ಎನ್‌ಎಸ್‌ಡಿಯಿಂದ ವಚನ ಚಳವಳಿ ನಾಟಕ
Team Udayavani, Mar 12, 2019, 6:36 AM IST
ಬೆಂಗಳೂರು: ಕುವೆಂಪು ಕಾದಂಬರಿ ಆಧಾರಿತ ಮಲೆಗಳಲ್ಲಿ ಮದುಮಗಳು ನಾಟಕ ಯಶಸ್ವಿಯಾದ ಬೆನ್ನಲ್ಲೇ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರು ಕೇಂದ್ರ ಮತ್ತೊಂದು ಐತಿಹಾಸಿಕ ನಾಟಕ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ.
ವಚನಕಾರರ ತತ್ತ್ವ ಸಂದೇಶಗಳಿಗೆ ರಂಗರೂಪ ನೀಡಲು ಎನ್‌ಎಸ್‌ಡಿ ಮುಂದಾಗಿದ್ದು, ಇದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಕೈ ಜೋಡಿಸಿದೆ. ಬಿಜ್ಜಳನ ಆಸ್ಥಾನ, ಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ನೀಲಮ್ಮ, ಸಿದ್ಧರಾಮ, ಮಡಿವಾಳ ಮಾಚೀದೇವ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಇಡೀ 12ನೇ ಶತಮಾನವನ್ನೇ ರಂಗದ ಮೇಲೆ ಮೂಡಿಸಲು ಎನ್‌ಎಸ್‌ಡಿ ಕಳೆದ 4 ವರ್ಷಗಳಿಂದ ಪ್ರಯತ್ನ ಪಡುತ್ತಿದ್ದು, ಇದೀಗ ಅಂತಿಮ ರೂಪಕ್ಕೆ ಬಂದಿದೆ.
ಆಗಿನ ಕಾಲದಲ್ಲಿ ನಡೆದ ಧರ್ಮ ಜಗಳ, ಕೋಮು ಸೌರ್ಹಾದತೆ, ಲಿಂಗ ಸಮಾನತೆ, ಪುರೋಹಿತ ಶಾಹಿಗಳ ದಬ್ಟಾಳಿಕೆ, ಅವರ ವಿರುದ್ಧ ನಡೆದ ವಚನ ಕ್ರಾಂತಿ ಎಲ್ಲ ಅಂಶಗಳನ್ನಿಟ್ಟಿಕೊಂಡು ನಾಟಕ ಮಾಡಲಾಗುತ್ತಿದೆ. ಮಲೆಗಳಲ್ಲಿ ಮದುಮಗಳ ರೀತಿಯಲ್ಲಿಯೇ 8-9 ಗಂಟೆಗಳ ನಾಟಕ ಇದಾಗಿದ್ದು, ಅದರಂತೆ ಇದು ಕೂಡ ಚಲನಶೀಲವಾಗಿರಲಿದೆ. ನಾಲ್ಕು ದಿಕ್ಕುಗಳಲ್ಲಿ ಶರಣ ಪಂಥ ಸಂಚಾರ ನಡೆಸಲಿದೆ. ಹೀಗಾಗಿ 4 ವೇದಿಕೆಗಳಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.
ಮೊದಲ 2 ವೇದಿಕೆಗಳಲ್ಲಿ ಬಿಜ್ಜಳ ರಾಜನ ಆಸ್ಥಾನ ಹಾಗೂ ಬಸವಣ್ಣ ಪ್ರವರ್ಧನಮಾನಕ್ಕೆ ಬಂದ ಬಗೆಯನ್ನು ಪ್ರದರ್ಶಿಸಲಾಗುವುದು. ಬಿಜ್ಜಳನ ಆಸ್ಥಾನ ಹೇಗೆ ಮತ್ತು ಯಾಕಾಗಿ ಕಲ್ಯಾಣ ರಾಜ್ಯವಾಗಿತ್ತು ಎಂಬ ಅಂಶವನ್ನು ನಾಟಕದಲ್ಲಿ ತೋರಿಸಲಾಗುವುದು. ಶ್ರದ್ಧೆ, ಭಕ್ತಿ, ಕಾಯಕ ಜೀವಿಗಳು, ಕೌಟುಂಬಿಕ ಪರಿಕಲ್ಪನೆ ಹಾಗೂ ಶರಣರು ಈ ಅಂಶಗಳನ್ನು ಪ್ರಧಾನವಾಗಿಟ್ಟುಕೊಂಡು ನಾಟಕ ರಚಿಸಲಾಗಿದೆ.
ಬಯಲುಸೀಮೆ ರಂಗ ವಿನ್ಯಾಸ: ಕೆ.ವೈ.ನಾರಾಯಣಸ್ವಾಮಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ನಾಟಕದ ಕಥಾ ವಸ್ತುವಿನ ಬಗ್ಗೆ ಅಧ್ಯಯನ ಸಂಶೋಧನೆ ನಡೆಸಿ ಸಂಭಾಷಣಾ ಪ್ರತಿ (ಸ್ಕ್ರಿಪ್ಟ್) ತಯಾರಿಸಿದ್ದಾರೆ. ಈ ನಾಟಕಕ್ಕಾಗಿ ಶಶಿಧರ ಅಡಪ ಕಳೆದ ಒಂದು ತಿಂಗಳಿನಿಂದ ರಂಗ ವಿನ್ಯಾಸದ ಸಿದ್ಧತೆ ಮಾಡುತ್ತಿದ್ದಾರೆ. ಬಯಲುಸೀಮೆಯ ಚಿತ್ರಣ ನೋಡುಗರ ಮನಮುಟ್ಟುವಂತೆ ಮಾಡಲು ಕಿತ್ತೊರಿನ ಕೋಟೆಯ ಪರಿಸರ ಅಥವಾ ಬಯಲು ಸೀಮೆಯ ನದಿ ತೀರದ ಪ್ರದೇಶದ ಚಿತ್ರಣ ವಿರುವಂತೆ ರಂಗ ವಿನ್ಯಾಸ ಮಾಡಲು ಶಶಿಧರ ಅಡಪ ಚಿಂತಿಸಿದ್ದಾರೆ.
ನೂರಾರು ಕಲಾವಿದರ ಅಭಿನಯ: ಇಡೀ ನಾಟಕದಲ್ಲಿ 60- 70 ವಚನಗಳನ್ನು ಬಳಸಿಕೊಳ್ಳಲು ಚಿಂತಿಸಲಾಗಿದ್ದು, ನಾಟಕಕ್ಕೆ ಹಂಸಲೇಖ ಸಂಗೀತ ನೀಡಲಿದ್ದಾರೆ. ಒಟ್ಟು 300ಕ್ಕೂ ಹೆಚ್ಚು ವಚನಗಾರರನ್ನು ವೇದಿಕೆ ಮೇಲೆ ತರಲು ಸಾಧ್ಯವಿಲ್ಲದ್ದಿರೂ, 12ನೇ ಶತಮಾನದ ಬಹುತೇಕ ವಚನಕಾರರನ್ನು ರಂಗದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುವುದು. ಎನ್‌ಎಸ್‌ಡಿಯಲ್ಲಿ ಕಲಿಯಲು ಮುಂದಿನ ಶೈಕ್ಷಣಿಕ ವರ್ಷಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಹೊರಗಿನ ಕಲಾವಿದರು ಅಭಿನಯಿಸಲಿದ್ದಾರೆ. 100 ರಿಂದ 125 ಕಲಾವಿದರನ್ನೊಳಗೊಂಡ ದೊಡ್ಡ ನಾಟಕ ಪ್ರದರ್ಶನ ಇದಾಗಿರಲಿದೆ.
ಮತ್ತೊಮ್ಮೆ ಮಲೆಗಳಲ್ಲಿ ಮದುಮಗಳು: ವಚನ ಚಳವಳಿಯ ನಾಟಕ ಪ್ರದರ್ಶನ 1.25 ಕೋಟಿ ವೆಚ್ಚದಲ್ಲಿ ರೂಪುಗೊಳ್ಳುತ್ತಿರುವ ಯೋಜನೆ. ಇದಕ್ಕಾಗಿ ಕನ್ನಡ ಸಂಸ್ಕೃತಿ ಇಲಾಖೆ 75 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿದೆ. ಇನ್ನೂ 25 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಇಲಾಖೆಗೆ ಎನ್‌ಎಸ್‌ಡಿಯಿಂದ ಮನವಿ ಮಾಡಲಾಗಿದೆ. ಈ ಬಾರಿ ದಸರ ವೇಳೆ ವಚನ ಚಳವಳಿ ರಂಗದ ಮೇಲೆ ಮೋಡಿ ಮಾಡಲಿದೆ. ಆದರೆ, ಅದಕ್ಕೂ ಮುನ್ನ ಮಲೆಗಳಲ್ಲಿ ಮದುಮಗಳು ನಾಟಕವನ್ನು ರಂಗಪ್ರಿಯರಿಗಾಗಿ ಮತ್ತೊಮ್ಮೆ ಪ್ರದರ್ಶನ ಮಾಡಲು ಎನ್‌ಎಸ್‌ಡಿ ಚಿಂತನೆ ನಡೆಸಿದೆ.
12ನೇ ಶತಮಾನ ಇವತ್ತಿನ ಚಿಂತನೆಗಳಿಗೆ ತದ್ವಿರುದ್ಧವಾಗಿ ಇತ್ತು. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಂದಿನ ಅನುಭವ ಮಂಟಪ ಮಾದರಿಯಾಗಿತ್ತು. ಕೋಮುಗಲಭೆ, ಭಾಷೆ ಗಲಭೆ ವಿಕಾರ ಸ್ವರೂಪ ಪಡೆಯುತ್ತಿರುವ ಹೊತ್ತಿನಲ್ಲಿ ವಚನ ಕಲ್ಯಾಣ ನಾಟಕ ಪ್ರಸ್ತುತವಾಗಲಿದೆ.
-ಬಸವಲಿಂಗಯ್ಯ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ನಿರ್ದೇಶಕ
* ಶ್ರುತಿ ಮಲೆನಾಡತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.