ಮೂತ್ರ ವಿಸರ್ಜನೆ ಉಚಿತ; ಆದರೂ ಸುಲಿಗೆ ಖಚಿತ


Team Udayavani, Sep 4, 2018, 12:19 PM IST

mootra.jpg

ಬೆಂಗಳೂರು: ಮೇಲ್ನೋಟಕ್ಕೆ ಇದು ನಿಮಗೆ ಚಿಲ್ಲರೆ ವ್ಯವಹಾರ ಅನಿಸಿದರೂ, ವಾಸ್ತವವಾಗಿ ಇಲ್ಲಿ ನಡೆಯುತ್ತಿರುವುದು ಲಕ್ಷಗಟ್ಟಲೆ ಸುಲಿಗೆ. ಇದು ಶೌಚಾಲಯಗಳ ಸುಲಿಗೆ. ನಿತ್ಯ ಪ್ರಯಾಣಿಕರು ಬಸ್‌ಗಳಲ್ಲಿ ಚಿಲ್ಲರೆಗಾಗಿ ನಿರ್ವಾಹಕರೊಂದಿಗೆ ಜಗಳ ಕಾಯುತ್ತಾರೆ. ಆದರೆ, ಅದೇ ಪ್ರಯಾಣಿಕರು ತಮಗೆ ಅರಿವಿಲ್ಲದಂತೆ ಅದೇ ನಿಲ್ದಾಣಗಳ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಮಾಡಲು ಚಿಂತಿಸದೇ ಚಿಲ್ಲರೆ ಕೊಡುತ್ತಾರೆ. ಹೀಗೆ ವಸೂಲು ಮಾಡಿದ ಚಿಲ್ಲರೆ ಒಟ್ಟಾಗಿಸಿದರೆ ತಿಂಗಳಿಗೆ ಏಳು ಲಕ್ಷ ರೂ. ದಾಟುತ್ತದೆ!

ಸುಲಿಗೆ ಹೆಸರು ಸ್ವಚ್ಛತೆ: ಈ ಸುಲಿಗೆಗೆ ಗುತ್ತಿಗೆದಾರರು ಇಟ್ಟ ಹೆಸರು “ಸ್ವಚ್ಛತೆ’! ನಗರದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿನ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಉಚಿತವಾಗಿದೆ. ಮಲ ವಿಸರ್ಜನೆಗೆ ಮಾತ್ರ 5 ರೂ. ನಿಗದಿಪಡಿಸಲಾಗಿದೆ. ಆದರೆ, ಗುತ್ತಿಗೆ ಪಡೆದವರು ಸ್ವಚ್ಛತೆ ಮತ್ತು ನೀರಿನ ನೆಪದಲ್ಲಿ ಬಳಕೆದಾದರರಿಂದ ಮೂತ್ರ ವಿಸರ್ಜನೆಗೆ 2 ರೂ. ಹಾಗೂ ಮಲ ವಿಸರ್ಜನೆಗೆ 10 ರೂ. ವಸೂಲಿ ಮಾಡುತ್ತಿದ್ದಾರೆ. ನಗರದಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಗೆ ಸೇರಿದ ಸುಮಾರು 40 ಶೌಚಾಲಗಳಿದ್ದು, ನಿತ್ಯ ಹತ್ತು ಸಾವಿರ ಜನ ಬಳಕೆ ಮಾಡುತ್ತಿದ್ದಾರೆ.

ಹೀಗೆ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿರುವ ಹಣ ನಿತ್ಯ 25ರಿಂದ 30 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಅಂದರೆ, ಮಾಸಿಕ ಏಳರಿಂದ ಏಳೂವರೆ ಲಕ್ಷ ರೂ.! ಹೀಗೆ ಹೆಚ್ಚುವರಿ ವಸೂಲಿಗೆ ಸಂಬಂಧಿಸಿದಂತೆ ದೂರು ನೀಡಿದರೆ, ಅದಕ್ಕೆ ವಿಧಿಸುವ ದಂಡ ಗರಿಷ್ಠ 100ರಿಂದ 200 ರೂ. ಅಲ್ಲದೆ, ಯಾರೂ ದೂರು ನೀಡುವುದಿಲ್ಲ. ಹಾಗಾಗಿ, ನಿತ್ಯ ಸಾವಿರಾರು ರೂ. ಎಣಿಸುವ ಗುತ್ತಿಗೆದಾರರಿಗೆ ದಂಡ ಲೆಕ್ಕಕ್ಕಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಕೊರತೆ ಹಾಗೂ ಮೇಲಿನ ಹಂತದಲ್ಲಿ ಕಟ್ಟುನಿಟ್ಟಿನ ಕ್ರಮದ ಅವಶ್ಯಕತೆ ಇದೆ ಎಂದು ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್‌ ನಿಲ್ದಾಣ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸ್ವಚ್ಛತೆಯೂ ಇಲ್ಲ: ಕೆಎಸ್‌ಆರ್‌ಟಿಸಿ ವ್ಯಾಪ್ತಿಗೆ ಬರುವ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ ಹಾಗೂ ಪೀಣ್ಯ ಸ್ಯಾಟಲೈಟ್‌ ಬಸ್‌ ನಿಲ್ದಾಣ ಹಾಗೂ ಬಿಎಂಟಿಸಿ ವ್ಯಾಪ್ತಿಗೆ ಬರುವ ಮೆಜೆಸ್ಟಿಕ್‌, ಯಶವಂತಪುರ, ಶಾಂತಿನಗರ, ವಿಜಯನಗರ, ಶಿವಾಜಿನಗರ ಸೇರಿದಂತೆ ನಗರದ ಎಲ್ಲಾ ಬಿಎಂಟಿಸಿ ನಿಲ್ದಾಣಗಳಲ್ಲಿ ಸಾರಿಗೆ ಸಂಸ್ಥೆಯ ವತಿಯಿಂದಲೇ ಪ್ರಯಾಣಿಕರ ಅನುಕೂಲಕ್ಕಾಗಿ ಶೌಚಾಲಯಗಳನ್ನು ಕಟ್ಟಿಸಿ ಅವುಗಳ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಸ್ವಚ್ಛತೆ ಆಯಾ ಗುತ್ತಿಗೆದಾರರ ಜವಾಬ್ದಾರಿ ಎಂದೂ ಗುತ್ತಿಗೆ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಆದರೆ, ಗುತ್ತಿಗೆ ಪಡೆದವರು ಶೌಚಾಲಯಗಳನ್ನು ಸ್ವಚ್ಛವಾಗಿಡದಿದ್ದರೂ, ನೀರು ಹಾಗೂ ಸ್ವಚ್ಛತೆಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. 

ಹಣ ಕೊಟ್ಟರಷ್ಟೇ ಪ್ರವೇಶ: ಬಸ್‌ ನಿಲ್ದಾಣದ ಶೌಚಾಲಯಗಳಲ್ಲಿ ಹಣ ಕೊಟ್ಟ ನಂತರವೇ ಪ್ರವೇಶ. ಒಂದು ವೇಳೆ ಹಣ ನೀಡದಿದ್ದರೆ ಪ್ರವೇಶ ಅಸಾಧ್ಯ. ಬಳಕೆ ಮಾಡಿ ಕೊಡುತ್ತೇವೆ ಎಂದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಜತೆಗೆ, ಒಳ ಹೋಗದಂತೆ ತಡೆಯುತ್ತಾರೆ. ಇನ್ನು ಹೆಚ್ಚುವರಿ ಹಣ ವಸೂಲಿ ಕುರಿತು ಪ್ರಶ್ನಿಸಿದರೆ ಐದು ರೂ. ಕಾಲ ಹೋಯಿತು. ನೀರು ಖರೀದಿಸಿ ತರಬೇಕು. ಸಾರಿಗೆ ಸಂಸ್ಥೆಗೆ ಹೆಚ್ಚು ಹಣ ಕಟ್ಟಬೇಕು ಎಂಬೆಲ್ಲಾ ಸಬೂಬು ಹೇಳುತ್ತಾರೆ. ಶೌಚಾಲಯದ ಬಳಿ ಏನು ಜಗಳ ಮಾಡುವುದು ಎಂದು ನಾವು ಅವರು ಕೇಳಿದಷ್ಟು ಹಣ ಕೊಟ್ಟು ಬರುತ್ತೇವೆ ಎನ್ನುತ್ತಾರೆ ಪ್ರಯಾಣಿಕರು.

ವಸೂಲಿ ನಿಯಮಬಾಹಿರ – ಅಧಿಕಾರಿ: ನಿಯಮದ ಪ್ರಕಾರ ಮೂತ್ರ ವಿಸರ್ಜನೆಗೆ ಹಣ ಪಡೆಯುವಂತಿಲ್ಲ. ಹಣ ಕೇಳಿದಾಗ ಪ್ರಯಾಣಿಕರು, ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದರೆ ಅಥವಾ ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಕ್ರಮಕೈಗೊಳ್ಳುತ್ತೇವೆ. ಹೆಚ್ಚುವರಿ ಹಣ ಪಡೆದ ಹತ್ತರಷ್ಟು ಪ್ರಮಾಣದ ದಂಡವನ್ನು ಹಾಕುತ್ತೇವೆ ಎಂದು ಕೆಂಪೇಗೌಡ ಬಸ್‌ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ರಾವ್‌ ತಿಳಿಸುತ್ತಾರೆ.

ಶೌಚಾಲಯಗಳು ಎಲ್ಲೆಲ್ಲಿ?: ಕೆಎಸ್‌ಆರ್‌ಟಿಸಿ ವ್ಯಾಪ್ತಿಗೆ ಬರುವ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ ಹಾಗೂ ಪೀಣ್ಯ ಸ್ಯಾಟಲೈಟ್‌ ಬಸ್‌ ನಿಲ್ದಾಣ ಹಾಗೂ ಬಿಎಂಟಿಸಿ ವ್ಯಾಪ್ತಿಗೆ ಬರುವ ಮೆಜೆಸ್ಟಿಕ್‌, ಯಶವಂತಪುರ, ಶಾಂತಿನಗರ, ವಿಜಯನಗರ, ಶಿವಾಜಿನಗರ ಸೇರಿದಂತೆ ನಗರದ 30ಕ್ಕೂ ಅಧಿಕ ಪ್ರಮುಖ ನಿಲ್ದಾಣಗಳಲ್ಲಿ ಸಾರಿಗೆ ಸಂಸ್ಥೆಯ ವತಿಯಿಂದಲೇ ಶೌಚಾಲಯ ಕಟ್ಟಿಸಿ ನಿರ್ವಹಣೆಗೆ ಗುತ್ತಿಗೆ ಕೊಡಲಾಗಿದೆ.

ಗುತ್ತಿಗೆ ಪಡೆದ ಮಾಲೀಕರು ನಮಗೆ ಸೂಚಿರುವುದರಿಂದ ಹೆಚ್ಚುವರಿ ಹಣ ಪಡೆಯುತ್ತೇವೆ. ಮೊದಲು ಹಣ ಪಡೆದು ನಂತರ ಪ್ರವೇಶ ನೀಡಲು ತಿಳಿಸಿದ್ದಾರೆ. ಹೆಚ್ಚು ಎಂದು ಯಾರಾರದೂ ಪ್ರಶ್ನಿಸಿದರೇ ಹೊರಗಿನಿಂದ ಟ್ಯಾಂಕರ್‌ ನೀರು ತರಿಸುತ್ತೇವೆ ಎಂದು ಕಾರಣ ಹೇಳಲು ತಿಳಿಸಿದ್ದಾರೆ.
-ರಾಜೇಶ್‌ (ಹೆಸರು ಬದಲಿಸಲಾಗಿದೆ), ಶೌಚಾಲಯ ನಿರ್ವಾಹಕ 

“ಮಲ ವಿಸರ್ಜನೆಗೆ ಐದು ರೂ.’ ಎಂದು ಗೋಡೆಯ ಮೇಲೆ ಬರೆದಿದ್ದರೂ, 10 ರೂ. ಕೇಳುತ್ತಾರೆ. ಮೂತ್ರ ವಿಸರ್ಜನೆ ಉಚಿತ ಎಂಬ ಫ‌ಲಕಗಳು ಕಾಣೆಯಾಗಿವೆ. ಪ್ರಶ್ನಿಸಿದರೆ ಜಗಳಕ್ಕೆ ಬರುತ್ತಾರೆ. ಶೌಚಾಲಯದ ಮಂದೆ ಜಗಳ ಏಕೆಂದು ಹಣ ನೀಡಿ ಬರುತ್ತೇವೆ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ.
-ಅಂಜಿನಪ್ಪ, ಪ್ರಯಾಣಿಕ

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

1-ssss

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.