ಬಿಇಎಲ್ ಘಟಕಕ್ಕೆ ಕೇಂದ್ರ ರಕ್ಷಣಾ ಸಚಿವೆ ಭೇಟಿ
Team Udayavani, Jan 10, 2018, 12:02 PM IST
ಬೆಂಗಳೂರು: ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನ(ಬಿಇಎಲ್) ವಿವಿಧ ಯುನಿಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳಿಂದ ಮಿಸೇಲ್ ಹಾಗು ರ್ಯಾಡಾರ್ಗಳ ತಯಾರಿಕೆ ಬಗ್ಗೆ ಮಾಹಿತಿ ಪಡೆದರು.
ಬಿಇಎಲ್ನಿಂದ ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆ ಹಾಗೂ ಭವಿಷ್ಯದ ಯೋಜನೆ, ಮಿಸೇಲ್ ಹಾಗೂ ರ್ಯಾಡರ್ ಟೆಸ್ಟಿಂಗ್ ಸಿಸ್ಟಮ್, ಮೂಲಸೌಕರ್ಯ, ಉತ್ಪಾದನೆ, ಪರೀಕ್ಷಾ ವ್ಯವಸ್ಥೆ, ಸಿಬ್ಬಂದಿ ಹಾಗೂ ಆಡಳಿತವರ್ಗ, ಸಂಶೋಧನೆ, ಅಭಿವೃದ್ಧಿ ಹಾಗೂ ಗುಣಮಟ್ಟ ಮತ್ತು ವ್ಯವಹಾರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಅಕ್ಷ ಮಿಸೇಲ್ ಯೋಜನೆ ಮತ್ತು ಇತರೆ ರ್ಯಾಡರ್ ಯೋಜನೆಯಲ್ಲಿ ಬಿಇಎಲ್ನ ಮಹಿಳಾ ಉದ್ಯೋಗಿಗಳು ತೊಡಗಿಸಿಕೊಂಡಿರುವುದಕ್ಕೆ ಸಚಿವರು ಪ್ರಶಂಸೆ ವ್ಯಕ್ತಪಡಿಸಿ, ಅವರ ಕಠಿಣ ಪರಿಶ್ರಮವನ್ನು ಶ್ಲಾ ಸಿದ್ದಾರೆ. ಮಿಲಿಟರಿ ರ್ಯಾಡರ್ ಹಾಗೂ ಮಿಸೇಲ್ ಸಿಸ್ಟಮ್ ಸ್ಟಾಟಜಿಕ್ ಬಿಸಿನೆಟ್ ಯುನಿಟ್, ನ್ಯೂ ನಿಯರ್ ಫೀಲ್ಡ್ ಟೆಸ್ಟ್ ಫೆಸಿಲಿಟಿ, ಮೈಕ್ರೋವೇವ್ ಸುಪರ್ಕಂಪೋನೆಂಟ್, ಕೋಸ್ಟಲ್ ಸರ್ವೇಲೆನ್ಸ್ ಸಿಸ್ಟೆಮ್ ಫೆಸಿಲಿಟಿಸ್ಗಳನ್ನು ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.