ಅಂತರ್ಜಾಲದಲ್ಲಿ ಕಾಣದ ಕೈಗಳ ಸೈಬರಾಟ
Team Udayavani, Feb 25, 2019, 6:31 AM IST
ಬೆಂಗಳೂರು: ಸುಧಾರಿತ ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರಗಳನ್ನೇ ಬಂಡವಾಳ ಮಾಡಿಕೊಂಡು ಅಪರಾಧ ಕೃತ್ಯ ಎಸಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜಧಾನಿಯಲ್ಲಿ 2019ರ ಆರಂಭದ 52 ದಿನಗಳಲ್ಲೇ 1,200 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿವೆ. 2017 ಮತ್ತು 18ರ ಅಂಕಿ ಅಂಶಗಳಿಗೆ ಹೋಲಿಸಿದರೆ, ವರ್ಷಾರಂಭದ ಸೈಬರ್ ಅಪರಾಧ ಸಂಖ್ಯೆ ಆತಂಕ ಹುಟ್ಟಿಸುತ್ತದೆ!
ಬೆಂಗಳೂರಿನಲ್ಲಂತೂ ಸೈಬರ್ ವಂಚನೆ ಜಾಲ ವಿಸ್ತರಣೆಯಾಗುತ್ತಲೇ ಇದೆ. ಕಳೆದ ಮೂರು ವರ್ಷದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಸೈಬರ್ ಪ್ರಕರಣಗಳು ದಾಖಲಾಗಿವೆ. ದಿನಕ್ಕೆ 25ರಿಂದ 30 ಜನ ಸೈಬರ್ ವಂಚನೆಗೊಳಗಾಗುತ್ತಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ.
ಸಾರ್ವಜನಿಕರ ಅಮಾಯಕತೆ, ಆಸೆ, ತಂತ್ರಜ್ಞಾನ ಬಳಕೆ ಇತಿಮಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚನೆ ಜಾಲ ಊಹೆಗೆ ನಿಲುಕದ ಸ್ಥಿತಿಗೆ ತಲುಪಿದೆ. ವಂಚನೆಯನ್ನೇ ಉದ್ಯೋಗವನ್ನಾಗಿಸಿಕೊಂಡಿರುವ ವಂಚಕರು ನಾನಾ ರೀತಿಯಲ್ಲಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ.
ಕೇವಲ ಬ್ಯಾಂಕ್ ಅಥವಾ ಓಟಿಪಿ ನಂಬರ್ ಪಡೆದು ವಂಚಿಸುವ ಪ್ರಕರಣಗಳು ಮಾತ್ರವಲ್ಲದೆ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಮ್ಯಾಟ್ರಿಮೋನಿಯಲ್, ಓಎಲ್‌ಎಕ್ಸ್ ವ್ಯವಹಾರ, ಉದ್ಯೋಗ ಕೊಡಿಸುವ ನೆಪ, ಡೇಟಿಂಗ್ ವೆಬ್‌ಸೈಟ್, ಲಾಟರಿ, ಹರ್ಬಲ್ಸ್ ಸೀಡ್ಸ್/ಆಯಿಲ್, ಇ-ಮೇಲ್ ಸ್ನೂಪಿಂಗ್, ಕೆಲ ಸಾಮಾಜಿಕ ಜಾಲತಾಣಗಳು ಹಾಗೂ ಇತರೆ ಮಾರ್ಗಗಳ ಮೂಲಕವೂ ವಂಚನೆಗಳು ನಡೆಯುತ್ತವೆ.
ಓಟಿಪಿ ಪಡೆದು ವಂಚನೆ: ಬ್ಯಾಂಕ್ ಮ್ಯಾನೇಜರ್ ಅಥವಾ ಸಿಬ್ಬಂದಿ ಹೆಸರಿನಲ್ಲಿ ಮೊಬೈಲ್‌ಗೆ ಕರೆ ಮಾಡುವ ವ್ಯಕ್ತಿ ಹಿಂದಿ ಅಥವಾ ಇಂಗ್ಲೀಷ್‌ನಲ್ಲಿ ಮಾತನಾಡುತ್ತಾರೆ. ಬಳಿಕ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಸರಿ ಮಾಡಬೇಕು, ಆಧಾರ್ ಲಿಂಕ್ ಮಾಡಬೇಕು ಎಂಬಿತ್ಯಾದಿ ಕಾರಣ ನೀಡಿ, ನಿಮ್ಮ ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿ ಪಡೆದು ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ.
ಜಸ್ಟ್ ಡಯಲ್ ಹಾಗೂ ಇತರೆ ಮಾರ್ಗಗಳ ಮೂಲಕ ನಿಮ್ಮ ಮೊಬೈಲ್ ನಂಬರ್ ಪಡೆಯುವ ವ್ಯಕ್ತಿಗಳು, ನಿಮ್ಮೊಂದಿಗೆ ವ್ಯವಹಾರ ಮಾಡಲು ಮುಂದಾಗಿದ್ದೇವೆ. ನಿಮ್ಮನ್ನು ಭೇಟಿ ಮಾಡಬೇಕೆಂದು ಕೋರುತ್ತಾರೆ. ಇದಕ್ಕೆ ಸಮ್ಮತಿಸಿದರೆ ಕೂಡಲೇ ನೀವಿರುವ ಸ್ಥಳಕ್ಕೆ ಬಂದು ಕೆಲ ಪ್ರಕ್ರಿಯೆ ಮುಗಿಸುವ ನೆಪದಲ್ಲಿ ನಿಮ್ಮ ಮೊಬೈಲ್ ಪಡೆದು ಖಾಸಗಿ ಮಾಹಿತಿ ಪಡೆಯುತ್ತಾರೆ.
ಅಲ್ಲದೆ, ಆ್ಯಪ್‌ವೊಂದರ ಮೂಲಕ ಪ್ರತಿ ಎಸ್‌ಎಂಎಸ್‌ಗಳನ್ನು ತಮ್ಮ ಮೊಬೈಲ್‌ನಲ್ಲಿ ನೋಡುವ ಅವಕಾಶ ಕಲ್ಪಿಸಿಕೊಂಡು ಮತ್ತೂಮ್ಮೆ ಬರುವುದಾಗಿ ಹೇಳಿ ಹೋಗುತ್ತಾರೆ. ಬಳಿಕ ಒಂದೆರಡು ದಿನಗಳಲ್ಲಿ ಮೊಬೈಲ್‌ಗೆ ಹತ್ತಾರು ಓಟಿಪಿ ನಂಬರ್‌ಗಳು ಬರುತ್ತವೆ. ಈ ಮೂಲಕ ಖಾತೆಯಲ್ಲಿರುವ ಹಣವನ್ನು ಸಂಪೂರ್ಣವಾಗಿ ವರ್ಗಾವಣೆ ಮಾಡಿಕೊಳ್ಳುತ್ತಾರೆ.
ಇ-ಮೇಲ್ ಸ್ನೂಪಿಂಗ್
-ಎರಡು ಕಂಪೆನಿಗಳು ಇ-ಮೇಲ್ ಮೂಲಕ ನಡೆಸುವ ವ್ಯವಹಾರ ಅಧ್ಯಯನ.
-ಕಂಪೆನಿ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ.
-ಹೊಸ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವಂತೆ ಕೋರಿಕೆ.
-ಇದನ್ನು ನಂಬುವ ಮತ್ತೂಂದು ಕಂಪೆನಿಯಿಂದ ಲಕ್ಷಾಂತರ ರೂ. ಹಣ ವರ್ಗಾವಣೆ.
ಆನ್‌ಲೈನ್ ಸಾಲ
-ಸಾಮಾಜಿಕ ಜಾಲತಾಣ/ ಸಂದೇಶ ರೂಪದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಂದೇಶ.
-ಗುರುತಿನ ಚೀಟಿ, ಎಟಿಎಂ ಕಾರ್ಡ್, ಬ್ಯಾಂಕ್ ಖಾತೆ, ಪಾನ್‌ಕಾರ್ಡ್ ಹಾಗೂ ಇತರೆ ದಾಖಲೆಗಳ ಕೋರಿಕೆ.
-ನಂತರ ಕೆಲವೊಂದು ಪ್ರಕ್ರಿಯೆ ಇದೆ ಎಂದು ನಂಬಿಸಿ ಹಣ ವಸೂಲಿ.
ಸಿಮ್ ಸ್ವೈಪಿಂಗ್
-ಆನ್‌ಲೈನ್ ಬ್ಯಾಂಕಿಂಗ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಪಡೆಯುವ ವಂಚಕರು.
-ಗ್ರಾಹಕರ ಹೆಸರಿನಲ್ಲಿ ಭಾವಚಿತ್ರ ಹಾಕಿ ನಕಲಿ ದಾಖಲೆಗಳನ್ನು ಸೃಷ್ಟಿ.
– ರಿಚಾರ್ಜ್ ಸೆಂಟರ್‌ಗೆ ಹೋಗಿ ಹೊಸ ಸಿಮ್ ಗಳಿಕೆ.
– ಬ್ಯಾಂಕ್ ಖಾತೆಯಿಂದ ಇತರೆ ಇ-ವ್ಯಾಲೆಟ್‌ಗಳಿಗೆ ಹಣ ವರ್ಗಾವಣೆ.
-ಬಳಿಕ ನಿಗದಿತ ಸಿಮ್‌ಕಾರ್ಡ್‌ಗಳನ್ನು ವಂಚಕರಿಂದಲೇ ಬ್ಲಾಕ್.
ಮ್ಯಾಟ್ರಿಮೋನಿಯಲ್/ಗಿಫ್ಟ್
-ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆ ತೆರೆಯುವ ವಂಚಕರು.
-ವೆಬ್‌ಸೈಟ್‌ಗಳಲ್ಲಿರುವ ಮಹಿಳೆಯರ ಪ್ರೊಫೈಲ್‌ಗಳನ್ನು ಗಮನಿಸಿ ಕೆಲವರೊಂದಿಗೆ ಚಾಟಿಂಗ್ ಮಾಡುತ್ತಾ ಗೆಳೆತನ.
-ಕೆಲ ದಿನಗಳ ಬಳಿಕ ಉಡುಗೊರೆ ಕಳುಹಿಸಿ ಸ್ವೀಕರಿಸುವಂತೆ ಕೋರಿಕೆ.
-ಬೇರೊಂದು ನಂಬರ್‌ನಿಂದ ಕರೆ ಮಾಡಿ, ಉಡುಗೊರೆ ಬಂದಿದ್ದು, ಇದಕ್ಕೆ ಸೀಮಾ ಸುಂಕ ಪಾವತಿಸಬೇಕೆಂದು ಹೇಳಿ ಹಣವನ್ನು ವರ್ಗಾವಣೆ.
ಎಟಿಎಂ ಸ್ಕಿಮ್ಮಿಂಗ್
-ಎಟಿಎಂ ಕೇಂದ್ರ ಅಥವಾ ಮಾಲ್ ಹಾಗೂ ಇತರೆಡೆ ವಂಚನೆ.
-ಸ್ವೈಪಿಂಗ್ ಯಂತ್ರ, ಎಟಿಎಂ ಕೇಂದ್ರದಲ್ಲಿ ಕಾರ್ಡ್ ಹಾಕುವ ಜಾಗದಲ್ಲಿ ಸ್ಕಿಮರ್, ಪಿನ್ ಒತ್ತುವ ಸ್ಥಳದಲ್ಲಿ ಕೀ ಲಾಗರ್ ಮತ್ತು ಪಿನ್ ಕ್ಯಾಮೆರಾ ಅಳವಡಿಕೆ.
-ಕಾರ್ಡ್‌ನ ಸಂಪೂರ್ಣ ಮಾಹಿತಿ ಪಡೆದು ವಂಚನೆ.
ಉದ್ಯೋಗದ ಆಮಿಷ
-ಉದ್ಯೋಗ ಕೊಡಿಸುವ ನೆಪದಲ್ಲಿ ಜಾಬ್ ವೆಸ್‌ಸೈಟ್‌ಗಳಲ್ಲಿ ಹೆಸರು ನೋಂದಣಿ.
-ನಿರ್ದಿಷ್ಟ ಮೊಬೈಲ್ ನಂಬರ್‌ಗೆ ಕರೆ ಮಾಡಿ ಸ್ವ-ವಿವರ ಯಾಚನೆ.
-ವಿದೇಶಿ ಕಂಪೆನಿಯಲ್ಲಿ ಕೆಲಸ ಪಡೆಯಲು ಅರ್ಹರಾಗಿದ್ದಿರಿ. ಕೂಡಲೇ ಮೊಬೈಲ್ ನಂಬರ್, ದಾಖಲೆಗಳನ್ನು ಆನ್‌ಲೈನ್ ಮೂಲಕ ರವಾನಿಸುವಂತೆ ಕೋರಿಕೆ.
-ಕೆಲ ಪ್ರಕ್ರಿಯೆಗೆ ಶುಲ್ಕ ಪಾವತಿಸಬೇಕೆಂದು ವಂಚನೆ.
-ಮಹಿಳೆಯರಿಗೆ ಆನ್‌ಲೈನ್ ಸಂದರ್ಶನದ ನೆಪದಲ್ಲಿ ಕೆಲವೊಂದು ಅಸಂಬದ್ಧ ಪ್ರಶ್ನೆ.
-ಕೆಲಬಾರಿ ಅವರ ನಗ್ನ ಚಿತ್ರ ರೆಕಾರ್ಡ್ ಮಾಡಿ ಬ್ಲಾಕ್‌ವೆುಲ್.
ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾದ ಅಂಶಗಳು
-ಅಪರಿಚಿತ ವ್ಯಕ್ತಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ನಿರ್ಲಕ್ಷ್ಯ ತೋರಬೇಕು.
-ಬ್ಯಾಂಕ್ ಖಾತೆ ವಿವರ ಹಂಚಿಕೊಳ್ಳದಿರುವುದು.
-ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರನ್ನು ತಕ್ಷಣ ನಂಬಬಾರದು, ಸ್ಪಂದಿಸಬಾರದು.
-ಖಾಸಗಿ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
-ದುಬಾರಿ ಮೌಲ್ಯದ ಉಡುಗೊರೆ ಆಮಿಷ ಎಂಬುದು ನಕಲಿ ಎಂಬುದು ನೆನಪಿರಲಿ.
-ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಶೇರ್ ಮಾಡಬಾರದು, ತಮ್ಮ ಮೊಬೈಲ್ ನಂಬರ್ ನೊಂದಾಯಿಸದಿರುವುದು ಸೂಕ್ತ.
-ಎಟಿಎಂ ಕಾರ್ಡ್ ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.
-ಮಹಿಳಾ ಉದ್ಯೋಗಕಾಂಕ್ಷಿಗಳು ಯಾವುದೇ ಕಾರಣಕ್ಕೂ ಆನ್‌ಲೈನ್ ಮೂಲಕ ಅಸಂಬದ್ಧ ಸಂದರ್ಶನಕ್ಕೆ ಆಸ್ಪದ ನೀಡಬಾರದು.
-ಸೈಬರ್ ವಂಚಕರ ಕುರಿತು ಸಾರ್ವಜನಿಕರು ನಿರ್ಲಕ್ಷ್ಯಮಾಡಬಾರದು.
-ಮೊಬೈಲ್ ಹಾಗೂ ಅದರೊಳಗಿರುವ ಆ್ಯಪ್‌ಗ್ಳ ಬಳಕೆ ಬಗ್ಗೆ ಜಾಗೃತರಾಗಿರಬೇಕು.
-ಬ್ಯಾಂಕ್ ವ್ಯವಹಾರದ ಕುರಿತು ಸಂಪರ್ಕಿಸುವ ವ್ಯಕ್ತಿಗಳ ಬಗ್ಗೆ ಅನುಮಾನವಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆ, ಬ್ಯಾಂಕ್‌ನ ಟೋಲ್‌ಫ್ರಿ ನಂಬರ್‌ಗೆ ಕರೆ ಮಾಡಿ ಖಚಿತ ಪಡಿಸಿಕೊಳ್ಳುವುದು ಉತ್ತಮ.
ಮೂರು ವರ್ಷದ ಪ್ರಕರಣ
-2017-2023
-2018 -5,036
-2019-1,200(ಫೆ.21ರವರೆಗೆ)
ಆನ್‌ಲೈನ್ ವಂಚನೆ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್, ಎಫ್ಎಂ ರೇಡಿಯೋಗಳ ಮೂಲಕವೂ ಸಾರ್ವಜನಿಕ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಅಪರಿಚಿತ ವ್ಯಕ್ತಿಗಳು ಕರೆ ಮಾಡಿದಾಗ ಎಚ್ಚರಿಕೆಯಿಂದ ವ್ಯವಹರಿಸಬೇಕು.
-ಅಲೋಕ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ, ಸಿಸಿಬಿ
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್
Fraud Case: ಟೆಕಿಗೆ ವಂಚನೆ ಕೇಸ್; ಆರೋಪಿ ಪತ್ತೆಗೆ ತಂಡ ರಚನೆ
New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ
Fraud case: ಚಿನ್ನಾಭರಣ ವಂಚನೆ ಕೇಸ್; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.