ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಿ
Team Udayavani, Oct 17, 2017, 11:59 AM IST
ಕೆಂಗೇರಿ: ಉದ್ಯಮ ಸ್ಥಾಪಿಸುವ ಮೂಲಕ ಇತರರಿಗೂ ಉದ್ಯೋಗ ಅವಕಾಶ ಕಲ್ಪಿಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೆಮ್ಮಿಗೆಪುರ ವಾರ್ಡ್ನ ಬಿಬಿಎಂಪಿ ಸದಸ್ಯ ಆರ್ಯಶ್ರೀನಿವಾಸ್ ಹೇಳಿದರು.
ಬಿಬಿಎಂಪಿ ರಾಜರಾಜೇಶ್ವರಿ ವಲಯ ಕಲ್ಯಾಣ ಇಲಾಖೆಯ ವತಿಯಿಂದ ನಿರುದ್ಯೋಗ ಯುವಕ ಯುವತಿಯರಿಗೆ ಸ್ವ ಉದ್ಯೋಗ ತೊಡಗಿಸಿಕೊಳ್ಳಲು ರೂಪಿಸಿರುವ ಯೋಜನೆಯ ಅಂಗವಾಗಿ ಲಘು ಮೋಟಾರ್ ವಾಹನ ಮಂಜೂರಾದ ಫಲಾನುಭವಿಗಳಿಗೆ “ಕೀ’ ಹಸ್ತಾಂತರಿಸಿ ಮಾತನಾಡಿ, ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಜೀವನ ಕ್ರಮವನ್ನು ಉತ್ತಮ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಹೆಮ್ಮಿಗೆಪುರ ವಾರ್ಡ್ ಕಾಂಗ್ರೆಸ್ನ ಅಧ್ಯಕ್ಷ ಮೈಲಸಂದ್ರ ನಾಗರಾಜ್ ಮಾತನಾಡಿ, ನಿರುದ್ಯೋಗ ನಿವಾರಣೆಗಾಗಿ ಸರ್ಕಾರ ರೂಪಿಸಿರುವ ಯೋಜನೆಯ ಸದುಪಯೋಗ ಪಡಿಸಿಕೊಂಡು ಕಾಯಕದ ಮಹತ್ವ ಅರಿತು ವಿದ್ಯಾರ್ಥಿಗಳು ಕಾರ್ಯನಿರ್ವಹಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಅಗರ ಜಿಪಂ ಕಾಂಗ್ರೆಸ್ ಮುಖಂಡ ಹನುಮಂತೇಗೌಡ, ಹೆಮ್ಮಿಗೆಪುರ ವಾರ್ಡ್ನ ತಾಂತ್ರಿಕ ವಿಭಾಗದ ಸಹಾಯಕ ಅಭಿಯಂತರ ದಯಾನಂದ್, ಹೆಮ್ಮಿಗೆಪುರ ವಾರ್ಡ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್, ಮುಖಂಡರಾದ ಪ್ರತಾಪ್, ಗೋಪಾಲ್, ರಾಜೇಶ್, ಮಹದೇವ್, ನಾರಾಯಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು
Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು
BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
INDWvsIREW: ಜೆಮಿಮಾ ಚೊಚ್ಚಲ ಶತಕ: ದಾಖಲೆಯ ರನ್ ಪೇರಿಸಿದ ಭಾರತ ವನಿತೆಯರು
Manipal: ಮಣ್ಣಪಳ್ಳ ಸ್ವಚ್ಛತೆಗಿಳಿದ ಸಾರ್ವಜನಿಕರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.