Bengaluru: ಕೆಲಸ ಸಿಗದೇ ಬೈಕ್ ಕಳ್ಳತನಕ್ಕಿಳಿದ ಇಬ್ಬರು ಬಿ-ಟೆಕ್ ಪದವೀಧರರು
Team Udayavani, Aug 12, 2023, 1:17 PM IST
ಬೆಂಗಳೂರು: ಕೆಲಸ ಸಿಗದೇ ಬೈಕ್ ಕಳ್ಳತನಕ್ಕೆ ಇಳಿದ ಬಿ-ಟೆಕ್ ಪದವೀಧರರನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರದ ಬಾಲಯ್ಯಪಲ್ಲಿ ಮೂಲದ ಹೇಮಾದ್ರಿ ಹಾಗೂ ಪವನ್ ಬಂಧಿತರು. ಇಬ್ಬರು ಜೊತೆಗೆ ಓದಿ ಬೆಳೆದಿದ್ದರು. ಬಿ-ಟೆಕ್ ಪದವಿ ಮುಗಿಸಿದ್ದ ಇಬ್ಬರು ನಂತರ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಹುಟ್ಟೂರಿನಲ್ಲಿರುವ ಹಲವರಿಗೆ ಒಳ್ಳೆ ಕೆಲಸ ಸಿಕ್ಕಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದರು. ಆದರೆ, ಬೆಂಗಳೂರಿನಲ್ಲಿ ಕೆಲಸ ಸಿಗದೆ ಪರದಾಡಿದ್ದರು. ಕೆಲಸವಿಲ್ಲ ಎಂದು ಗೊತ್ತಾದರೆ ಹುಟ್ಟೂರಿನಲ್ಲಿ ತಮ್ಮ ಬಗ್ಗೆ ಎಲ್ಲರೂ ಅಪಹಾಸ್ಯ ಮಾಡುತ್ತಾರೆ ಎಂದುಕೊಂಡು ಕಳ್ಳತನದ ಹಾದಿ ಹಿಡಿದಿದ್ದರು.
ಯೂ ಟ್ಯೂಬ್ ನೋಡಿ ಬೈಕ್ ಕಳ್ಳತನ: ಯೂ ಟ್ಯೂಬ್‌ನಲ್ಲಿ ಬೈಕ್ ಕದಿಯುವುದನ್ನು ನೋಡಿ ಬೈಕ್ ಕಳ್ಳತನ ಕರಗತ ಮಾಡಿಕೊಂಡಿದ್ದರು. ಬೆಂಗಳೂರಿನ ಹನುಮಂತನಗರ ಠಾಣಾ ವ್ಯಾಪ್ತಿಯ ಬುಲೆಟ್ ಬೈಕ್‌ಗಳನ್ನ ಕದ್ದಿದ್ದ ಆರೋಪಿಗಳು ಆಂಧ್ರದಲ್ಲಿರುವ ತಮ್ಮ ಊರಿಗೆ ತೆಗೆದುಕೊಂಡು ಹೋಗಿ ಒಳ್ಳೆಯ ಉದ್ಯೋಗದಲ್ಲಿರುವವರಂತೆ ಬಿಂಬಿಸಿಕೊಂಡಿದ್ದರು. ಇತ್ತ ಬುಲೆಟ್ ಮಾಲೀಕರು ಹನುಮತಂನಗರ ಠಾಣೆಗೆ ದೂರು ನೀಡಿದ್ದರು. ಹನು ಮಂತನಗರ ಪೊಲೀಸರು ಆಂಧ್ರಪ್ರದೇ ಶಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದು ಬಂಧಿಸಿದ್ದಾರೆ.
ಇದನ್ನೂ ಓದಿ: Crime: 25 ಲಕ್ಷ ಗೆದ್ದಿದ್ದ ಟೀ ವ್ಯಾಪಾರಿಯನ್ನು ಅಪಹರಿಸಿ 15 ಲಕ್ಷ ಸುಲಿಗೆ ಮಾಡಿದ ಪರಿಚಿತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.