ಸಾರ್ವತ್ರಿಕ ರಜಾ ದಿನ ಪ್ರಕಟ


Team Udayavani, Nov 20, 2018, 6:20 AM IST

govt-holiday.jpg

ಬೆಂಗಳೂರು: ರಾಜ್ಯ ಸರ್ಕಾರ 2019 ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳನ್ನು ಪ್ರಕಟಿಸಿದ್ದು , 21 ದಿನ ಸಾರ್ವತ್ರಿಕ ರಜೆ, 19 ನಿರ್ಬಂಧಿತ  ರಜೆ ಹಾಗೂ ಎಲ್ಲ ಭಾನುವಾರ, ಎರಡನೇ ಶನಿವಾರ  ರಜೆ ಎಂದು ಘೋಷಿಸಿದೆ. ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಜೆ ಪಟ್ಟಿಗೆ ಅನುಮೋದನೆ ನೀಡಲಾಗಿದೆ.

ಸಾರ್ವತ್ರಿಕ ರಜೆ
ಜನವರಿ-15 (ಸಂಕ್ರಾಂತಿ), ಜನವರಿ 26 (ಗಣರಾಜ್ಯೋತ್ಸವ), ಮಾರ್ಚ್‌ -4 (ಮಹಾಶಿವರಾತ್ರಿ), ಏಪ್ರಿಲ್‌-4 (ಯುಗಾದಿ), ಏಪ್ರಿಲ್‌ -17 (ಮಹಾವೀರ ಜಯಂತಿ) ಏಪ್ರಿಲ್‌-19 (ಗುಡ್‌ ಫ್ರೈಡೆ),  ಮೇ-1 (ಕಾರ್ಮಿಕರ ದಿನಾಚರಣೆ), ಮೇ -7 (ಬಸವ ಜ¿ಂತಿ/ಅಕ್ಷಯ ತೃತೀಯ), ಜೂನ್‌-5 ( ರಂಜಾನ್‌), ಆಗಸ್ಟ್‌-8 (ಬಕ್ರೀದ್‌),  ಆಗಸ್ಟ್‌-16 (ಸ್ವಾತಂತ್ರ್ಯ ದಿನಾಚರಣೆ),  ಸೆಪ್ಟೆಂಬರ್‌-1 (ವಿನಾಯಕ ವ್ರತ),  ಸೆಪ್ಟೆಂಬರ್‌ -10 (ಮೊಹರಂ ಕಡೇ ದಿನ),  ಸೆಪ್ಟೆಂಬರ್‌-28 (ಮಹಾಲಯ ಆಮಾವಾಸ್ಯೆ).  ಅಕ್ಟೋಬರ್‌-2 (ಗಾಂಧಿ ಜಯಂತಿ), ಅಕ್ಟೋಬರ್‌-7(ಮಹಾನವಮಿ ಆಯುಧ ಪೂಜೆ),  ಅಕ್ಟೋಬರ್‌-8 (ವಿಜಯದಶಮಿ), ಅಕ್ಟೋಬರ್‌ -29( ಬಲಿಪಾಡ್ಯಮಿ, ದೀಪಾವಳಿ),  ನವೆಂಬರ್‌-1 (ಕನ್ನಡ ರಾಜ್ಯೊತ್ಸವ), ನವೆಂಬರ್‌-15 (ಕನಕದಾಸರ ಜಯಂತಿ), ಡಿಸೆಂಬರ್‌ -25 (ಕ್ರಿಸ್‌ಮಸ್‌)

( ಈ ಪಟ್ಟಿಯಲ್ಲಿ ರಜಾ ದಿನ ಬರುವ ಅಂಬೇಡ್ಕರ ಜಯಂತಿ ಏಪ್ರಿಲ್‌-14, ಮಹರ್ಷಿ ವಾಲ್ಮೀಕಿ ಜಯಂತಿ – ಅಕ್ಟೋಬರ್‌ -13, ನರಕ ಚತುರ್ದಶಿ – ಅಕ್ಟೋಬರ್‌ 27, ಮತ್ತು  ಈದ್‌ ಮೀಲಾದ್‌ -ನವೆಂಬರ್‌ 10 ರಜಾ ದಿನ ಒಳಗೊಂಡಿರುವುದಿಲ್ಲ)

ನಿರ್ಬಂಧಿತ ರಜೆ
ಜನವರಿ-1 (ನೂತನ ವರ್ಷ), ಫೆಬ್ರವರಿ -14 (ಮಾಧ್ವ ನವಮಿ), ಮಾರ್ಚ್‌-20 (ಹೋಳಿ),  ಏಪ್ರಿಲ್‌-10 (ದೇವರ ದಾಸಿಮಯ್ಯ ಜಯಂತಿ) ಏಪ್ರಿಲ್‌-20(ಶಬೆ ಬರಾತ್‌), ಮೇ-9(ಶಂಕರ ಜಯಂತಿ), ಮೇ-18(ಬುದ್ಧ ಪೂರ್ಣಿಮಾ),  ಮೇ-31( ಜಮಾತ್‌ ಉಲ್‌ ವಿದಾ),  ಜೂನ್‌-1(ಶಬೆ ಕದರ್‌),  ಆಗಸ್ಟ್‌-9(ವರಮಹಾಲಕ್ಷ್ಮಿ),  ಆಗಸ್ಟ್‌-23( ಕೃಷ್ಣ  ಜನ್ಮಾಷ್ಠಮಿ),  ಸೆಪ್ಟೆಂಬರ್‌-11( ಓಣಂ), ಸೆಪ್ಟೆಂಬರ್‌-12 (ಅನಂತ ಪದ್ಮನಾಭ ವ್ರತ), ಸೆಪ್ಟೆಂಬರ್‌-13 (ನಾರಾಯಣ ಗುರು ಜಯಂತಿ), ಸೆಪ್ಟೆಂಬರ್‌-17 (ವಿಶ್ವಕರ್ಮ ಜಯಂತಿ),  ಅಕ್ಟೋಬರ್‌-18 (ತುಲಾ ಸಂಕ್ರಮಣ) ನವೆಂಬರ್‌-12 (ಗುರುನಾನಕ್‌ ಜಯಂತಿ), ಡಿಸೆಂಬರ್‌-12 (ಹುತ್ತರಿ ಹಬ್ಬ), ಡಿಸೆಂಬರ್‌-24 (ಕ್ರಿಸ್‌ಮಸ್‌ ಪ್ರಯುಕ್ತ)

( ಈ ಪಟ್ಟಿಯಲ್ಲಿ ಬರುವ  ರಾಮನವಮಿ- ಏಪ್ರಿಲ್‌ 13,  ಸೌರಮಾನ ಯುಗಾದಿ -ಏಪ್ರಿಲ್‌ 14,  ಸ್ವರ್ಣ ಗೌರಿ ವ್ರತ -ಸೆಪ್ಟೆಂಬರ್‌ 2 ರಜಾದಿನಗಳು ಸೇರಿಲ್ಲ)

ರಾಜ್ಯ ಸರ್ಕಾರಿ ನೌಕರರು ನಾಲ್ಕನೇ ಶನಿವಾರವೂ ರಜೆ ನೀಡುವ ಬೇಡಿಕೆ ಇಟ್ಟಿರುವುದರಿಂದ  ಈ ಕುರಿತು ಸಾಧಕ-ಬಾಧಕ ಬಗ್ಗೆ ಚರ್ಚಿಸಿ ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

ಈಗಾಗಲೇ ಸರ್ಕಾರಿ ನೌಕರರ ಒಟ್ಟಾರೆ ರಜೆ 100 ದಿನ ದಾಟಿದ್ದು, ಸಾರ್ವಜನಿಕ ಕೆಲಸ-ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ.ಹೀಗಾಗಿ, ಹೆಚ್ಚುವರಿ ರಜೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದರು.

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.