ಡಾ.ರಾಜ್, ಡಾ.ವಿಷ್ಣು ಮರೆಯಲಾಗದ ಧ್ರುವತಾರೆಗಳು: ಸಚಿವ ಸೋಮಣ್ಣ
Team Udayavani, Mar 27, 2022, 4:29 PM IST
ಬೆಂಗಳೂರು: ಕನ್ನಡನಾಡು ಕಂಡ ಅಪ್ರತಿಮ ಕಲಾವಿದರಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಡಾ.ಪುನೀತ್ ರಾಜ್ ಕುಮಾರ್ ಅವರು ತೆರೆಯ ಮೇಲೆ ಕಂಡಂತೆಯೇ ಬದುಕಿದ ಮಹನೀಯರು. ಆವರು ನಡೆನುಡಿಯಲ್ಲಿ ಕಂಡ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜ ಸಮೃದ್ಧಿಯಾಗಿರುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.
ಗೋವಿಂದರಾಜನಗರದ 22 ನೇ ವೃತ್ತದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ಡಾ. ವಿಷ್ಣುವರ್ಧನ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.
ಕಲಾವಿದರು ನಾಡಿನ ಪ್ರತಿಯೊಬ್ಬ ಮನೆಯ ಸದಸ್ಯನಂತೆ ಗುರುತಿಸಿ ಕೊಂಡಿರುತ್ತಾರೆ. ಅವರನ್ನು ನೋಡುತ್ತಾ ಬೆಳೆಯುವ ನಾವು ಅವರಲ್ಲಿನ ಅನೇಕ ಗುಣಗಳನ್ನು ನಮಗೆ ಅರಿವಿಲ್ಲದಂತೆ ಅಳವಡಿಸಿ ಕೊಂಡಿರುತ್ತೇವೆ. ರಾಜ್‍ಕುಮಾರ್, ವಿಷ್ಣುವರ್ಧನ್ ನಮ್ಮ ನಾಡಿನ ಧ್ರುವತಾರೆಗಳು. ಅವರನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಸೋಮಣ್ಣ ಹೇಳಿದರು.
ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಸೇವಾ ಸಮಿತಿ ಪದಾಧಿಕಾರಿಗಳಾದ ಎಚ್ ರಮೇಶ್, ಶಶಿಕುಮಾರ್, ಚಂದ್ರಶೇಖರ್, ಕೇಶವ್, ವಿಷ್ಣು ಅಭಿಮಾನಿ ಬಳಗ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.