ಎನ್‌ಐಎಯಿಂದ ಉಕ್ರೇನ್ ವ್ಯಕ್ತಿ ವಿಚಾರಣೆ
Team Udayavani, May 9, 2019, 3:07 AM IST
ಬೆಂಗಳೂರು: ಶ್ರೀಲಂಕಾ ಪ್ರಜೆ ಇರಬಹುದೆನ್ನುವ ಶಂಕೆ ಮೇರೆಗೆ ಬಂಧಿತನಾಗಿರುವ ಜೋಯೆಲ್ ನಿರುಶನ್ ಸ್ಯಾಮ್ಯುಯಲ್ (32)ನನ್ನು ರಾಷ್ಟ್ರೀಯ ತನಿಖಾ ತಂಡಗಳು ತೀವ್ರ ವಿಚಾರಣೆಗೊಳಪಡಿಸಿವೆ.
ನಕಲಿ ಪಾಸ್‌ಪೋರ್ಟ್ ಬಳಸಿ ಉಕ್ರೇನ್‌ನಿಂದ ಆಗಮಿಸಿದ್ದ ಸ್ಯಾಮ್ಯುಯಲ್‌ನನ್ನು ಏ.29ರಂದು ಬಂಧಿಸಿದ್ದ ವಲಸೆ ಅಧಿಕಾರಿಗಳು, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಠಾಣೆಯಲ್ಲಿ ದೂರು ದಾಖಲಿಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯ ಹೆಚ್ಚಿನ ತನಿಖೆಗಾಗಿ ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಷ್ಟ್ರ ಹಾಗೂ ರಾಜ್ಯ ಗುಪ್ತಚರ ದಳಗಳು, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆಧಿಕಾರಿಗಳು ಪ್ರತ್ಯೇಕವಾಗಿ ಆರೋಪಿ ಸ್ಯಾಮ್ಯುಯಲ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಆತನ ಹಿನ್ನೆಲೆ, ಯಾವ ಉದ್ದೇಶಕ್ಕೆ ಉಕ್ರೇನ್‌ನಲ್ಲಿ ನೆಲೆಸಿದ್ದ. ಜತೆಗೆ ಆತನ ಸಂಪರ್ಕದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಮತ್ತೂಂದೆಡೆ ಆರೋಪಿ, ತಾನು ಚೆನ್ನೈ ಮೂಲದವನು ಎಂದು ಹೇಳಿದ್ದರಿಂದ ಎಲ್‌ಟಿಟಿಇ ಸಂಪರ್ಕ ಇರಬಹುದೇ ಎಂಬ ಅನುಮಾನದೊಂದಿಗೆ ಚೆನ್ನೈನ ಉಗ್ರ ನಿಗ್ರಹ ದಳ (ಎಟಿಎಸ್) ಕೂಡ ಭೇಟಿ ನೀಡಿ ಆರೋಪಿಯ ವಿಚಾರಣೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಂಚನೆ ಕೇಸ್‌ನಲ್ಲಿ ಜೈಲು: ಆರೋಪಿ ಸ್ಯಾಮ್ಯುಯಲ್ ವಂಚನೆ ಪ್ರಕರಣ ಒಂದರಲ್ಲಿ ಉಕ್ರೇನ್‌ನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ಬಹಿರಂಗೊಂಡಿದೆ. ಜೈಲು ಶಿಕ್ಷೆ ಪೂರ್ಣಗೊಂಡಿತ್ತೇ ಅಥವಾ ಜಾಮೀನಿನ ಮೇರೆಗೆ ಬಿಡುಗಡೆಗೊಂಡಿದ್ದನೇ ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
“ಅವಿವಾಹಿತ’ ಪ್ರಮಾಣಪತ್ರ!: 1983ರಲ್ಲಿ ಕುಟುಂಬ ಉಕ್ರೇನ್‌ಗೆ ಸ್ಥಳಾಂತರಗೊಂಡಿದ್ದು, ಅಲ್ಲಿಯೇ ನೆಲೆಸಿದ್ದೇವೆ. ಸದ್ಯ, ಓರ್ವ ಯುವತಿಯ ಜತೆ ಲಿವಿಂಗ್ ರಿಲೇಶನ್‌ಶಿಪ್ ಹೊಂದಿದ್ದು, ಒಂದು ಮಗುವಿದೆ. ಆದರೆ, ಕಾನೂನುಬದ್ಧವಾಗಿ ಅಲ್ಲಿ ವಿವಾಹವಾಗಲು ಭಾರತದಿಂದ “ಅವಿವಾಹಿತ’ ಪ್ರಮಾಣಪತ್ರ ಅಗತ್ಯವಿದೆ. ಹೀಗಾಗಿ ಅದನ್ನು ಪಡೆಯಲು ಬೆಂಗಳೂರಿಗೆ ಬಂದಿದ್ದೆ. ನಾನು ಶ್ರೀಲಂಕಾ ಪ್ರಜೆಯಲ್ಲ, ಚೆನೈ ಮೂಲದವನು ಎಂದು ಹೇಳಿಕೆ ನೀಡಿದ್ದಾನೆ.
ಆರೋಪಿ ಮೇಲೆ ಅನುಮಾನ ಏಕೆ?: ಆರೋಪಿ ಸ್ಯಾಮ್ಯುಯಲ್, ಇರಿಸಾಯ ಟ್ರಿನಿಟಿ ಪರೇರಾ ಹೆಸರಿನಲ್ಲಿ ಶ್ರೀಲಂಕಾ ಪಾಸ್‌ಫೋರ್ಟ್ ಹೊಂದಿದ್ದಾನೆ. ಹೀಗಾಗಿ ಶ್ರೀಲಂಕಾ ಗುಪ್ತಚರ ದಳ ಆತನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ.
ಜತೆಗೆ, ಆತನ ಬಳಿ ಭಾರತದ ಮೂರು ಪಾಸ್‌ಪೋರ್ಟ್‌ಗಳಿವೆ. ಆ ಪೈಕಿ ಮೊದಲ ಪಾಸ್‌ಪೋರ್ಟ್ ಇದೆ. ಎರಡು ಮತ್ತು ಮೂರನೇ ಬಾರಿ ಪಡೆದ ಪಾಸ್‌ಪೋರ್ಟ್ ಕಳೆದುಕೊಂಡಿದ್ದಾನೆ. ಆದರೆ, ಇವುಗಳ ಬಗ್ಗೆ ತನಗೇನೂ ಗೊತ್ತಿಲ್ಲ. ತಾನು ಚೆನೈ ಮೂಲದವನು ಎಂದು ಆತ ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಶ್ರೀಲಂಕಾ, ಉಕ್ರೇನ್‌ಗೆ ಮಾಹಿತಿ!: ಬಂಧಿತ ವ್ಯಕ್ತಿಯ ಬಗ್ಗೆ ಶ್ರೀಲಂಕಾ ಹಾಗೂ ಉಕ್ರೇನ್ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಿ ಪತ್ರ ಬರೆಯಲಾಗಿದೆ. ರಾಯಭಾರ ಕಚೇರಿಗಳಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.