ಅವಧಿ ಮುಗಿದ್ರೂ ಲಸಿಕೆಗೆ ಬಾರದ 10 ಲಕ್ಷ ಜನ..!


Team Udayavani, Dec 7, 2021, 11:39 AM IST

vaccination pending

Representative Image used

ಬೆಂಗಳೂರು: ಒಂದೆಡೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಸಿಕೆಯಿಂದ ದೂರ ಉಳಿದ ಕೆಲವರು ಲಸಿಕಾ ಕೇಂದ್ರಗಳತ್ತ ದೌಡಾಯಿಸು ತ್ತಿದ್ದಾರೆ. ಆದರೆ, ಮತ್ತೂಂದೆಡೆ ಅವಧಿ ಮೀರಿದರೂ ಎರಡನೇ ಡೋಸ್‌ನಿಂದ ದೂರ ಉಳಿದ ಸುಮಾರು ಹತ್ತು ಲಕ್ಷ ಜನ ಬಿಬಿಎಂಪಿ ಕೈಗೆ ಸಿಗದೆ ಸತಾಯಿಸುತ್ತಿದ್ದಾರೆ!

ನಗರ ವ್ಯಾಪ್ತಿಯಲ್ಲಿ ಎರಡೂ ಡೋಸ್‌ ಲಸಿಕೆಗಳ ನಡುವೆ ಸರ್ಕಾರ ಮತ್ತು ತಜ್ಞರು ನಿಗದಿಪಡಿಸಿರುವ 84 ದಿನಗಳ ಅವಧಿ ಮೀರಿದವರು ಇನ್ನೂ ಸುಮಾರು ಹತ್ತು ಲಕ್ಷ ಜನರಿದ್ದು, ಇವರಲ್ಲಿ ಬಹುತೇಕರು ಬಿಬಿ ಎಂಪಿ ಕೈಗೆ ಸಿಗುತ್ತಲೇ ಇಲ್ಲ. ಪಾಲಿಕೆ ಆರೋಗ್ಯ ಇಲಾಖೆ ಸಿಬ್ಬಂದಿ ನಿರಂತರವಾಗಿ ಕರೆ ಮಾಡಿ ಆಮಂ ತ್ರಣ ನೀಡಿದ್ದಾಯಿತು.

ಸಿಬ್ಬಂದಿಯನ್ನು ಮನೆ ಬಾಗಿಲಿಗೆ ಕಳುಹಿಸಿದ್ದಾಯಿತು. ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿದ್ದಾಯಿತು. ಆದರೂ “ನಾಳೆ ಬಾ’ ಉತ್ತರ ಸಿಗುತ್ತಿದೆ. “ನಗರದಲ್ಲಿ ಇದುವರೆಗೆ 1.43 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಇದರಲ್ಲಿ ಮೊದಲ ಡೋಸ್‌ ಪಡೆದವರು 81.62 ಲಕ್ಷ ಇದ್ದು, ಎರಡನೇ ಡೋಸ್‌ 61.52 ಲಕ್ಷ ಇದ್ದಾರೆ.

ಇದುವರೆಗೆ ಲಸಿಕೆಯಿಂದ ದೂರ ಉಳಿದವರ ಸಂಖ್ಯೆ ಕಳೆದ ವಾರ ಪರಿಶೀಲನಾ ಸಭೆಯಲ್ಲಿ 12 ಲಕ್ಷ ಜನ ಇದ್ದರು. ಈಗ ಸುಮಾರು ಹತ್ತು ಲಕ್ಷಕ್ಕೆ ಇಳಿಕೆ ಆಗಿರಬಹುದು. ಈ ಎರಡೂ ವರ್ಗಗಳು ಅಂದರೆ ಇದುವರೆಗೆ ದೂರ ಉಳಿದವರು ಹಾಗೂ ಅವಧಿ ಮುಗಿದರೂ ಎರಡನೇ ಡೋಸ್‌ ಪಡೆಯದ ಹತ್ತು ಲಕ್ಷ ಜನರಿಗೆ ಲಸಿಕೆ ನೀಡು ವುದು ಸವಾಲಾಗಿದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

“ಅತ್ತ ನಮಗೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಲಸಿಕೆ ನೀಡುವಂತೆ ಮೇಲಧಿಕಾರಿಗಳಿಂದ ಒತ್ತಡ ಬರುತ್ತಿದೆ. ಕೆಲವರಿಗೆ ಟಾರ್ಗೆಟ್‌ ಕೂಡ ನೀಡಲಾಗಿದೆ. ಇತ್ತ ಜನರ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಮೊಬೈಲ್‌ ನಂಬರ್‌ ಮತ್ತು ಮತದಾರರ ಪಟ್ಟಿಯನ್ನು ಹಿಡಿದುಕೊಂಡು ಹುಡುಕುತ್ತಿದ್ದೇವೆ. ಕೆಲವರು ಸಿಗುತ್ತಾರೆ; ಹಲವರು ಸಿಗುವುದಿಲ್ಲ.

ಸಿಕ್ಕವರೂ ನಾಳೆ ಬರುತ್ತೇವೆ ಎಂದು ಹೇಳಿಹೋಗುತ್ತಾರೆ. ಈ ಕಣ್ಣಾಮುಚ್ಚಾಲೆ ಆಟ ಬಿಬಿಎಂಪಿ ನಿದ್ದೆಗೆಡಿಸಿದೆ’ ಎಂದು ಹೆಸರು ಹೇಳ ಲಿಚ್ಛಿಸದ ಬಿಬಿಎಂಪಿ ಆರೋಗ್ಯ ವಿಭಾಗದ ಸಿಬ್ಬಂದಿ ಯೊಬ್ಬರು ಅಲವತ್ತುಕೊಂಡರು. “ಇತ್ತೀಚೆಗೆ ನಡೆದ ಒಮಿಕ್ರಾನ್‌ ಪ್ರಕರಣಗಳ ಪತ್ತೆ ಹಾಗೂ ಸೋಂಕು ಪ್ರಕರಣ ಹೆಚ್ಚಳವಾಗಿದ್ದರಿಂದ ಲಸಿಕೆ ಪ್ರಮಾಣ ದಲ್ಲಿ ಏರಿಕೆ ಕಂಡುಬಂದಿದೆ. ನಿತ್ಯ ಸರಾಸರಿ 35 ಸಾವಿರ ಲಸಿಕೆ ಹಾಕಲಾಗುತ್ತಿತ್ತು.

ಇದನ್ನೂ ಓದಿ;- ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

ಈಗ ಒಂದು ವಾರ ದಿಂದ ಈಚೆಗೆ 65-70 ಸಾವಿ ರಕ್ಕೆ ತಲುಪಿದೆ. ಆದರೆ, ಇನ್ನೂ 30-35 ಲಕ್ಷ ಮಂದಿ ಲಸಿಕೆಯಿಂದ ಹೊರಗುಳಿದಿದ್ದು, ಪ್ರತಿದಿನ ಕನಿಷ್ಠ ಒಂದು ಲಕ್ಷ ಲಸಿಕೆ ನೀಡಿದರೂ, 2ನೇ ಡೋಸ್‌ ಶೇಕಡ ನೂರರ ಗುರಿ ತಲುಪಲು ಇನ್ನೂ ಒಂದೂವರೆ ತಿಂಗಳು ಹಿಡಿಯು ತ್ತದೆ’ ಎಂದು ಹೇಳಿದರು.

“ಅವಧಿ ಮೀರಿದರೂ ಲಸಿಕೆ ಪಡೆಯದಿರುವುದು ತಪ್ಪು’ ಒಟ್ಟಾರೆ ಲಸಿಕೆ ಪಡೆದ 1.43 ಕೋಟಿ ಜನರಲ್ಲಿ ಕೊವ್ಯಾಕ್ಸಿನ್‌ ಪಡೆದವರು 19.47 ಲಕ್ಷ ಇದ್ದರೆ, ಕೊವಿಶೀಲ್ಡ್‌ ಪಡೆದವರು 1.22 ಕೋಟಿ ಹಾಗೂ ಸು#ಟ್ನಿಕ್‌ ಲಸಿಕೆ ಪೆಡದವರು 67,809. ಕೊವ್ಯಾಕ್ಸಿನ್‌ ಎರಡನೇ ಡೋಸ್‌ಗೆ 28 ದಿನ ಹಾಗೂ ಕೊವಿಶೀಲ್ಡ್‌ಗೆ 84 ದಿನಗಳು ಅಂತರ ಇರಬೇಕು ಎಂದು ಸರ್ಕಾರ ಸೂಚಿಸಿದೆ. ಅವಧಿ ಮೀರಿದರೆ ಲಸಿಕೆ ಸಾಮರ್ಥ್ಯ ಕಡಿಮೆ ಆಗುತ್ತದೆಯೇ ಎಂಬುದರ ಬಗ್ಗೆ ಯಾವುದೇ ಅಧ್ಯಯನ ಆಗಿಲ್ಲ. ಹಾಗಂತ, ಲಸಿಕೆಯಿಂದ ದೂರ ಉಳಿಯುವುದು ಕೂಡ ತಪ್ಪು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ನಿಗದಿಪಡಿಸಿದ ಅವಧಿಯಲ್ಲಿ ಲಸಿಕೆ ಪಡೆಯಿರಿ

“ಮೊದಲ ಮತ್ತು ಎರಡನೇ ಡೋಸ್‌ ನಡುವೆ ಗರಿಷ್ಠ ಎಷ್ಟು ವಿಳಂಬವಾಗಬಹುದು? ಗರಿಷ್ಠ ವಿಳಂಬದಿಂದ ಆ ಲಸಿಕೆ ಸಾಮರ್ಥ್ಯ ಕುಗ್ಗುತ್ತದೆಯೇ ಅಥವಾ ಇಲ್ಲವೇ? ಇದರ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದು. ಯಾಕೆಂದರೆ, ಈ ನಿಟ್ಟಿನಲ್ಲಿ ಅಧ್ಯಯನಗಳು ನಡೆದಿಲ್ಲ. ಆದರೆ, ಕೆಲವು ಸಲ ಮೊದಲ ಡೋಸ್‌ ತೆಗೆದುಕೊಂಡ ವ್ಯಕ್ತಿಯು ಎರಡನೇ ಡೋಸ್‌ ಸಮಯದಲ್ಲಿ ಶೀತ ಅಥವಾ ಜ್ವರ ಮತ್ತಿತರ ಕಾರಣಗಳಿಗೆ ನಾವೇ (ವೈದ್ಯರು) ತಿಂಗಳ ಮಟ್ಟಿಗೆ ಮುಂದೂಡಿರುತ್ತೇವೆ. ಅದೇನೇ ಇರಲಿ, ನಿಗದಿಪಡಿಸಿದ ಅವಧಿಯಲ್ಲಿ ಜನ ಲಸಿಕೆ ಪಡೆಯುವುದು ಸೂಕ್ತ’ ಎಂದು ಮಣಿಪಾಲ್‌ ಆಸ್ಪತ್ರೆಗಳ ಅಧ್ಯಕ್ಷ ಡಾ.ಸುದರ್ಶನ್‌ ಬಲ್ಲಾಳ್‌ ತಿಳಿಸುತ್ತಾರೆ.

– ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.