ಸಮಸ್ಯೆ ಇಲ್ಲದೆ ಆರೋಗ್ಯ ವಿವಿ ಸ್ಥಳಾಂತರ
Team Udayavani, Apr 5, 2017, 12:17 PM IST
ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ರಾಮನಗರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಎಲ್ಲಾ ವ್ಯವಸ್ಥೆಗಳನ್ನು ಆನ್‌ಲೈನ್ ಅಡಿಯಲ್ಲಿ ತರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಧಿಗದು ಎಂದು ವಿವಿ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್ ಸ್ಪಷ್ಟಪಡಿಸಿದ್ದಾರೆ.
ಜಯನಗರದಲ್ಲಿರುವ ವಿವಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ವಿವಿಯನ್ನು ರಾಮನಗರಕ್ಕೆ ಸ್ಥಳಾಂತರಿಸಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ. ವಿವಿ ಸ್ಥಳಾಂತರಗೊಂಡ ನಂತರ ವಿದ್ಯಾರ್ಥಿಗಳು ತಮ್ಮ ದಾಖಲೆಗಳಿಗಾಗಿ ವಿವಿಗೆ ಬರಬೇಕಿಲ್ಲ. ಅರ್ಹತಾ ಪ್ರಮಾಣಪತ್ರ, ವಲಸೆ ಪ್ರಮಾಣಪತ್ರ, ಪ್ರಾವಿಷನಲ್ ಡಿಗ್ರಿ ಪ್ರಮಾಣಪತ್ರಗಳನ್ನೂ ಆನ್‌ಲೈನ್ ಮೂಲಕ ವಿತರಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಪರೀಕ್ಷಾ ಶುಲ್ಕ, ಪ್ರವೇಶ ಶುಲ್ಕ, ಕಾಲೇಜುಗಳ ಅಫಿಲಿಯೇಷನ್ ಶುಲ್ಕಗಳನ್ನು ಆನ್‌ಲೈನ್‌ನಲ್ಲೇ ಪಾವತಿಸಬಹುದಾಗಿದೆ. ಕಡತ ವಿಲೇವಾರಿಗಾಗಿ “ಆನ್‌ಲೈನ್ ಫೈಲ್ ಟ್ರಾಕಿಂಗ್ ಸಿಸ್ಟಂ’ ಜಾರಿಯಲ್ಲಿದೆ ಎಂದು ವಿವರಿಸಿದರು. ವಿವಿ ಪಠ್ಯಕ್ರಮದಲ್ಲಿ ಹೊಸ ವಿಷಯಗಳನ್ನು ಸೇರಿಸಲು ಪಠ್ಯಕ್ರಮ ಸಮಿತಿ ರಚಿಸಿದ್ದು, ಬಯೋ-ಎಥಿಕ್ ಮತ್ತು ರೀಸರ್ಚ್ ಮೆಥಡಾಲಜಿ ವಿಷಯಗಳನ್ನೂ ಸೇರಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನಾಲ್ಕು ಪ್ರದೇಶಿಕ ಕೇಂದ್ರಗಳ ಸ್ಥಾಪನೆ: ವಿಶ್ವವಿದ್ಯಾಲಯವು ಕಲಬುರ್ಗಿ, ಬೆಳಗಾವಿ, ದಾವಣಗೆರೆ ಮತ್ತು ಮಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ಕಲಬುರ್ಗಿಯಲ್ಲಿ ಇನ್ನೆರಡು ವಾರದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಬೆಳಗಾವಿ ಕೇಂದ್ರ ಸ್ಥಾಪನೆಗೆ ಮುಂದಿನ ವಾರ ಟೆಂಡರ್ ಕರೆಯಲಾಗುತ್ತದೆ ಎಂದು ರವೀಂದ್ರನಾಥ್ ತಿಳಿಸಿದರು.
ಸಂಶೋಧನೆಗೆ 20 ಕೋಟಿ ಮೀಸಲು: ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡುವ ಉದ್ದೇಶದಿಂದ 2016-17ರಲ್ಲಿ 85 ಪ್ರಸ್ತಾವಿತ ಸಂಶೋಧನೆಗಳಿಗೆ 4 ಕೋಟಿ ರೂ., ಐಐಎಸ್ಸಿ ಸಹಯೋಗದ 9 ಸಂಶೋಧಿಧನೆಗಳಿಗೆ 3 ಕೋಟಿ ರೂ., ನ್ಯಾಷನಲ್ ಸೆಂಟರ್ ಆಫ್ ಬಯೋಲಜಿಕಲ್ ಸೈನ್ಸಸ್ ಸಹಧಿಯೋಗದ ನಾಲ್ಕು ಸಂಶೋಧನೆಗೆ 49 ಲಕ್ಷ ರೂ. ವಿನಿಯೋಗಿಸಲಾಗಿದೆ. ಅಲ್ಲದೆ, 2017-ಧಿ18ನೇ ಸಾಲಿನಲ್ಲಿ ಸಂಶೋಧನೆಗಾಗಿಯೇ ವಿವಿ ಬಜೆಟ್‌ನಲ್ಲಿ 20 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.
ನಾಳೆ ಆರೋಗ್ಯ ವಿವಿ ಘಟಿಕೋತ್ಸವ
ವಿವಿಯ 19ನೇ ಘಟಿಕೋತ್ಸವ ಗುರುವಾರ (ಅ. 6) ಬೆಳಗ್ಗ 10.30ಕ್ಕೆ ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಲಿದೆ. ಈ ಬಾರಿ ಘಟಿಕೋತ್ಸವದಲ್ಲಿ ಒಟ್ಟು 26,698 ಮಂದಿಗೆ ಪ್ರದವಿ ಪ್ರದಾನ ಮಾಡಲಾಗುತ್ತಿದೆ. ಒಟ್ಟು 69 ಅಭ್ಯರ್ಥಿಗಳು 103 ಚಿನ್ನದ ಪದಕ ಮತ್ತು 9 ನಗದು ಬಹುಮಾನ ಪಡೆಯುತ್ತಿದ್ದಾರೆ. ಇದರಲ್ಲಿ 48 ಹೆಣ್ಣು ಮಕ್ಕಳು ಮತ್ತು 21 ಪುರಷರಿದ್ದಾರೆ.
ಜತೆಗೆ ಇಬ್ಬರಿಗೆ ಗೌರವ ಡಾಕ್ಟರೇಟ್ ಪದವಿ “ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಗುತ್ತಿದೆ ಎಂದು ವಿವಿ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ್ ಹೇಳಿದ್ದಾರೆ. ವಿವಿ ಕುಲಾಧಿಪತಿ ರಾಜ್ಯಪಾಲ ವಜುಭಾಯಿ ವಾಲಾ ಅವರ ಅಧ್ಯಕ್ಷತೆಯಲ್ಲಿ ಘಟಿಕೋತ್ಸವ ನಡೆಯಲಿದೆ. ಬೆಂಗಳೂರಿನ ಮಾನವ ತಳಿ ಶಾಸ್ತ್ರ ಕೇಂದ್ರದ ನಿರ್ದೇಶಕ ಡಾ.ಎಚ್.ಜಿ.ಶರತಚಂದ್ರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪಾಲ್ಗೊಳ್ಳಲಿದ್ದಾರೆ ಎಂದರು.
ಇಬ್ಬರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರದಾನ: ಬೆಂಗಳೂರಿನ ನಿವೃತ್ತ ಫ್ರಾಧಾಪ್ಯಕ (ಮೆಡಿಸಿನ್) ಡಾ.ಕುತುಪಾಡಿ ಗೋವಿಂದದಾಸ್ ಮತ್ತು ಅಮೆರಿಕಾದ ಹೃದ್ರೋಗ ತಜ್ಞ ಡಾ.ಗೋವಿಂದರಾಜ್ ಸುಬ್ರಮಣಿ ಅವರಿಗೆ ಗೌರವ ಡಾಕ್ಟರೇಟ್ ಪದವಿ “ಡಾಕ್ಟರ್ ಆಫ್ ಸೈನ್ಸ್’ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಕುಲಸಚಿವ ಡಾ.ಸಿ.ಎಂ.ಮನ್ಸೂರ್, ಕುಲಸಚಿವ (ಮಲ್ಯಮಾಪನ) ಡಾ.ಎಂ.ಕೆ.ರಮೇಶ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police Nabs: 930 “ಡಿಜಿಟಲ್ ಅರೆಸ್ಟ್’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
MUST WATCH
ಹೊಸ ಸೇರ್ಪಡೆ
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.