ನೆರೆ ಸಂತ್ರಸ್ತರಿಗೆ ನಗರ ಪೊಲೀಸರ ನೆರವು
Team Udayavani, Aug 12, 2019, 3:05 AM IST
ಬೆಂಗಳೂರು: ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಶಿವಮೊಗ್ಗ, ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳ ಸಂತ್ರಸ್ತರತ್ತ ರಾಜಧಾನಿ ಪೊಲೀಸರು ನೆರವಿನ ಹಸ್ತ ಚಾಚಿದ್ದಾರೆ. ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೀಡುವಂತೆ ಚಿಕ್ಕಜಾಲ ಠಾಣೆ ಪೊಲೀಸರು ಭಾನುವಾರ ಮಾಡಿರುವ ಮನವಿಗೆ ಓಗೊಟ್ಟ ಸಾರ್ವಜನಿಕರು, ಅಕ್ಕಿ, ರಾಗಿ, ಗೋಧಿ ಹಿಟ್ಟು ಮತ್ತಿತರ ಹಾರ ಸಾಮಗ್ರಿ, ಅಗತ್ಯ ವಸ್ತುಗಳನ್ನು ಠಾಣೆಗೆ ತಲುಪಿಸುತ್ತಿದ್ದಾರೆ.
ನೆರೆ ಸಂತ್ರಸ್ತರಿಗೆ ತುರ್ತಾಗಿ ಬೇಕಾಗಿರುವ ಹಾಸಿಗೆ, ಹೊದಿಕೆ, ಒಳ ಉಡುಪು, ಸ್ಯಾನಿಟರಿ ಪ್ಯಾಡ್, ಮಹಿಳೆ, ಪುರುಷ ಹಾಗೂ ಮಕ್ಕಳ ಉಡುಪು, ಸ್ವೆಟರ್ ಸೇರಿ ಅಗತ್ಯ ಸಾಮಗ್ರಿಗಳನ್ನು ನೀಡಲು ಪೊಲೀಸರು ಮನವಿ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ಹಲವು ಮಂದಿ ಸಾರ್ವಜನಿಕರು 40 ಮೂಟೆಗೂ ಅಧಿಕ ಅಕ್ಕಿ, 4 ಮೂಟೆ ರಾಗಿ, ಬಿಸ್ಕತ್ತು ಸೇರಿ ಎಲ್ಲ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.
ಡಿಸಿಪಿ ಹಾಗೂ ಎಸಿಪಿ ಮಾರ್ಗದರ್ಶನದಲ್ಲಿ ಠಾಣೆ ಸಿಬ್ಬಂದಿಯ ಸಹಕಾರದಿಂದ ಸಂಗ್ರಹವಾಗಿರುವ ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ಹಂತ ಹಂತವಾಗಿ ತಲುಪಿಸಲಾಗುತ್ತದೆ ಎಂದು ಚಿಕ್ಕಜಾಲ ಠಾಣೆಯ ಇನ್ಸ್‌ಪೆಕ್ಟರ್ ಟಿ.ಮುತ್ತುರಾಜ್ ತಿಳಿಸಿದರು.
ಹಣ ಸ್ವೀಕರಿಸುವುದಿಲ್ಲ: ಸಂತ್ರಸ್ತರ ನೆರವಿಗೆ ಅಗತುವಿರುವ ವಸ್ತುಗಳನ್ನು ಸಾರ್ವಜನಿಕರು ತಂದು ಠಾಣೆಗೆ ಕೊಡಬಹುದು. ಅವುಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸಲಾಗುತ್ತದೆ. ಆದರೆ, ದಾನಿಗಳಿಂದ ಹಣ ಸ್ವೀಕರಿಸುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.