ವಿ-ಸ್ಟಾರ್ ಬ್ರ್ಯಾಂಡ್ 16ನೇ ಮಳಿಗೆ ಆರಂಭ
Team Udayavani, Jan 29, 2019, 6:43 AM IST
ಬೆಂಗಳೂರು: ಆಧುನಿಕ ಜೀವನಶೈಲಿಗೆ ಅನುಗುಣವಾದ ಆಕರ್ಷಕ ಒಳ ಉಡುಪುಗಳ ತಯಾರಕ ವಿ-ಸ್ಟಾರ್ ಬ್ರ್ಯಾಂಡ್ನ 16ನೇ ಮಳಿಗೆಯನ್ನು ಇತೀಚೆಗೆ ನಗರದ ಮಲ್ಲೇಶ್ವರದ ಮಂತ್ರಿ ಸ್ಕೇರ್ನ 2ನೇ ಮಹಡಿಯಲ್ಲಿ ತೆರೆಯಲಾಯಿತು.
ನೂತನ ಮಳಿಗೆಯನ್ನು ವಿ ಗಾರ್ಡ್ ಸಮೂಹದ ಅಧ್ಯಕ್ಷ ಕೋಚೌಸೇಫ್, ಸಮೂಹದ ಚೇರ್ಪರ್ಸನ್ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಕೋಚೌಸೇಫ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಶೀಲಾ ಕೋಚೌಸೇಫ್, ಫ್ಯಾಷನ್ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ವಿ ಗಾರ್ಡ್ ಪ್ರವರ್ತಕರ ವಿ-ಸ್ಟಾರ್ ಕೇರಳ ಸೇರಿದಂತೆ ಇತರೆಡೆಗಳಲ್ಲಿ ಇಬೋ ಹೆಸರಿನಲ್ಲಿ ಮಳಿಗೆಗಳನ್ನು ತೆರೆದಿದೆ ಎಂದರು.
ಬೆಂಗಳೂರು ನಗರದಲ್ಲಿ ವಿ-ಸ್ಟಾರ್ ಹೆಸರಿನ ಪ್ರಥಮ ಶೋರೂಮ್ ಇದಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಮಳಿಗೆಗಳನ್ನು ತೆರೆಯುವ ಮೂಲಕ ನಮ್ಮ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲಿದ್ದೇವೆ. ಇಷ್ಟೇ ಅಲ್ಲದೆ, ಮಧ್ಯ ಪ್ರಾಚ್ಯದಲ್ಲಿ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿ ವಿ-ಸ್ಟಾರ್ ಉತ್ಪನ್ನಗಳು ರಾರಾಜಿಸಲಿವೆ ಎಂದು ಹೇಳಿದರು.
ವಿಶ್ವದರ್ಜೆಯ ಹಾಗೂ ಆಧುನಿಕ ಜೀವನಶೈಲಿಗೆ ಅನುಗುಣವಾದ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಧರಿಸಬಹುದಾದ ಗುಣಮಟ್ಟದ ಆರೋಗ್ಯಕರ ಒಳ ಉಡುಪುಗಳ ಬ್ರ್ಯಾಂಡ್ ವಿ-ಸ್ಟಾರ್. ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಈ ಉತ್ಪನ್ನಗಳು ದೊರೆಯಲಿವೆ.
ವಿ-ಗಾರ್ಡ್ ಸಮೂಹದ ಮತ್ತೂಂದು ಮೈಲಿಗಲ್ಲು ಇದಾಗಿದೆ ಎಂದು ಅವರು ವಿವರಿಸಿದರು. ವಂಡರ್ ಲಾ ಹಾಲಿಡೇಸ್ ಲಿ., ನಿರ್ದೇಶಕ ಅರುಣ್ ಚಿತ್ತಿಲಿಪಲ್ಲಿ, ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ರಹಾಂ ತರಿಯನ್ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.