Bangalore: ಹೋಟೆಲ್ ನೌಕರರಿಂದಲೇ ಉಜ್ಬೇಕಿಸ್ತಾನ ಮಹಿಳೆ ಹತ್ಯೆ
Team Udayavani, Mar 16, 2024, 10:39 AM IST
ಬೆಂಗಳೂರು: ಪ್ರತಿಷ್ಠಿತ ಹೋಟೆಲ್ವೊಂದರ ಕೊಠಡಿಯಲ್ಲಿ ತಂಗಿದ್ದ ಉಜ್ಬೇಕಿ ಸ್ತಾನ ಮಹಿಳೆ ಜರೀನಾ ಅವರನ್ನು ಕೊಲೆ ಮಾಡಿದ್ದ ಹೋಟೆಲ್ನ ಇಬ್ಬರು ಕೆಲಸಗಾರರನ್ನು ಶೇಷಾದ್ರಿ ಪುರ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂನ ರಾಬರ್ಟ್, ಅಮ್ರಿತ್ ಬಂಧಿತರು. ಮಹಿಳೆ ಬಳಿಯ ವಸ್ತುಗಳು ಹಾಗೂ ನಗದು ದೋ ಚುವ ಉದ್ದೇಶದಿಂದ ಮಾ.13 ರಂದು ತಡರಾತ್ರಿ ಕೊಲೆ ಮಾಡಿ ಆರೋಪಿಗಳು ಕೇರಳಕ್ಕೆ ಹೋಗಿದ್ದರು. ಈ ಮಾಹಿತಿ ಪಡೆದ ವಿಶೇಷ ತಂಡ, ಆರೋಪಿಗಳನ್ನು ವಶಕ್ಕೆ ಪಡೆದು ನಗರಕ್ಕೆ ಕರೆ ತಂದಿದೆ. ಆರೋಪಿಗಳು ಮಹಿಳೆಯ ಬಳಿಯಿದ್ದ 13,000 ರೂ. ನಗದು, 2,000 ಮುಖಬೆಲೆಯ ಹಾಗೂ 5,000 ಉಜ್ಬೇಕಿಸ್ತಾನ 3 ನೋಟುಗಳು, ಮೊಬೈಲ್ ಜಪ್ತಿ ಮಾಡಲಾಗಿದೆ.
ಉಸಿರುಗಟ್ಟಿಸಿ ಹತ್ಯೆ: ಜರೀನಾ ಪ್ರವಾಸ ಕ್ಕೆಂದು ಮಾ. 5ರಂದು ನಗರಕ್ಕೆ ಬಂದಿದ್ದರು. ಆನ್ಲೈನ್ ಮೂಲಕ ಕಾಯ್ದಿರಿಸಿ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ರಾಬರ್ಟ್ ಹಾಗೂ ಅಮ್ರಿತ್, ಹೋಟೆಲ್ನಲ್ಲಿ ಸ್ವತ್ಛತೆ ಕೆಲಸ ಮಾಡಿಕೊಂಡಿದ್ದರು. ಮಹಿಳೆಯನ್ನು ಆಗಾಗ ಮಾತನಾಡಿಸುತ್ತಿದ್ದರು. ಮಹಿಳೆ ಬಳಿ ಸಾಕಷ್ಟು ಹಣ ಹಾಗೂ ಆಭರಣ ಇರಬಹುದೆಂದು ತಿಳಿದು ರಾತ್ರಿ ಕೊಠಡಿಗೆ ನುಗ್ಗಿದ್ದ ಆರೋಪಿಗಳು, ಮಹಿಳೆ ಬಳಿಯ ನಗದು, ಇತರ ವಸ್ತುಗಳನ್ನು ಕಸಿದುಕೊಳ್ಳಲು ಮುಂದಾಗಿದ್ದರು. ಅದಕ್ಕೆ ಮಹಿಳೆ ವಿರೋಧಿಸಿದಾಗ ಉಸಿರುಗಟ್ಟಿಸಿ ಕೊಂದಿದ್ದರು. ನಂತರ, ಬಾಗಿಲು ಹೊರಗಿನಿಂದ ಲಾಕ್ ಮಾಡಿ ಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಹಲವು ಗಂಟೆಯಾದರೂ ಜರೀನಾ ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ಹೋಟೆಲ್ ವ್ಯವಸ್ಥಾಪಕ, ಕೊಠಡಿ ಬಾಗಿಲು ತೆರೆದು ನೋಡಿದಾಗ ಮೃತದೇಹ ಕಂಡಿತ್ತು. ಅವರೇ ಠಾಣೆಗೆ ಮಾಹಿತಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.