ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ


Team Udayavani, Aug 30, 2018, 12:35 PM IST

deshadalli.jpg

ಬೆಂಗಳೂರು: “ದೇಶದ ವಿವಿಧೆಡೆ ಮಂಗಳವಾರ ಐದು ಮಂದಿ ಹೋರಾಟಗಾರರನ್ನು ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವುದರ ಸಂಕೇತ. ಇದರ ವಿರುದ್ಧ ದೇಶದ ಜನ ಹೋರಾಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಕೇಂದ್ರದ ಮಾಜಿ ಸಚಿವ ಯಶವಂತ್‌ ಸಿನ್ಹಾ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹೋರಾಟಗಾರರನ್ನು ಬಂಧಿಸುವ ಮೂಲಕ, ದೇಶದಲ್ಲಿ ಅವ್ಯವಸ್ಥೆ ವಿರುದ್ಧ ದನಿ ಎತ್ತುವುದು ಸುರಕ್ಷಿತವಲ್ಲ ಎಂಬ ಸಂದೇಶ ಸಾರಿದಂತಿದೆ. ಬಂಧಿತ ಸಾಮಾಜಿಕ ಕಾರ್ಯಕರ್ತರು ನಿರ್ಭಿಡೆಯಿಂದ ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಅವರ ದನಿ ಅಡಗಿಸಲು ಬಂಧಿಸಲಾಗಿದೆ. ಆ ಮೂಲಕ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಕಿಡಿ ಕಾರಿದರು.

ಅಸಹಿಷ್ಣುತೆ ವಾತಾವರಣ: ದೇಶದಲ್ಲಿ ಅಸಹಿಷ್ಣುತೆ ವಾತಾವರಣ ಸೃಷ್ಟಿಯಾಗಿದ್ದು, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ವ್ಯವಸ್ಥೆ ವಿರುದ್ಧ ಮಾತನಾಡುವವರ ಮೇಲೆ ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ, ಐಟಿ ಇತರೆ ಸಂಸ್ಥೆಗಳಿಂದ ದಾಳಿ ನಡೆಸಿ ಜೈಲಿಗೆ ಕಳುಹಿಸುವ ಪ್ರಯತ್ನವೂ ನಡೆಯುತ್ತದೆ ಎಂದು ಹೇಳಿದರು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಮತ್ತು ತುರ್ತು ಪರಿಸ್ಥಿತಿಯ ವಾತಾವರಣವನ್ನು ಖಂಡಿಸಿ ನಾನು ಬಿಜೆಪಿ ತೊರೆದೆ.

ನಂತರ ಮುಕ್ತವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದೇನೆ. ನಾನು ಮಾಡುವ ಆರೋಪಗಳನ್ನು ವೈಯಕ್ತಿಕ ಕಾರಣಕ್ಕೆ ದೂರಲಾಗುತ್ತಿದೆ ಎಂಬಂತೆ ಬಿಂಬಿಸುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ. ಆದರೆ ನಾನು ಪ್ರಸ್ತಾಪಿಸುವ ವಿಚಾರಗಳಿಗೆ ಉತ್ತರ ನೀಡುತ್ತಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನನ್ನ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಶ್ಮೀರ ಕೈತಪ್ಪುವ ಅಪಾಯ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಮಾನ್ಯತೆ ಹಿಂಪಡೆಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಒಂದೊಮ್ಮೆ ವಿಶೇಷ ಸ್ಥಾನಮಾನ ಹಿಂಪಡೆದರೆ ದೇಶದ ನಿಯಂತ್ರಣದಲ್ಲಿರುವ ಒಂದಿಷ್ಟು ಪ್ರದೇಶವನ್ನೂ ಕಳೆದುಕೊಳ್ಳುವ ಅಪಾಯವಿದೆ.

ಹಾಗಾಗಿ ವಿಶೇಷ ಸ್ಥಾನಮಾನ ಮುಂದುವರಿಸಬೇಕು. ಕಳೆದ ನಾಲ್ಕೂವರೆ ವರ್ಷಗಳಿಂದ ಕೇಂದ್ರ ಸರ್ಕಾರ ಕೈಗೊಂಡಿರುವ ಬಹಳಷ್ಟು ಯೋಜನೆಗಳು ತಪ್ಪು ಹಾದಿಯಲ್ಲಿದ್ದು, ದಿನ ಕಳೆದಂತೆ ಪರಿಸ್ಥಿತಿ ಹದಗೆಡುತ್ತಿದೆ ಎಂದು ಸಿನ್ಹಾ ವಿಷಾದಿಸಿದರು. ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಉಪಸ್ಥಿತರಿದ್ದರು.

ಸಿಬಿಐ; ಮೋದಿ-ಶಾ ತನಿಖಾದಳ: ಸದ್ಯ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣವಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು ರಾಜಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಸಂಸತ್ತು, ನ್ಯಾಯಾಂಗ, ಆರ್‌ಬಿಐ, ಚುನಾವಣಾ ಆಯೋಗ, ಮಾಧ್ಯಮಗಳು ರಾಜಿಯಾಗುತ್ತಿವೆ.

ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭಗಳು ಈ ಪರಿಯಲ್ಲಿ ದುರ್ಬಲವಾಗಿದ್ದನ್ನು ಹಿಂದೆಂದೂ ನಾನು ಕಂಡಿಲ್ಲ. ಎಲ್ಲವೂ ಇಬ್ಬರು ವ್ಯಕ್ತಿಗಳ ಕೇಂದ್ರಿತವಾಗಿದೆ. ತನಿಖಾ ಸಂಸ್ಥೆಗಳು ಅವರ ನಿಯಂತ್ರಣದಲ್ಲೇ ಇದ್ದು, ಸಿಬಿಐ ಎಂದರೆ ಮೋದಿ- ಅಮಿತ್‌ ಶಾ ತನಿಖಾ ದಳ ಎಂಬಂತಾಗಿದೆ ಎಂದು ಯಶವಂತ್‌ ಸಿನ್ಹಾ ವಾಗ್ಧಾಳಿ ನಡೆಸಿದರು.

ವಿದೇಶಾಂಗವಲ್ಲ, ಟ್ವಿಟರ್‌ ಸಚಿವೆ: ಪ್ಯಾರಿಸ್‌ನಲ್ಲಿ ರಫೆಲ್‌ ಒಪ್ಪಂದವಾದರೆ ಆ ಬಗ್ಗೆ ರಕ್ಷಣಾ ಸಚಿವರಿಗೆ ಮಾಹಿತಿ ಇರುವುದಿಲ್ಲ. ದೊಡ್ಡ ಮೊತ್ತದ ನೋಟುಗಳನ್ನು ಅಮಾನ್ಯಗೊಳಿಸಿರುವುದಾಗಿ ಪ್ರಧಾನಿ ಘೋಷಿಸುತ್ತಾರೆ. ಆದರೆ ಹಣಕಾಸು ಸಚಿವರಿಗೆ ಮಾಹಿತಿ ಇರುವುದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್‌ ಪಡೆಯುತ್ತಿದೆ. ಆದರೆ ಗೃಹ ಸಚಿವರಿಗೆ ಮಾಹಿತಿ ಇರುವುದಿಲ್ಲ.

ವಿದೇಶಾಂಗ ಸಚಿವರು ಕೇವಲ ಟ್ವಿಟರ್‌ ಸಚಿವರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ವಿದೇಶಗಳ ಭೇಟಿಯನ್ನೆಲ್ಲಾ ಪ್ರಧಾನಿಯವರೇ ಕೈಗೊಳ್ಳುತ್ತಿದ್ದಾರೆ. ಕೇಂದ್ರದ ಪ್ರಮುಖ ಸಚಿವರೇ ಹೀಗೆ ನಿರ್ಲಕ್ಷ್ಯಕ್ಕೆ ಒಳಗಾಗಿರುವಾಗ ಆಡಳಿತ ಹೇಗಿದೆ ಎಂಬುದನ್ನು ಊಹಿಸಿಕೊಳ್ಳಬಹುದು ಎಂದು ಯಶವಂತ್‌ ಸಿನ್ಹಾ ಹೇಳಿದರು.

ಪ್ರಧಾನಿಗೆ ಸಿನ್ಹಾ ದಶಪ್ರಶ್ನೆ
1. ರಫೆಲ್‌ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ರಕ್ಷಣಾ ಇಲಾಖೆಯ ಖರೀದಿ ನಿಯಮಾವಳಿಗಳು ಪಾಲನೆಯಾಗಿವೆಯೇ? ವಾಯುಪಡೆ, ರಕ್ಷಣಾ ಸಚಿವರ ಗಮನಕ್ಕೆ ತರಲಾಗಿದೆಯೇ?

2. 2015ರ ಏಪ್ರಿಲ್ ನಲ್ಲಿ ಪ್ರಧಾನಿಯವರು ಫ್ರಾನ್ಸ್‌ ಭೇಟಿಗೆ ಎರಡು ದಿನ ಮೊದಲು ವಿದೇಶಾಂಗ ಕಾರ್ಯದರ್ಶಿಗಳು ಹಳೆಯ ಒಡಂಬಡಿಕೆಯನ್ನು ಪ್ರಸ್ತಾಪಿಸಿದ್ದರು. ಹಾಗಿದ್ದರೂ ದಿಢೀರ್‌ ಹೊಸ ಒಡಂಬಡಿಕೆ ಪ್ರಸ್ತಾವ ರೂಪುಗೊಂಡಿದ್ದು ಹೇಗೆ?

3. ಖರೀದಿ ದರ ದಿಢೀರ್‌ ವಿಪರೀತ ಏರಿಕೆಯಾಗಲು ಕಾರಣವೇನು?

4. ಹೊಸ ಒಡಂಬಡಿಕೆಯಲ್ಲಿ ಮೊದಲ ಯುದ್ಧ ವಿಮಾನವನ್ನು 2019ರ ಸೆಪ್ಟೆಂಬರ್‌ನಲ್ಲಿ ಹಾಗೂ ಉಳಿದ ವಿಮಾನಗಳನ್ನು 2022ರ ಮಧ್ಯಭಾಗದಲ್ಲಿ ಪೂರೈಸುವುದಾಗಿ ಪ್ರಸ್ತಾಪಿಸಲಾಗಿದೆ. ಇದರಿಂದ ತ್ವರಿತ ಪೂರೈಕೆ ಇಲ್ಲವೆಂಬುದು ಸ್ಪಷ್ಟವಲ್ಲವೇ?

5. ಒಡಂಬಡಿಕೆ ಮೊತ್ತದ ಶೇ.30ರಷ್ಟು ರಫ್ತು ವ್ಯವಹಾರವನ್ನು ಎಚ್‌ಎಎಲ್‌ಗೆ ನೀಡುವ ಬದಲಿಗೆ ಕೇವಲ 20 ದಿನ ಮೊದಲು ನೋಂದಣಿಯಾದ ಖಾಸಗಿ ಸಂಸ್ಥೆಗೆ ವಹಿಸಲು ಕಾರಣವೇನು?

6. ಯೂರೋ ಫೈಟರ್‌ ಖರೀದಿಯ ಪರಿಷ್ಕೃತ ಪ್ರಸ್ತಾವನೆಯನ್ನು ಪರಿಗಣಿಸದಿರಲು ಕಾರಣವೇನು?

7. 2016ರ ನವೆಂಬರ್‌ನಲ್ಲಿ ರಕ್ಷಣಾ ಇಲಾಖೆ ರಾಜ್ಯ ಸಚಿವರು ಲೋಕಸಭೆಯಲ್ಲಿ ಉತ್ತರ ನೀಡುತ್ತಾ, 36 ರಫೆಲ್ ಯುದ್ಧ ವಿಮಾನ, ಅಗತ್ಯ ಪರಿಕರಗಳು, ಸೇವೆ ಮತ್ತು ಶಸ್ತ್ರಾಸ್ತಗಳ ಖರೀದಿ ಸಂಬಂಧ ಎರಡೂ ದೇಶಗಳ ನಡುವೆ ಒಪ್ಪಂದವಾಗಿದೆ. ಪ್ರತಿ ಯುದ್ಧ ವಿಮಾನಕ್ಕೆ ತಲಾ ಸುಮಾರು 670 ಕೋಟಿ ರೂ. ತಗುಲಿದ್ದು, 2022ರ ಏಪ್ರಿಲ್‌ನಲ್ಲಿ ಪೂರೈಕೆಯಾಗಲಿದೆ ಎಂದು ಹೇಳಿದ್ದರು. ಹಾಗಿದ್ದರೆ, ಅಗತ್ಯ ಪರಿಕರಗಳು, ಸೇವೆ ಮತ್ತು ಶಸ್ತ್ರಾಸ್ತಗಳು ಎಂದರೆ ಏನು?

8. ರಫೆಲ್ ಯುದ್ಧ ವಿಮಾನ ಖರೀದಿ ಕುರಿತ ಒಪ್ಪಂದ ಜಗಜ್ಜಾಹೀರಾಗಿದದರೂ ಆ ಬಗ್ಗೆ ಮಾಹಿತಿ ಬಹಿರಂಗಪಡಿಸದೆ ರಹಸ್ಯ ವಿಷಯ ಎಂದು ಸರ್ಕಾರ ಹೇಳುತ್ತಿರಲು ಕಾರಣವೇನು?

9. ವಾಯುಪಡೆಯ ಒಂದು ತಂಡದಲ್ಲಿ (ಸ್ಕ್ವಾಡ್ರನ್‌) 16 ಯುದ್ಧ ವಿಮಾನದ ಜತೆಗೆ ತುರ್ತು ಬಳಕೆಗೆ ನಾಲ್ಕು ಹೆಚ್ಚುವರಿ ವಿಮಾನಗಳಿರುತ್ತವೆ. ಆದರೆ ಎರಡು ಸ್ಕ್ವಾಡ್ರನ್‌ಗಿಂತಲೂ ಕಡಿಮೆಯಿರುವ 36 ಮ್ಯಾಜಿಕ್‌ ಸಂಖ್ಯೆಯ ಉದ್ದೇಶ ಗೊತ್ತಾಗುತ್ತಿಲ್ಲ. ಇದರಿಂದ ಭಾರತೀಯ ವಾಯಪಡೆಯ ಬಲ ಹೆಚ್ಚುವುದೇ?

10. ಯುದ್ಧ ವಿಮಾನಗಳ ದುರಸ್ತಿ, ನಿರ್ವಹಣೆಗೆ ಡಸಾಲ್ಟ್ ಕಂಪನಿಯೊಂದಿಗೆ ಸೇವಾ ಒಪ್ಪಂದವಾಗಿದೆ. ಅದರಂತೆ ದುರಸ್ತಿ ಹಾಗೂ ನಿರ್ವಹಣಾ ಅವಧಿ ಹಾಗೂ ವೆಚ್ಚದ ವಿವರವೇನು? ವಿಮಾನದ ಅಂದಾಜು ಜೀವಮಾನ ನಿರ್ವಹಣೆ, ದುರಸ್ತಿ ವೆಚ್ಚದ ಅಂದಾಜು ಏನು? ಇದು ಸಹ ರಹಸ್ಯ ವಿಷಯವೆಂಬ ಕಾರಣಕ್ಕೆ ಜನರಿಗೆ ಮಾಹಿತಿ ನೀಡದೆ ಗೌಪ್ಯವಾಗಿಡಲಾಗಿದೆಯೇ?  

ಫ್ರಾನ್ಸ್‌ನೊಂದಿಗಿನ ರಫೆಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ. ಈ ಬಗ್ಗೆ ಮಹಾಲೇಖಪಾಲರಿಂದ “ಫಾರೆನ್ಸಿಕ್‌ ಆಡಿಟ್‌’ ನಡೆಸಿ ಸತ್ಯಾಂಶ ಬಯಲಿಗೆಳೆಯಬೇಕು.
-ಯಶವಂತ್‌ ಸಿನ್ಹಾ, ಕೇಂದ್ರದ ಮಾಜಿ ಸಚಿವ

ಟಾಪ್ ನ್ಯೂಸ್

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

Bengaluru: ರೋಡ್‌ ರೇಜ್‌: ಕಾರಿನ ಬಾನೆಟ್‌ ಮೇಲೆ ಹತ್ತಿ ಯುವಕರ‌ ಪುಂಡಾಟ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.