ಉತ್ತರಾಯಣ: GST ಗೊಂದಲಗಳಿಗೆ ತಜ್ಞರ ಪರಿಹಾರ
Team Udayavani, Jul 10, 2017, 3:45 AM IST
ಪ್ರಶ್ನೆ: ನಾನು ಈ ಹಿಂದೆ ಬಜಾಜ್ ಫೈನಾನ್ಸ್ನಲ್ಲಿ ಬಡ್ಡಿ ರಹಿತವಾಗಿ ತಿಂಗಳ ಕಂತಿಗೆ ವಾಷಿನ್ ಮೆಷಿನ್ ಖರೀದಿಸಿದ್ದೇನೆ. ಮೂರು ತಿಂಗಳ ಕಂತು ಮಾತ್ರ ಬಾಕಿಯಿದ್ದು, ಜಿಎಸ್ಟಿ ಜಾರಿ ಬಳಿಕ ಕಂಪೆನಿಯರು ಶೇ.18ರಷ್ಟು ಜಿಎಸ್ಟಿ ದರ ಅನ್ವಯವಾಗುತ್ತದೆ ಎಂಬ ಸಂದೇಶ ಕಳುಹಿಸಿದ್ದು, ಜಿಎಸ್ಟಿ ದರ ಮುಂದಿನ ಕಂತುಗಳಿಗೆ ಅನ್ವಯವಾಗುತ್ತದೆಯೇ?
ಉತ್ತರ: ನೀವು ವಾಷಿನ್ ಮೆಷಿನ್ ಖರೀದಿಸುವ ವೇಳೆ ವ್ಯಾಟ್ ಪಾವತಿಸಿರುವುದರಿಂದ ಮೆಷಿನ್ ಬೆಲೆಗೆ ಜಿಎಸ್ಟಿ ದರ ಅನ್ವಯವಾಗುವುದಿಲ್ಲ. ಆದರೆ, ಕಂಪೆನಿಯವರು ಪ್ರತಿ ತಿಂಗಳು ಪಡೆಯುವ ಕಂತಿನಲ್ಲಿ ಹಣಕಾಸು ಸೇವಾ ಶುಲ್ಕ ಪಡೆಯುತ್ತಿದ್ದರೆ, ಅದಕ್ಕೆ ಜಿಎಸ್ಟಿ ಅನ್ವಯವಾಗಲಿದೆ.
-ವಿ.ಬಿ.ಶೆಟ್ಟಿ
ಪ್ರಶ್ನೆ: ರಾಜ್ಯದ ದೊರೆಯದ ಕೆಲವೊಂದು ಉತ್ಪನ್ನಗಳನ್ನು ಹೊರ ರಾಜ್ಯಗಳಿಂದ ತರಿಸಲಾಗುತ್ತೇನೆ. ನನ್ನ ವಾರ್ಷಿಕ ವಹಿವಾಟು ಕಡಿಮೆ ಇರುವುದರಿಂದ ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಉತ್ಪನ್ನ ಪೂರೈಕೆ ಮಾಡುವ ಕಂಪೆನಿಯವರು ಜಿಎಸ್ಟಿ ಸಂಖ್ಯೆ ಕೇಳುತ್ತಿದ್ದಾರೆ, ಜಿಎಸ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕೆ?
ಉತ್ತರ: ನೀವು ವಾರ್ಷಿಕ 20 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುತ್ತಿದ್ದರೆ ಜಿಎಸ್ಟಿ ಅಡಿಯಲ್ಲಿ ನೋಂದಣಿಯಾಗಬೇಕಿಲ್ಲ. ಜಿಎಸ್ಟಿ ಸಂಖ್ಯೆ ಇಲ್ಲದಿದ್ದರೂ ಕಂಪೆನಿಯರು ಉತ್ಪನ್ನಗಳನ್ನು ಪೂರಕೆ ಮಾಡಬಹುದಾಗಿದ್ದು, ಅವರಿಗೆ ನಿಮ್ಮ ಪೂರ್ಣ ವಿಳಾಸ ನೀಡಬೇಕಾಗುತ್ತದೆ. ಇದರೊಂದಿಗೆ ನೀವು ಆಮದು ಮಾಡಿಕೊಳ್ಳುವ ಉತ್ಪನ್ನದ ಮೇಲೆ ಇಂಟಿಗ್ರೇಟೆಡ್ ಸರಕು ಮತ್ತು ಸೇವಾ ತೆರಿಗೆಯನ್ನು ಪಾವತಿಸಬೇಕು.
– ನರೇನ್, ರಾಣೆಬೆನ್ನೂರು
– ಬಿ.ವಿ.ಮುರಳಿಕೃಷ್ಣ
ಜಂಟಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.