ವಾಟಾಳ್‌, ಸರ್ಕಾರಕ್ಕೆ ಹೈ ನೋಟಿಸ್‌


Team Udayavani, Jan 30, 2018, 12:13 PM IST

highcourt2.jpg

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಫೆ.4ರಂದು ಬೆಂಗಳೂರು ಬಂದ್‌ಗೆ ಕರೆಕೊಟ್ಟಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಹಾಗೂ ಪಿ.ಎಸ್‌.ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘದ ಅಧ್ಯಕ್ಷ ಸಿ.ರಾಜಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದಿಸಿ, ಮಹದಾಯಿ ನದಿ ನೀರು ಹಂಚಿಕೆ ಇತ್ಯರ್ಥಕ್ಕೆ ಆಗ್ರಹಿಸಿ ಈಗಾಗಲೇ ಜ.25ರಂದು ರಾಜ್ಯ ಬಂದ್‌ ನಡೆಸಲಾಗಿದೆ. ಅದೇ ವಿಚಾರಕ್ಕೆ ಸಂಬಂಧಿಸಿ ಇದೀಗ ಫೆ.4ರಂದು ಬೆಂಗಳೂರು ಬಂದ್‌ ನಡೆಸುವುದಾಗಿ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.

ಕೇವಲ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಬಂದ್‌ ಕರೆ ನೀಡಿದರೆ, ವಿದ್ಯಾರ್ಥಿಗಳಿಗೆ, ದಿನಗೂಲಿ ಕಾರ್ಮಿಕರಿಗೆ ಮತ್ತು ರಾಜ್ಯದ ಜನತೆಗೆ ಸಾಕಷ್ಟು ತೊಂದರೆಯಾಗಲಿದೆ. ಮೇಲಾಗಿ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗಲಿದೆ. ಬಂದ್‌ ನಡೆಸುವುದು ಅಸಂವಿಧಾನಿಕ, ಅಕ್ರಮ ಹಾಗೂ ನಿರಂಕುಶತೆ  ಮತ್ತು ಸಾಮಾನ್ಯ ಪ್ರಜೆಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿ, ಬಂದ್‌ ನಡೆಸವುದನ್ನೇ ನಿರ್ಬಂಧಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬಂದ್‌ ನಡೆಸುವುದು ಅಸಾಂವಿಧಾನಿಕ ಎಂದು ಘೋಷಿಸಲು ಸಂವಿಧಾನ ಬದ್ಧವಾಗಿ ಅವಕಾಶವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ವಕೀಲರನ್ನು ಕೋರಿತು. ಅಲ್ಲದೆ, ಬಂದ್‌ ಕುರಿತು ರಾಜ್ಯಸರ್ಕಾರದ ನಿಲುವೇನು ಎಂದು ಪ್ರಶ್ನಿಸಿತು. ಸರ್ಕಾರದ ಪರ ವಕೀಲರು, ಬಂದ್‌ ನಡೆಸಲು ನಮ್ಮದೇನು ಅನುಮತಿಯಿಲ್ಲ.

ಆದರೆ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಬಂದ್‌ಗೆ ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ತಾಕೀತು ಮಾಡಿ ಪ್ರತಿವಾದಿ ವಾಟಾಳ್‌ ನಾಗರಾಜ್‌ಗೆ ತುರ್ತು  ನೋಟಿಸ್‌ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ಫೆ.2ಕ್ಕೆ ವಿಚಾರಣೆ ಮುಂದೂಡಿತು.

ಟಾಪ್ ನ್ಯೂಸ್

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

1-aap

Sisodia; ಯಾವ ರಾವಣನಿಂದಲೂ ರಾಮ-ಲಕ್ಷ್ಮಣರನ್ನು ಬೇರ್ಪಡಿಸಲು ಸಾಧ್ಯವಿಲ್ಲ

1-asdsad

Tirupati laddu ಅಪವಿತ್ರ: ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಜಗನ್ ರೆಡ್ಡಿ

Thirupathi-Laddu

Tirupati Laddu Row: ತಿರುಪತಿ ಶ್ರೀವಾರಿ ಲಡ್ಡು ಈಗ ಪರಿಶುದ್ಧ: ದೇವಸ್ಥಾನ ಸಮಿತಿ

1-siddu-aa

TB Dam; ಮೈತುಂಬಿಕೊಂಡ ತುಂಗಭದ್ರೆಗೆ ಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

Parvati Nair: ಮನೆ ಕೆಲಸದವನ ಮೇಲೆ ಹಲ್ಲೆ ಆರೋಪ; ನಟಿ ಪಾರ್ವತಿ ನಾಯರ್‌ ವಿರುದ್ಧ ಕೇಸ್‌

1-tirupati-laddu

Tirupati laddu ಅಪವಿತ್ರ: ಎಸ್ ಐಟಿ ತನಿಖೆಗೆ ಆಗ್ರಹಿಸಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

Dengue fever: ನಗರದಲ್ಲಿ ಡೆಂಘೀ ಹತೋಟಿಗೆ ತಂದ ಬಿಬಿಎಂಪಿ

2

Crime: ಪ್ರೇಯಸಿ ಜತೆ ಸುತ್ತಾಡಿದ್ದಕ್ಕೆ ಹತ್ಯೆಗೈದ ಪ್ರಿಯಕರ!

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

Arrested: ಐಪಿಎಸ್‌ ಅಧಿಕಾರಿ ಪುತ್ರನ ಮೇಲೆ ಹಲ್ಲೆ; ಇಬ್ಬರ ಬಂಧನ

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Alert Cop Averts Mishap After Bmtc Bus Driver  got chest pain

Bengaluru; ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

Bollywood: ಪಾಕ್‌ ನಟ ಫವಾದ್‌ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್‌ ಕಂಬ್ಯಾಕ್

1-aap

Sisodia; ಯಾವ ರಾವಣನಿಂದಲೂ ರಾಮ-ಲಕ್ಷ್ಮಣರನ್ನು ಬೇರ್ಪಡಿಸಲು ಸಾಧ್ಯವಿಲ್ಲ

12

Manipal: ಪಾರ್ಕಿಂಗ್‌ ತಾಣವಾಗುತ್ತಿರುವ ಬಸ್‌ ನಿಲ್ದಾಣಗಳು!

11(1)

Hiriydaka: ಹಳೆ ಕಟ್ಟಡಗಳ ತೆರವಿಗೆ ದಿನ ನಿಗದಿ

1-asdsad

Tirupati laddu ಅಪವಿತ್ರ: ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಜಗನ್ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.