ಕರ್ನಾಟಕ ಉಡ್ತಾ ಪಂಜಾಬ್ ಆಗಲು ಬಿಡುವುದಿಲ್ಲ: ಪರಮೇಶ್ವರ್
Team Udayavani, Mar 24, 2017, 3:45 AM IST
ವಿಧಾನಪರಿಷತ್ತು: ಕರ್ನಾಟಕವನ್ನು ಯಾವುದೇ ಕಾರಣಕ್ಕೂ “ಉಡ್ತಾ ಪಂಜಾಬ್’ ಆಗಲು ಬಿಡುವುದಿಲ್ಲ. ಮಾದಕ ವಸ್ತುಗಳ ಮಾರಾಟ ಜಾಲ ನಿಗ್ರಹಕ್ಕೆ ಸಾಧ್ಯವಿರುವ ಎಲ್ಲ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಲೇಹರ್‌ಸಿಂಗ್, ಕಾಂಗ್ರೆಸ್‌ನ ನಾರಾಯಣಸ್ವಾಮಿ ಹಾಗೂ ಜೆಡಿಎಸ್‌ನ ಟಿ.ಎ. ಶರವಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಉಡ್ತಾ ಪಂಜಾಬ್‌ನಂತೆ “ಉಡ್ತಾ ಕರ್ನಾಟಕ’, “ಉಡ್ತಾ ಬೆಂಗಳೂರು’ ಎಂದು ಹಿಂದೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ, ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಉಡ್ತಾ ಪಂಜಾಬ್ ಆಗಲು ಬಿಡುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಮಾದಕ ಪದಾರ್ಥಗಳ ಮಾರಾಟ ಜಾಲ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಬೆಂಗಳೂರು ಅಷ್ಟೇ ಅಲ್ಲ, ಎಲ್ಲ ಜಿಲ್ಲಾ ಕೇಂದ್ರಗಳಿಗೂ ಇದು ವ್ಯಾಪಿಸಿದೆ. ಪ್ರತಿಷ್ಠಿತ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲೂ ಮಾದಕ ಪದಾರ್ಥಗಳ ಜಾಲ ಇರುವ ಬಗ್ಗೆ ಮಾಹಿತಿ ಇದೆ. ವಿದೇಶಿ ಪ್ರಜೆಗಳು ಇದರಲ್ಲಿ ಹೆಚ್ಚಾಗಿ ಶಾಮೀಲಾಗಿದ್ದಾರೆ. ಇದೆಲ್ಲದರ ಬಗ್ಗೆ ನಿಗಾ ಇಡಲಾಗಿದೆ. ಜಾಲದ ಹಿಂದಿರುವ ಮಾಫಿಯಾ ಪತ್ತೆ ಹಚ್ಚಲು ಗೂಢಚಾರಿಕೆ ಸಹ ಮಾಡಲಾಗುವುದು. ಕಳೆದ ನಾಲ್ಕು ವರ್ಷಗಳಲ್ಲಿ ಮಾದಕ ವಸ್ತುಗಳ ಮಾರಾಟದ 31 ಪ್ರಕರಣಗಳು ದಾಖಲಾಗಿದ್ದು, 58 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದರು.
59 ವಿದೇಶಿಗರ ಗಡಿಪಾರು: ರಾಜ್ಯದಲ್ಲಿ ವೀಸಾ ಅವಧಿ ಮುಗಿದ 1.023 ವಿದೇಶಿ ಪ್ರಜೆಗಳು ವಾಸವಾಗಿದ್ದಾರೆ. ಅವರ ಪೈಕಿ 59 ವಿದೇಶಿ ಪ್ರಜೆಗಳನ್ನು ಅವರ ದೇಶಗಳಿಗೆ ವಾಪಸ್ ಕಳಿಸಲಾಗಿದೆ. ಉಳಿದವರ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಲಾಗಿದೆ. ಅಕ್ರಮ ವಲಸಿಗರನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ “ಸ್ಪೇಷಲ್ ಟಾಸ್ಕ್ಫೋರ್ಸ್’ ರಚಿಸಲಾಗಿದೆ. ಅನಧೀಕೃತವಾಗಿ ನೆಲೆಸಿರುವ ವಿದೇಶಿಯರು ವಿಮಾನ, ಬಂದರು ಅಥವಾ ಭೂ ಮಾರ್ಗದ ಮೂಲಕ ದೇಶ ತೊರೆಯಲು ಸಾಧ್ಯವಾಗದಂತೆ “ಲುಕ್‌ಔಟ್ ಸರ್ಕುಲರ್’ ಹೊರಡಿಸಲಾಗುತ್ತಿದೆ. ಅಂತಹವರನ್ನು ಗುರುತಿಸಿದ ತಕ್ಷಣ ಅವರ ವಿರುದ್ಧ “ಲೀವ್ ಇಂಡಿಯಾ ನೋಟಿಸ್’ ಹೊರಡಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಅನಧಿಕೃತವಾಗಿ ಪತ್ತೆಯಾದ ವಿದೇಶಿಯವರನ್ನು ಗಡಿಪಾರು ಮಾಡುವವರೆಗೆ ಸೂಕ್ತ ಭದ್ರತೆಯಲ್ಲಿ ಇಡಲು ಬೆಂಗಳೂರು ಕಾರಾಗೃಹದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಅನಧೀಕೃತವಾಗಿ ವಾಸಿಸುತ್ತಿರುವ ವಿದೇಶಿಯರನ್ನು “ಫಾರೆನರ್ ಡಿಟೆನÒನ್ ಸೆಂಟರ್’ನಲ್ಲಿ ಇರಿಸಲಾಗುತ್ತಿದೆ ಎಂದು ಪರಮೇಶ್ವರ್ ಇದೇ ವೇಳೆ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.