ಸಿಎಂ ಭೇಟಿಗೆ ಸಮಯ ನೀಡದ್ದಕ್ಕೆ ಅಸಮಾಧಾನ
Team Udayavani, Nov 23, 2018, 11:29 AM IST
ಬೆಂಗಳೂರು: ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಖ್ಯಮಂತ್ರಿ ಭೇಟಿಗೆ ಆಗಮಿಸಿದ್ದ ಜಿ.ಪಂ ಅಧ್ಯಕ್ಷರಿಗೆ ಸಮಯ ನೀಡದಿದ್ದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಧಾನಸೌಧದ ಮೆಟ್ರೋ ನಿಲ್ದಾಣ ಬಳಿ ನಡೆಯಿತು.
ಗುರುವಾರ ಬೆಳಗ್ಗೆ 7.30ಕ್ಕೆ ಆಗಮಿಸುವಂತೆ ಸೂಚಿಸಿದ್ದ ಮುಖ್ಯಮಂತ್ರಿಯವರು, ಭೇಟಿಗೆ ಸಮಯ ನೀಡದೆ, ವಿಧಾನಸೌಧ ಹಾಗೂ ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸುವಂತೆ ಅಲೆದಾಡಿಸಿರುವುದಕ್ಕೆ 25 ಜಿಪಂಗಳ ಅಧ್ಯಕ್ಷರು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಮುಖ್ಯಮಂತ್ರಿ ಭೇಟಿಗೆ ವಿಧಾನಸೌಧದಿಂದ ಕೃಷ್ಣಾಗೆ ಆಗಮಿಸುವಂತೆ ಸೂಚಿಸಿದ್ದರಿಂದ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದರೂ, ಸಿಬ್ಬಂದಿ ಜಿಪಂ ಅಧ್ಯಕ್ಷರಿಗೆ ಒಳಗೆ ಬಿಡಲು ನಿರಾಕರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಮೇಶ್ ಕುಮಾರ್ ಶಿಫಾರಸಿನ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆಯಂತೆ ಜಿಪಂ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಅಧಿಕಾರ, ಕಾರು, ಬಂಗಲೆ ನೀಡಿದ್ದಾರೆ. ಆದರೆ, ಯಾವುದೇ ಅನುದಾನ ನೀಡುತ್ತಿಲ್ಲ. ಸುಮಾರು 40 ಸಾವಿರ ಜನರಿಗೆ ಒಬ್ಬರು ಜಿಪಂ ಸದಸ್ಯರಿರುತ್ತಾರೆ. ಅವರಿಗೆ ಕನಿಷ್ಠ ಅನುದಾನವೂ ದೊರೆಯುತ್ತಿಲ್ಲ.
ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಭೇಟಿಗೆ ಆಗಮಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಜಿಪಂ ಅಧ್ಯಕ್ಷರುಗಳ ಸಂಘದ ಅಧ್ಯಕ್ಷ ನವೀನ್ ಹೇಳಿದರು. ಸಂಜೆ ಅಧ್ಯಕ್ಷರುಗಳ ಭೇಟಿ ಮಾಡಲು ಅವಕಾಶ ನೀಡಿದ ಮುಖ್ಯಮಂತ್ರಿ,ಜಿಪಂ ಅಧ್ಯಕ್ಷರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸಲು ಸಮಯ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಮಸ್ಯೆಗಳ ಪಟ್ಟಿ ಮುಂದಿಟ್ಟ ಮಾಲೀಕರು
ಬೆಂಗಳೂರು: ಕಬ್ಬಿನ ಬಾಕಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ಸಮಸ್ಯೆಗಳ ಪಟ್ಟಿಯನ್ನು ಮುಂದಿಟ್ಟಿದ್ದಾರೆಂದು ತಿಳಿದು ಬಂದಿದೆ. ಸರ್ಕಾರ ರೈತರಿಗೆ ಸಮಸ್ಯೆಯಾಗಿದೆ ಎಂದಾಗ ಕಾರ್ಖಾನೆ ಮಾಲೀಕರನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳಲು ಮುಂದಾಗುತ್ತದೆ.
ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಸಾಕಷ್ಟು ಸಮಸ್ಯೆಗಳಿದ್ದು, ಸಕ್ಕರೆ ಬೆಲೆ ಕಡಿಮೆಯಾದಾಗ ಸರ್ಕಾರ ನಮ್ಮ ನೆರವಿಗೆ ಬರುವುದಿಲ್ಲ. ರಾಜ್ಯ ಸರ್ಕಾರ ಎಥೆನಾಲ್ ಖರೀದಿಯನ್ನೂ ಮಾಡುವುದಿಲ್ಲ. ಅಲ್ಲದೇ ಸಕ್ಕರೆ ಕಾರ್ಖಾನೆಗಳಿಂದ ಉತ್ಪತ್ತಿಯಾದ ವಿದ್ಯುತ್‌ನ್ನು ಸರ್ಕಾರಕ್ಕೆ ಸರಬರಾಜು ಮಾಡಿ ಆರು ತಿಂಗಳು ಕಳೆದರೂ ಹಣ ನೀಡದೇ ಸುಮಾರು 700 ಕೋಟಿ ರೂ. ಬಾಕಿ ಉಳಿದುಕೊಂಡಿದೆ
ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ಮುಖ್ಯಮಂತ್ರಿ ಎದುರು ಸಮಸ್ಯೆಗಳನ್ನು ಹೇಳಿಕೊಂಡರು. ಕಾರ್ಖಾನೆ ಮಾಲೀಕರ ಸಮಸ್ಯೆಗಳನ್ನು ಆಲಿಸಿರುವ ಮುಖ್ಯಮಂತ್ರಿ ಸದ್ಯಕ್ಕೆ ರೈತರ ಬಾಕಿ ಹಣ ಪಾವತಿಸಿ ಸಮಸ್ಯೆ ಬಗೆಹರಿಸಿ, ಮುಂದಿನ ದಿನಗಳಲ್ಲಿ ಕಾರ್ಖಾನೆ ಮಾಲೀಕರ ಸಮಸ್ಯೆಗೂ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ
Bengaluru: ನ.17ಕ್ಕೆ ನವದುರ್ಗಾ ಲೇಖನ ಯಜ್ಞ, ವಾಗೀಶ್ವರೀ ಪೂಜೆ; ಪೂರ್ವಭಾವಿ ಸಭೆ
Bengaluru: ನಗರದ ಐಬಿಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ; ಗ್ರಾಹಕರ ಆತಂಕ
Bengaluru: ಕುಡಿದು ಸ್ಕೂಲ್ ಬಸ್ ಓಡಿಸಿದ ಚಾಲಕರ ಲೈಸೆನ್ಸ್ ಅಮಾನತು
Bengaluru: ಬಸ್ ಚೇಸ್ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.