಿ ಮನೆಗೆ ವಾಪಸ್ ಬರುವಾಗ ಎನ್ಟಿಐ ಬಸ್ ನಿಲ್ದಾಣದ ಬಳಿ ಕಾರು ನಿಲ್ಲಿಸಿ ಫೋನ್ನಲ್ಲಿ ಮಾತನಾಡುತ್ತಿದ್ದೆವು.
ಆಗ ಬೈಕ್ಗಳಲ್ಲಿ ಸ್ಥಳಕ್ಕೆ ಬಂದ ನಾಲ್ವರು, ಜೋರಾಗಿ ಮಾತನಾಡಿದರು. ದಯವಿಟ್ಟು ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾತನಾಡಿ ಎಂದು ಮನವಿ ಮಾಡಿದೆವು. ಆಗ ಒಬ್ಬ ಹಿಂದಿಯಲ್ಲಿ ಮಾತನಾಡಿಸಿದ. ಮತ್ತೂಬ್ಬ ಕನ್ನಡದಲ್ಲಿ ಮಾತನಾಡುವಂತೆ ಆಗ್ರಹಿಸಿದ. ನಮಗೆ ಕನ್ನಡ ಬರುವುದಿಲ್ಲ ಎಂದಾಗ ನಾಲ್ವರೂ ಅವಾಚ್ಯವಾಗಿ ನಿಂದಿಸಿ, ತಲೆ ಮೇಲೆ ಹೊಡೆದರು.
ಅಲ್ಲದೆ, ಕಲ್ಲಿನಿಂದ ಕಾರಿನ ಗಾಜುಗಳನ್ನು ಪುಡಿ ಮಾಡಿ ಪರಾರಿಯಾದರು ಎಂದು ಲಿಸಾನ್ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ನಡೆದ ಕೂಡಲೆ ಪೊಲೀಸ್ ಸಹಾಯವಾಣಿ “ನಮ್ಮ-100’ಕ್ಕೆ ಲಿಸಾನ್ ಕರೆ ಮಾಡಿದ್ದಾರೆ. ವಿಷಯ ತಿಳಿದ ಹೊಯ್ಸಳ ಸಿಬ್ಬಂದಿ, ಸ್ಥಳಕ್ಕೆ ಬಂದು ಗಾಯಗೊಂಡಿದ್ದ ಕಾಶ್ಮೀರಿ ಸೋದರರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ನಂತರ ತನಿಖೆ ನಡೆಸಿದ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಆದರೆ, ಬಂಧಿತರು ವಿಚಾರಣೆ ಸಂದರ್ಭದಲ್ಲಿ, ಇಬ್ಬರು ಕಾಶ್ಮೀರಿ ಯುವಕರು ನಡು ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಮಾತನಾಡುತ್ತಿದ್ದರು.
ಅದನ್ನು ಪ್ರಶ್ನಿಸಿದಕ್ಕೆ ನಮ್ಮ ವಿರುದ್ಧ ಏರು ಧ್ವನಿಯಲ್ಲಿ ಕೂಗಾಡಿದರು. ಆಗ ಕೋಪಗೊಂಡು ಹಲ್ಲೆ ನಡೆಸಿದ್ದೇವೆಯೇ ಹೊರತು ಕನ್ನಡ ಮಾತನಾಡಿಲ್ಲ ಎಂದು ಹಲ್ಲೆ ನಡೆಸಿಲ್ಲ ಎಂದು ಎಂದಿರುವುದಾಗಿ ಸಂಜಯ್ನಗರ ಪೊಲೀಸರು “ಉದಯವಾಣಿ’ಗೆ ತಿಳಿಸಿದ್ದಾರೆ.
ಸಿಎಂಗಳ ಟ್ವೀಟ್: ಈ ಬಗ್ಗೆ ಟ್ವೀಟ್ ಮಾಡಿರುವ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಕಣಿವೆ ರಾಜ್ಯದ ಯುವಕರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರೂ ಟ್ವೀಟಿಸಿದ್ದು, ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.