ಮಳೆಯ ನಡುವೆ ಅಂಡರ್‌ಪಾಸ್ ರೆಡಿ
Team Udayavani, May 29, 2017, 12:37 PM IST
ಬಿಬಿಎಂಪಿಯಿಂದ ಕೈಗೆತ್ತಿಕೊಂಡಿರುವ ಡಾ.ರಾಜ್ ಕುಮಾರ್ ರಸ್ತೆ ಕೆಳಸೇತುವೆ ಕಾರ್ಯ ಪೂರ್ಣಗೊಂಡಿದ್ದು, ಮೇ 30 ರಂದು ಸಾರ್ವಜನಿಕರಿಗೆ ಮುಕ್ತವಾಗಲಿದೆ. ಮಾಗಡಿ ರಸ್ತೆ ಕೆಳಸೇತುವೆ ಜೂನ್ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿದ್ದು, ನಮ್ಮ ಮೆಟ್ರೋಕ್ಕೆ ಕೇಂದ್ರ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಅನುಮತಿ ನೀಡುವುದಷ್ಟೇ ಬಾಕಿ ಉಳಿದಿದೆ. ಏಪ್ರಿಲ್ ತಿಂಗಳಿಗೆ ಹೋಲಿಕೆ ಮಾಡಿದರೆ ಮೇ ತಿಂಗಳಲ್ಲಿ ಯೋಜನೆಗಳ ಪ್ರಗತಿ ವೇಗವಾಗಿದೆ. ಇದು ಈ ತಿಂಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಚಿತ್ರಣ. “ಉದಯವಾಣಿ’ಯ ತಿಂಗಳಾಂತ್ಯದ ವಿಶೇಷ.
ಮಳೆ ನಿಂತ ಕೂಡಲೇ ಡಾಂಬರೀಕರಣ
ಯೋಜನೆ: ರಾಜ್‌ಕುಮಾರ್ ರಸ್ತೆಯಲ್ಲಿ ಸಿಗ್ನಲ್ ಮುಕ್ತ ಸಂಚಾರಕ್ಕಾಗಿ ವಿವೇಕಾನಂದ ಕಾಲೇಜು ಎದುರು ಅಂಡರ್ ಪಾಸ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇದರಿಂದಾಗಿ ರಾಜ್‌ಕುಮಾರ್ ರಸ್ತೆಯಲ್ಲಿನ ಸಂಚಾರ ಸಿಗ್ನಲ್ ಮುಕ್ತವಾಗಲಿದೆ.
ಗುತ್ತಿಗೆದಾರ: ಪಿಜೆಬಿ ಎಂಜಿನಿಯರ್ ಪ್ರೈವೇಟ್ ಲಿಮಿಟೆಡ್
ಈ ತಿಂಗಳ ಪ್ರಗತಿ: ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿದ್ದ ಜಲಮಂಡಳಿಯ ಕುಡಿಯುವ ನೀರು ಬೃಹತ್ ಪೈಪುಗಳು ಹಾಗೂ ಬೆಸ್ಕಾಂ ವಿದ್ಯುತ್ ಸಂಪರ್ಕ ಲೈನ್‌ಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಲಾಗಿದ್ದು, ಡಾಂಬರೀಕರಣ ಕಾಮಗಾರಿ ನಡೆಸಲಾಗಿದೆ.
ವಸ್ತುಸ್ಥಿತಿ: ಅಂಡರ್‌ಪಾಸ್ ಕಾಮಗಾರಿ ಸ್ಥಳದಲ್ಲಿ ಬೆಸ್ಕಾಂನ 66 ಕೆವಿ ಲೈನ್‌ಗಳನ್ನು ಸ್ಥಳಾಂತರಿಸಲಾಗಿದ್ದು, ಮಳೆಯಿಂದಾಗಿ ಸರ್ವೀಸ್ ರಸ್ತೆ ಡಾಂಬರೀಕರಣ ಬಾಕಿ ಇದೆ. ಮೇ 30ರೊಳಗೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಪೂರ್ಣ ಗೊಂಡಿದ್ದು, ಮಳೆ ನಿಂತ ಕೂಡಲೇ ಸರ್ವೀಸ್ ರಸ್ತೆ ಡಾಂಬರೀಕರಣ ಮಾಡಲಾಗುವುದು. ಈಗಾಗಲೇ ಅಂಡರ್ ಪಾಸ್‌ನ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ವಾಹನಗಳು ಸಂಚರಿಸದಂತೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಮೇ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರಿಗೆ ಮುಕ್ತಗೊಳಿಸಲಿದ್ದಾರೆ.
-ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪ್ರೀಕಾಸ್ಟ್ ಎಲಿಮೆಂಟ್ ಪೂರ್ಣ
ಯೋಜನೆ: ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿ ಸುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್, ಫುಡ್ ವರ್ಲ್ಡ್ ಜಂಕ್ಷನ್ ಹಾಗೂ ಜೇಡಿಮರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್ ಮತ್ತು ಡಾಲರ್ ಕಾಲೋನಿ, ಹೊಸಕೆರೆ ಹಳ್ಳಿಯ ಕೆಇಬಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಯಿಂದಾಗಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗಿನ ರಸ್ತೆ ಸಂಪೂರ್ಣವಾಗಿ ಸಿಗ್ನಲ್ ಮುಕ್ತವಾಗಲಿದೆ.
ಗುತ್ತಿಗೆದಾರ: ಎಂವಿಆರ್ ಇನಾ#† ಪ್ರಾಜೆಕ್ಟ್ ಪ್ರೈವೇಟ್ ಲಿ.
ಈ ತಿಂಗಳ ಪ್ರಗತಿ: ಸಿಗ್ನಲ್ ಮುಕ್ತ ಕಾಮಗಾರಿ ಅಂಗವಾಗಿ ಡಾಲರ್ ಕಾಲೋನಿ ಹಾಗೂ ಕೆಇಬಿ ಜಂಕ್ಷನ್‌ಗಳಲ್ಲಿ ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಪ್ರೀಕಾಸ್ಟ್ (ಗರ್ಡರ್)ಎಲಿಮೆಂಟ್‌ಗಳನ್ನು ಅಳವಡಿಸುವ ಕಾರ್ಯ ನಡೆಸಲಾಗಿದೆ.
ವಸ್ತುಸ್ಥಿತಿ: ಕೆಇಬಿ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈಗಾಗಲೇ ಪ್ರೀಕಾಸ್ಟ್ ಎಲಿಮೆಂಟ್‌ಗಳನ್ನು ಅಳವಡಿಕೆ ಕಾರ್ಯ ಮುಗಿಸಲಾ ಗಿದೆ. ಉಳಿದಂತೆ ಶೇ.30ರಷ್ಟು ಕೆಲಸಗಳು ಮಾತ್ರ ಬಾಕಿ ಉಳಿಸಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಎರಡು ತಿಂಗಳೊಳಗಾಗಿ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಜತೆಗೆ 3 ಅಂಡರ್ ಪಾಸ್‌ಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಲಾಗುವುದು
-ಪಾಲಿಕೆ ಎಂಜಿನಿಯರ್
ಮಳೆಯಿಂದ ಹಿನ್ನಡೆ
ಯೋಜನೆ: ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ. ಈ ಯೋಜನೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್ ರಸ್ತೆ ನಡುವೆ ಸಿಗ್ನಲ್ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ.
ಗುತ್ತಿಗೆದಾರ: ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್
ಈ ತಿಂಗಳ ಪ್ರಗತಿ: ಜಂಕ್ಷನ್‌ನಲ್ಲಿರುವ ಚೆನ್ನೈ ಹಾಗೂ ತುಮಕೂರು ಕಡೆಗೆ ಹೋಗುವ ರೈಲ್ವೆ ಹಳಿಗಳ ಕೆಳಭಾಗದಲ್ಲಿ ಪ್ರೀಕಾಸ್ಟ್ ಎಲಿಮೆಂಟ್‌ಗಳನ್ನು ಅಳವಡಿಕೆಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಅಳವಡಿಕೆ ಮಾಡಲಾಗಿರುವ ಎಲಿಮೆಂಟ್‌ನಲ್ಲಿ ವಾಹನಗಳ ಸಂಚಾರಕ್ಕೆ ಡಾಂಬರೀಕರಣ ಕಾರ್ಯ ಆರಂಭವಾಗಿದೆ.
ವಸ್ತುಸ್ಥಿತಿ: ಈಗಾಗಲೇ ಒಂದು ಪಥದ ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ ಮತ್ತೂಂದು ಪಥಕ್ಕೆ ಪ್ರೀಕಾಸ್ಟ್ ಎಲಿಮೆಂಟ್ ಅಳವಡಿಸಬೇಕಿದ್ದು, ಮುಂಗಾರು ಪೂರ್ವ ಮಳೆಯಿಂದಾಗಿ ಕಾಮಗಾರಿಗೆ ಹಿನ್ನಡೆಯಾಗಿದೆ. ಇನ್ನು ಮಳೆಗಾಲ ಆರಂಭವಾದರೆ ಭೂಅಗೆತ ದಂತಹ ಕೆಲಸಗಳು ವಿಳಂಬವಾಗುವ ಸಾಧ್ಯತೆಯಿದೆ.
ಒಂದು ಪ್ರೀಕಾಸ್ಟ್ ಎಲಿಮೆಂಟ್ ಅಳವಡಿಕೆ ಕಾರ್ಯ ಮುಗಿದಿದೆ. ಜತೆಗೆ ರಸ್ತೆಗೆ ಡಾಂಬರೀಕರಣ ಕಾರ್ಯ ಬಹುತೇಕ ಮುಗಿದಿದ್ದು, ಮಳೆ ನಿಂತಕೂಡಲೇ ಉಳಿದ ಭಾಗದಲ್ಲಿ ಡಾಂಬರೀಕರಣ ಕಾರ್ಯ ನಡೆಸಲಾಗುವುದು. ಆನಂತರ ಸಂಚಾರಿ ಸಂಚಾರ ಪೊಲೀರಿಂದ ಅನುಮತಿ ಪಡೆದು ಸಾರ್ವಜನಿಕರಿಗೆ ರಸ್ತೆಯನ್ನು ಮುಕ್ತಗೊಳಿಸಲಾಗುವುದು.
-ಪಾಲಿಕೆ ಎಂಜಿನಿಯರ್
ಜೂನ್ ಮೊದಲ ವಾರಕ್ಕೆ ಅಂತಿಮ
ಯೋಜನೆ: ಮಾಗಡಿ ರಸ್ತೆಯಲ್ಲಿ ಸಿಗ್ನಲ್ ಮುಕ್ತ ಸಂಚಾರ ಹಾಗೂ ಮಾಗಡಿ ರಸ್ತೆಯಿಂದ ಬಸವೇಶ್ವರನಗರದ ಕಡೆಗೆ ಸಿಗ್ನಲ್ ಮುಕ್ತವಾಗಿ ಸಂಚಾರಕ್ಕಾಗಿ ಈ ಅಂಡರ್‌ಪಾಸ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಗುತ್ತಿಗೆದಾರ: ಪಿಎಂಜೆ ಕನ್‌ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್
ಈ ತಿಂಗಳ ಪ್ರಗತಿ: ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಳಿಸಲಾಗಿದ್ದು, ಅಂಡರ್ ಪಾಸ್ ತಡೆಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ಮುಗಿಸಿರುವ ಅಧಿಕಾರಿಗಳು, ಡಾಂಬರೀಕರಣ ಕೆಲಸಕ್ಕೆ ಮುಂದಾಗಿದ್ದಾರೆ.
ವಸ್ತುಸ್ಥಿತಿ: ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಪೂರ್ಣ ಗೊಂಡಿದ್ದು ಸರ್ವಿàಸ್ ರಸ್ತೆಗಳ ಡಾಂಬರೀಕರಣ ಕಾಮಗಾರಿ ನಡೆಸಲಾ ಗುತ್ತಿದೆ. ಅಂಡರ್ ಪಾಸ್‌ನಲ್ಲಿ ವಿದ್ಯುತ್ ದೀಪಗಳ ಅಳವಡಿಕೆಯಂತಹ ಕೆಲಸಗಳು ಬಾಕಿಯಿದ್ದು, ಜೂನ್ ಮೊದಲ ವಾರದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ರಸ್ತೆಗೆ ಡಾಂಬರೀಕರಣ ಕಾರ್ಯವನ್ನು ಆರಂಭಿಸಲಾ ಗಿದೆ. ವಿದ್ಯುತ್ ದೀಪಗಳ ಅಳವಡಿಕೆಯಂತಹ ಸಣ್ಣ ಪುಟ್ಟ ಕೆಲಸಗಳು ಬಾಕಿಯಿದ್ದು, ಜೂನ್ ಮೊದಲ ವಾರದೊಳಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳಿಸಲಾಗುವುದು
-ಸಹಾಯಕ ಕಾರ್ಯಕಾರಿ ಎಂಜಿನಿಯರ್
ಮೆಟ್ರೋ ಉದ್ಘಾಟನೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ
ವಸ್ತುಸ್ಥಿತಿ
ಮೆಟ್ರೋ ಮೊದಲ ಹಂತವನ್ನು ಎದುರುನೋಡುತ್ತಿ ರುವ ಜನರಿಗೆ ಮತ್ತೆ ನಿರಾಸೆಯಾಗಿದೆ. ಮೇ ಅಂತ್ಯದೊಳಗೆ ಮೊದಲ ಹಂತ ಸಂಪೂರ್ಣಗೊಂಡು, ಸಾರ್ವಜನಿಕರಿಗೆ ಮುಕ್ತಗೊಳ್ಳಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಏಪ್ರಿಲ್ 15ರ ಒಳಗೆ ಪೂರ್ಣಗೊಳ್ಳುವುದಾಗಿ ಸರ್ಕಾರ ಹೇಳಿತ್ತು. ಆದರೆ, ಈಗ ಮೇ ಅಂತ್ಯಗೊಳ್ಳುತ್ತಿದೆ.
ಇದುವರೆಗೆ ಸಾಧ್ಯವಾಗಿದ್ದು ಪರೀಕ್ಷಾರ್ಥ ಸಂಚಾರ ಕಾರ್ಯ ಮಾತ್ರ! ಪ್ರಸ್ತುತ ರೈಲ್ವೆ ಸುರಕ್ಷತಾ ಆಯುಕ್ತರ ತಂಡದಿಂದ ಪರಿಶೀಲನೆ ನಡೆಯುತ್ತಿದ್ದು, ಇಲ್ಲಿ ಅನುಮತಿ ದೊರೆತ ನಂತರ ರಾಷ್ಟ್ರಪತಿಗಳ ದಿನಾಂಕ ಕೇಳಿ, ಆಮೇಲೆ ಉದ್ಘಾಟನೆಗೆ ದಿನ ನಿಗದಿಯಾಗಲಿದೆ. ಅಂದರೆ ಜೂನ್‌ನಲ್ಲಿ ಜನರಿಗೆ ಸಂಚಾರ ಭಾಗ್ಯ ಸಿಗುವ ಸಾಧ್ಯತೆ ಇದೆ.
ವಿಳಂಬಕ್ಕೆ ಕಾರಣ
ಪರೀಕ್ಷಾರ್ಥ ಸಂಚಾರ ಮತ್ತು ಸಿಗ್ನಲಿಂಗ್ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇನ್ನು ಮೆಟ್ರೋ ಪ್ರತಿ ನಿಲ್ದಾಣ ಗಳಲ್ಲಿ ಕನಿಷ್ಠ 150 “ಫೈರ್ ಪಾಯಿಂಟ್’ (ಹೊಗೆ ಎಚ್ಚರಿಕೆ ಗಂಟೆ)ಗಳಿರುತ್ತವೆ. ಇವೆಲ್ಲವುಗಳ ಕೇಬಲ್ ಒಂದೇ ಕಂಟ್ರೋಲ್ ರೂಂಗೆ ಬರುತ್ತವೆ. ಇದರಲ್ಲಿ ಒಂದು ಪಾಯಿಂಟ್‌ನಿಂದ ಸೂಚನೆ ಬರದಿದ್ದರೂ ಫೇಲ್ ಆದಂತೆಯೇ ಲೆಕ್ಕ. ಆಗ, ಅಗ್ನಿಶಾಮಕ ಅಧಿಕಾರಿಗಳಿಂದ ಮತ್ತೆ ದಿನಾಂಕ ಮುಂದೂಡಿಕೆ ಆಗುತ್ತದೆ. ಇದು ಕೂಡ ವಿಳಂಬಕ್ಕೆ ಕಾರಣ. ಮತ್ತೂಂದೆಡೆ ಜವಾಬ್ದಾರಿಗಳ ಹಂಚಿಕೆ ಸಮರ್ಪಕವಾಧಿಗಿಲ್ಲ ಎನ್ನುವುದೂ ಸಹ ವಿಳಂಬಕ್ಕೆ ಕಾರಣ.
ಪ್ರಸ್ತುತ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಪರಿಶೀಲನೆ ನಡೆಸುತ್ತಿದೆ. ಪ್ರಮಾಣಪತ್ರ ದೊರೆತ ನಂತರ ಮೆಟ್ರೋ ಮಾರ್ಗ ಉದ್ಘಾಟನೆಗೆ ದಿನಾಂಕ ನಿಗದಿಮಾಡಲಾಗುವುದು. ಅಲ್ಲಿಯವರೆಗೂ ಮೆಟ್ರೋ ಮೊದಲ ಹಂತ ಸಂಪೂರ್ಣವಾಗಿ ಯಾವಾಗ ಮುಕ್ತಗೊಳ್ಳಲಿದೆ ಎಂಬುದನ್ನು ನಿಖರವಾಗಿ ಹೇಳುವುದಿಲ್ಲ. ಆದರೆ, ಸಾರ್ವಜನಿಕ ಸಂಚಾರಕ್ಕೆ ಕಾಲ ಸನ್ನಿಹಿತವಾಗಿದೆ ಎಂದು ಮಾತ್ರ ಹೇಳುತ್ತೇನೆ.
-ಪ್ರದೀಪ್‌ಸಿಂಗ್ ಖರೋಲಾ, ಎಂಡಿ, ಬಿಎಂಆರ್‌ಸಿಎಲ್
* ಕಾಮಗಾರಿ ಪೂರ್ಣಗೊಳಿಸಲು ವಿಧಿಸಿದ್ದ ಗಡುವು ಅಕ್ಟೋಬರ್ 2011
* ಬಾಕಿ ಇರುವ ಕಾಮಗಾರಿ ನಿಲ್ದಾಣಗಳ ಸಿವಿಲ್ ಕಾಮಗಾರಿಗಳು, ಲೈಟ್‌ಗಳ ಅಳವಡಿಕೆ, ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ
* ಸಾರ್ವಜನಿಕರಿಗೆ ಮುಕ್ತಗೊಳ್ಳುವುದು ಜೂನ್ 2017
ಮಾಹಿತಿ: ವೆಂ. ಸುನೀಲ್ ಕುಮಾರ್, ವಿಜಯ್‌ಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.