Cauvery Water: ಅನ್ಯ ಕೆಲಸಕ್ಕೆ ಕಾವೇರಿ ನೀರು ಬಳಸಿದ 407 ಜನರಿಗೆ ದಂಡ
Team Udayavani, Apr 13, 2024, 10:51 AM IST
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕುಡಿಯುವ ನೀರಿಗೂ ಭಾರಿ ಕಂಟಕ ಎದುರಾಗಿರುವ ಬೆನ್ನಲ್ಲೇ ಜಲಮಂಡಳಿ ಎಚ್ಚೆತ್ತುಕೊಂಡಿದ್ದು, ಕಾವೇರಿ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸಿದ 407 ಮಂದಿಯಿಂದ 20.25 ಲಕ್ಷ ರೂ. ದಂಡ ವಸೂಲಿ ಮಾಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನಧಿಕೃತ ಕೊಳವೆ ಬಾವಿ ಕೊರೆಸುತ್ತಿದ್ದ 36 ಮಂದಿ ವಿರುದ್ಧ ಕ್ರಮ ಕೈಗೊಂಡಿದೆ.
ಬೆಂಗಳೂ ರಿನಲ್ಲಿ ನೀರು ದುರ್ಬಳಕೆ ಮಾಡುವವರ ವಿರುದ್ಧ ಜಲಮಂಡಳಿ ಹದ್ದಿನ ಕಣ್ಣಿಟ್ಟಿದೆ. ಸಿಲಿಕಾನ್ ಸಿಟಿಯ ಬಹುತೇಕ ಕಡೆಗಳಲ್ಲಿ ಕುಡಿ ಯುವ ನೀರಿಗಾಗಿ ಬೆಂಗಳೂರಿಗರು ಪರದಾಡು ತ್ತಿದ್ದು, ಇವರಿಗೆ ನೀರು ಪೂರೈಸುವುದು ಮಂಡಳಿಗೆ ತಲೆನೋವಾಗಿದೆ.
ಈ ನಡುವೆ ನೀರಿಗೆ ಹಾಹಾಕಾರ ಬಂದೊದಗಿದರೂ ನಿಯಮ ಉಲ್ಲಂಘಿಸಿ ಕಾವೇರಿ ನೀರನ್ನು ನಿಷೇಧಿತ ಅನ್ಯ 6 ಉದ್ದೇಶಗಳಿಗೆ ಬಳಸು ತ್ತಿದ್ದ 407 ಮಂದಿ ವಿರುದ್ಧ ದೂರು ದಾಖಲಿಸಿಕೊಂಡು 20.25 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ.
407 ಪ್ರಕರಣಗಳ ಪೈಕಿ ಶೇ.90ರಷ್ಟು ಪ್ರಕರಣವು ಕಾವೇರಿ ನೀರಿನಲ್ಲಿ ಕಾರು ತೊಳೆಯುತ್ತಿರುವುದಾಗಿದೆ. ಶೇ.10ರಷ್ಟು ಪ್ರಕರಣಗಳಲ್ಲಿ ಗಾರ್ಡನ್, ಮನೆ ಸ್ವಚ್ಛಗೊಳಿಸಲು, ಕಟ್ಟಡ ನಿರ್ಮಾಣಕ್ಕೆ ಬಳಸಿರುವುದಾಗಿದೆ. ದಂಡ ಪಾವತಿಸಿದವರಲ್ಲಿ ಬಹುತೇಕರು ಬೆಂಗಳೂರಿನ ಪೂರ್ವ ಹಾಗೂ ದಕ್ಷಿಣ ಭಾಗದವರಾಗಿದ್ದಾರೆ ಎಂದು ಜಲಮಂಡಳಿ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಸಾಕ್ಷ್ಯ ಸಮೇತ ಪತ್ತೆ: ಕಳೆದ 25 ದಿನಗಳಿಂದ ಕಾವೇರಿ ನೀರನ್ನು ವಾಹನ ತೊಳೆಯಲು ಬಳಸು ತ್ತಿರುವ ಬಗ್ಗೆ ಜಲ ಮಂಡಳಿಯ ಸಹಾಯವಾಣಿ 1916ಗೆ ದೂರುಗಳು ಬರುತ್ತಿದ್ದವು. ದೂರುದಾರರು ತಿಳಿಸಿದ ವಿಳಾಸಕ್ಕೆ ತೆರಳಿ ಕಾವೇರಿ ನೀರು ದುರ್ಬಳಕೆ ಮಾಡುತ್ತಿರುವುದನ್ನು ಸಾಕ್ಷ್ಯ ಸಮೇತ ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ. ಇನ್ನು ಬಹುತೇಕ ಪ್ರಕರಣಗಳಲ್ಲಿ ನೆರೆ-ಹೊರೆಯ ಮನೆಯವರೇ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಉಳಿದಂತೆ ಮಂ ಡಳಿಯ ಮೀಟರ್, ವಾಟರ್ ರೀಡಿರ್ಸ್‌ಗಳು, ವಾಟರ್ ಇನ್‌ಸ್ಪೆಕ್ಟರ್‌ಗಳು ಗಸ್ತು ತಿರುಗುವ ವೇಳೆ ಯೂ ಕೆಲವರು ಸಿಕ್ಕಿ ಬಿದ್ದಿದ್ದಾರೆ ಎಂದು ಜಲಮಂ ಡಳಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ದಂಡ ಏಕೆ ?: ವಾಹ ನಗಳ ಸ್ವಚ್ಛತೆಗೆ, ಕೈ ದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ ಮನರಂಜನೆಯ ಕಾರಂಜಿ ಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ, ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವತ್ಛತೆಗೆ ಕಾವೇರಿ ನೀರು ಬಳಸದಂತೆ ಜಲಮಡಂಳಿಯು ಮಾ.8ರಂದು ಆದೇಶ ಹೊರಡಿಸಿತ್ತು. ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ ವಿಧಿಸುವು ದಾಗಿ ಎಚ್ಚರಿಕೆ ಕೊಡಲಾಗಿತ್ತು. ಇದಾಗಿಯೂ ಹಲವು ದಿನಗಳ ಕಾಲ ಅನ್ಯ ಉದ್ದೇಶಕ್ಕಾಗಿ ಕಾವೇರಿ ನೀರು ಬಳಸದಂತೆ ಜಾಗೃತಿ ಮೂಡಿಸಲಾಗಿತ್ತು. ಇದೀಗ ಕಾವೇರಿ ನೀರು ದುರ್ಬಳಕೆ ಮಾಡುವವರ ವಿರುದ್ಧ ಜಲಮಂಡಳಿ ಬಿಸಿ ಮುಟ್ಟಿಸಿದೆ.
ಬೆಂಗಳೂರಿನಲ್ಲಿ ಕಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1.40 ಕೋಟಿ ಜನಸಂಖ್ಯೆಯಿದ್ದು, ಈ ಪೈಕಿ 10 ಲಕ್ಷ ಕುಟುಂಬಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅನಧಿಕೃತವಾಗಿ ಕೊಳವೆ ಬಾವಿ ಕೊರೆಸಿದ 36 ಮಂದಿ ವಿರುದ್ಧ ಪ್ರಕರಣ ದಾಖಲು : ಮಳೆ ನೀರಿನ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದು ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇದರಿಂದಲೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ.
ಇದಾಗ್ಯೂ ಕಳೆದ 20 ದಿನಗಳಲ್ಲಿ ಬೆಂಗಳೂರಿನ ವಿವಿಧೆಡೆ ಅನಧಿಕೃತವಾಗಿ ಕೊಳವೆಬಾವಿ ಕೊರೆಯು ತ್ತಿದ್ದ 36 ಕಡೆ ಜಲಮಂಡಳಿ ಅಧಿಕಾರಿಗಳು ದಾಳಿ ನಡೆಸಿ 36 ಕೇಸ್ ದಾಖಲಿಸಿ ಕೊಂಡಿ ದ್ದಾರೆ. ಸಿಕ್ಕಿ ಬಿದ್ದ ಕೊಳವೆಬಾವಿ ಕೊರೆದವರಿಗೆ ರಿಗ್ ಪಡೆಯಲು ನೀಡಿರುವ ಅನು ಮತಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೊಳವೆಬಾವಿ ಕೊರೆಸಿರುವ ಮಾಲೀಕರ ವಿರುದ್ಧ ವೂ ದೂರು ದಾಖಲಿಸಿಕೊಳ್ಳಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅನುಮತಿ ಪಡೆ ದಿರುವ ಜಾಗದಲ್ಲಿ ಮಾತ್ರ ಕೊಳವೆಬಾವಿಗಳನ್ನು ಕೊರೆಯಬೇಕು ಎಂಬ ನಿಯಮವಿದೆ.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿರುವ ಈ ಸಂದರ್ಭದಲ್ಲಿ ಕಾವೇರಿ ನೀರನ್ನು ಕಾರು ತೊಳೆಯುವುದು ಸೇರಿದಂತೆ ಅನ್ಯ ಉದ್ದೇಶಗಳಿಗೆ ಬಳಸಬೇಡಿ. ಅನಧಿಕೃತವಾಗಿ ಕೊಳವೆ ಬಾವಿ ಕೊರೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. –ಬಿ.ಸುರೇಶ್, ಮುಖ್ಯ ಪ್ರಧಾನ ಅಭಿಯಂತರ, ಜಲಮಂಡಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.