ವಿವಿಧ ಇಲಾಖೆಗಳು ಸಾಧನೆಯಲ್ಲಿ”ಜಸ್ಟ್ ಪಾಸ್’ ಆಗಲೂ ತಿಣುಕಾಡ್ತಿವೆ
Team Udayavani, Feb 9, 2018, 6:15 AM IST
ವಿಧಾನಸಭೆ: ಕೃಷಿ, ಜಲಸಂಪನ್ಮೂಲ, ಮೂಲಸೌಕರ್ಯ, ಲೋಕೋಪಯೋಗಿ ಇಲಾಖೆಗಳು ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಹಣ ವೆಚ್ಚ ಮಾಡದೆ ಸಾಧನೆಯಲ್ಲಿ ಜಸ್ಟ್ ಪಾಸ್ ಆಗಲು ತಿಣುಕಾಡುತ್ತಿವೆ ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೃಷಿ ಇಲಾಖೆಯಲ್ಲಿ ಶೇ.42, ಜಲಸಂಪನ್ಮೂಲ ಇಲಾಖೆಯಲ್ಲಿ ಶೇ.35, ನಗರಾಭಿವೃದ್ಧಿ ಇಲಾಖೆಯಲ್ಲಿ ಶೇ.37, ಮೂಲಸೌಕರ್ಯ ಇಲಾಖೆಯಲ್ಲಿ ಶೇ.23.19, ಲೋಕೋಪಯೋಗಿ ಇಲಾಖೆಯಲ್ಲಿ ಶೇ.28.74ರಷ್ಟು ಮಾತ್ರ ಸಾಧನೆಯಾಗಿದೆ ಎಂದು ದೂರಿದರು.
ಪ್ರಸಕ್ತ ಆರ್ಥಿಕ ವರ್ಷದ ನವೆಂಬರ್ ವೇಳೆಗೆ ಸರ್ಕಾರವೇ ನೀಡಿರುವ ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ ಶೇ.40ರಷ್ಟು ಪ್ರಗತಿ ಸಾಧಿಸಿಲ್ಲ. ಹೀಗಿರುವಾಗ ಮಾರ್ಚ್ ವೇಳೆಗೆ 100ರಷ್ಟು ಹಣ ಹೇಗೆ ವೆಚ್ಚ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ಸರ್ಕಾರ ನಂ.1 ಎಂದು ಹೇಳಿಕೊಂಡರೆ ಸಾಲದು. ಭೌತಿಕವಾಗಿಯೂ ಸಾಧನೆ ಮಾಡಬೇಕು. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಭಾವನೆ ಜನರಲ್ಲಿದೆ ಎಂದು ಹೇಳಿದರು.
ಮಾಜಿ ಸಚಿವ ಚಿಂಚನಸೂರ್ ಅವರಿಗೆ ಗಂಜಿ ಕೇಂದ್ರವಾಗಿ ಪ್ರಾಧಿಕಾರದ ಅಧ್ಯಕ್ಷಗಿರಿ ನೀಡಲಾಗಿದೆ.ಅವರು 81 ಸಂಘಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಂಬ ಹೆಸರಿನಲ್ಲಿ ಲಕ್ಷಾಂತರ ರೂ. ಬಿಡುಗಡೆ ಮಾಡಿದ್ದಾರೆ. ಆ ಪೈಕಿ ಕಲಬುರಗಿಯ 32 ಸಂಘಗಳಿವೆ. ಸಂಘಗಳಿಗೆ ಗಡಿಯಲ್ಲಿ ಯಾವ ಅಭಿವೃದ್ಧಿಯಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.
ಹಣ ಬಿಡುಗಡೆ ವಿಚಾರದಲ್ಲಿ ದೂರು ಅರ್ಜಿ ಕೊಟ್ಟರೆ ಅವರೊಂದಿಗೆ ಪ್ರಾಧಿಕಾರದ ಅಧ್ಯಕ್ಷರು ಡೀಲಿಂಗ್ ನಡೆಸಿ ದೂರು ವಾಪಸ್ ಪಡೆಯುವಂತೆ ಮಾತುಕತೆ ನಡೆಸಿದ್ದಾರೆ. ಆ ಬಗ್ಗೆ ಸೀಡಿ ಸಹ ಇದೆ ಎಂದು ಸದನದಲ್ಲಿ ಪ್ರದರ್ಶಿಸಿದರು.
ಸಚಿವ ಎಂ.ಬಿ.ಪಾಟೀಲ್ ಜಾಸ್ತಿ ಮಾತಾಡ್ತಾರೆ…
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಸದನದಲ್ಲಿ ಜಾಸ್ತಿ ಮಾತಾಡುತ್ತಾರೆ. ಆದರೆ, ಅವರ ಇಲಾಖೆ ಜಸ್ಟ್ ಪಾಸ್. ಬಜೆಟ್‌ನಲ್ಲಿ ಮೀಸಲಿಟ್ಟ ಹಣದಲ್ಲಿ ಶೇ.35ರಷ್ಟು ಮಾತ್ರ ವೆಚ್ಚ ಮಾಡಲಾಗಿದೆ. ವಿನಯ ಕುಲಕರ್ಣಿ ಹಾಗೂ ಎಂ.ಬಿ.ಪಾಟೀಲ್ ಅವರನ್ನು ಧರ್ಮ ರಾಜಕಾರಣಕ್ಕೆ ಮುಖ್ಯಮಂತ್ರಿಯವರು ಹಚ್ಚಿದ್ದಾರೆ. ಹೀಗಾಗಿ, ಅವರು ಇಲಾಖೆಯ ಬಗ್ಗೆ ಗಮನ ಹರಿಸಿಲ್ಲ ಎಂದು ಶೆಟ್ಟರ್ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.