ಬಗೆಹರಿಯುತ್ತಿಲ್ಲ ಕಸ ವಿಲೇವಾರಿ ಸಮಸ್ಯೆ
Team Udayavani, Aug 2, 2019, 8:20 AM IST
ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಇನ್ನೂ ಬಗೆಹರಿಯುತ್ತಿಲ್ಲ. ಕಳೆದ ಒಂದು ವಾರದಿಂದ ಪ್ರತಿ ವಾರ್ಡ್‌ನಲ್ಲಿ ನಿತ್ಯ ಒಂದು ಲೋಡ್ ಕಸ ವಿಲೇವಾರಿಯಾಗದೆ ಅಲ್ಲಲ್ಲಿ ಕಸದ ರಾಶಿಗಳು ನಿರ್ಮಾಣವಾಗಿದೆ. ವಿಲೇವಾರಿಯಾಗದೆ ಉಳಿದಿರುವ ಕಸ ಎರಡು ದಿನಗಳಲ್ಲಿ ಸಂಸ್ಕರಣಾ ಘಟಕಗಳಿಗೆ ಸಾಗಿಸುವುದಾಗಿ ಹೇಳಿದ್ದ ಬಿಬಿಎಂಪಿ ಹೇಳಿದಷ್ಟೇ ವೇಗವಾಗಿ ಕೆಲಸ ಮಾಡುತ್ತಿಲ್ಲ.
ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ನಿರ್ಮಾಣವಾಗಿದ್ದ ಕಸದ ರಾಶಿಗಳು ಹಾಗೆಯೇ ಇವೆ. ದಿನದಿಂದ ದಿನಕ್ಕೆ ಕಸದ ರಾಶಿ ಮಾತ್ರ ಬೆಳೆಯುತ್ತಿದೆ.ಆದರೆ ಇದರ ವಿಲೇವಾರಿ ಮಾತ್ರ ಕುಂಟಿತವಾಗಿ ಸಾಗುತ್ತಿದೆ.ಕೆಆರ್ ಮಾರ್ಕೆಟ್ ನಲ್ಲಿ ನಿರ್ಮಾಣವಾಗಿರುವ ಕಸ ರಾಶಿ ಈ ವರೆಗೆ ಖಾಲಿ ಮಾಡಿಲ್ಲ.ಇದರಿಂದಾಗಿ ಮಾರುಕಟ್ಟೆಗೆ ಬರುವ ಗ್ರಾಹಕರು ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶೇಷಾದ್ರಿಪುರಂ, ಮಲ್ಲೇಶ್ವರಂ, ನಾಯಂಡ ಹಳ್ಳಿ, ಯಶವಂತಪುರ, ಶಿವಾಜಿನಗರ, ಕಲಾಸಿಪಾಳ್ಯ, ಹಲಸೂರು, ಇಂದಿರಾನಗರ, ವಿಜಯನಗರ, ಜಯನಗರ,ಬಿಟಿಎಂ ಲೇಔಟ್ ಸೇರಿದಂತೆ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಕಸದ ರಾಶಿ ಹೆಗೆಯೇ ಇದ್ದು,ಪಾಲಿಕೆ ಮಾತ್ರ ವಿಲೇವಾರಿ ಬಗ್ಗೆ ಯಾವುದೇ ಆಸಕ್ತಿ ವಹಿಸುತಿಲ್ಲ.ಇದರಿಂದಾಗಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ ನಿವಾಸಿಗಳು.
ಇನ್ನು ಎರಡು ದಿನಗಳಲ್ಲಿ ನಗರದ ಕಸದ ರಾಶಿಗಳನ್ನು ಖಾಲಿ ಮಾಡುವುದಾಗಿ ಹೇಳಿದ್ದ ಪಾಲಿಕೆ ಇನ್ನಾದರು ತನ್ನ ಕೆಲಸದ ವೇಗವನ್ನು ಹೆಚ್ಚಿಸಿಲ್ಲ.ಇನ್ನೆರಡು ದಿನ ಇದೇ ರೀತಿ ಮುಂದುವರೆದರೆ ನಗರದ ಎಲ್ಲಾ ಮೂಲೆಗಳಲ್ಲಿ ಬ್ಲಾಕ್ ಸ್ಪಾಟ್ ಗಳು ತಲೆ ಎತ್ತುವುದರಲ್ಲಿ ಸಂಶಯವಿಲ್ಲ ಎನ್ನುತಿದ್ದಾರೆ ಪರಿಸರ ತಜ್ಞ ಹರೀಶ್.
ಪ್ರತಿನಿತ್ಯ ನಗರದಲ್ಲಿ 4500 ಟನ್ ಕಸ ಉತ್ಪತ್ತಿಯಾಗುತ್ತಿದ್ದು,ಇದರಲ್ಲಿ 2500-3000 ಟನ್ ಮಾತ್ರ ಈಗ ವಿಲೇವಾರಿ ಆಗುತ್ತಿದೆ.ಕಳೆದ ವಾರದಿಂದ ಪ್ರತಿ ವಾರ್ಡ್ ನಲ್ಲಿ ನಿತ್ಯ ಒಂದು ಕಾಂಪ್ಯಾಕ್ ಕಸ ಹಾಗೆಯೇ ಉಳಿಯುತ್ತಿದೆ.ಈ ರೀತಿ ಉಳಿದಿರುವ ಕಸ ಸರಿಸುಮಾರು 10ಸಾವಿರ ಟನ್ ಗೂ ಅಧಿಕವಾಗಿದೆ ಎಂದು ಅಭಿಪ್ರಾಯ ಪಡುತಿದ್ದಾರೆ ನಗರ ತಜ್ಞ ಶ್ರೀಪಾದ್ ಹರಿ.
ನಗರದ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳ್ಳಳ್ಳಿ ಕ್ವಾರಿ ಸಂಸ್ಕರಣಾ ಘಟಕ ಸಿದ್ಧವಾಗಿದೆ. ಹಾಗಾಗಿ ಇನ್ನೆರಡು ದಿನಗಳಲ್ಲಿ ನಗರ ಸಂಪೂರ್ಣವಾಗಿ ಕಸದಿಂದ ಮುಕ್ತಿ ಹೊಂದಲಿದೆ. ● ಗಂಗಾಂಬಿಕೆ, ಬಿಬಿಎಂಪಿ ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.