ಜಾಗ ಇದ್ರಷ್ಟೇ ವಾಹನ ನೋಂದಣಿ
Team Udayavani, Dec 13, 2019, 11:25 AM IST
ಬೆಂಗಳೂರು: ನಗರದಲ್ಲಿ ಹೊಸ ವಾಹನ ಖರೀದಿಸುವವರು ಕಡ್ಡಾಯವಾಗಿ ಆ ವಾಹನ ನಿಲುಗಡೆಗೆ ಜಾಗ ಇರುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಇನ್ನು ಈಗಾಗಲೇ ವಾಹನ ಇರುವವರಿಗೆ ಜಾಗದ ಲಭ್ಯತೆಗೆ ಸಂಬಂಧಿಸಿದಂತೆ ದೃಢೀಕರಿಸಲು ಎರಡು ವರ್ಷಗಳ ಕಾಲಾವಕಾಶ ನೀಡಬೇಕು. ನಿಗದಿತ ಅವಧಿಯಲ್ಲಿ ಸಲ್ಲಿಸದಿದ್ದರೆ, “ದಂಡ ಪ್ರಯೋಗ’ ಮಾಡಬೇಕು.
– ಹೀಗಂತ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್ಟಿ) ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಂಯುಕ್ತವಾಗಿ ಸಿದ್ಧಪಡಿಸಿದ ಸಮಗ್ರ ಸಂಚಾರ ಯೋಜನೆ (ಸಿಎಂಪಿ)ಯ ಕರಡಿನಲ್ಲಿ ಶಿಫಾರಸು ಮಾಡಲಾಗಿದೆ. ವಸತಿ ಪ್ರದೇಶಗಳ ರಸ್ತೆಯುದ್ದಕ್ಕೂ ಕಾರು ಮತ್ತಿತರ ಪ್ರಕಾರದ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ರಸ್ತೆಯ ಶೇ. 25 ಭಾಗವು ಈ ಅನಧಿಕೃತ ವಾಹನ ನಿಲುಗಡೆ ಅತಿಕ್ರಮಿಸುತ್ತಿದೆ. ಪರಿಣಾಮ ನಗರದ ಭೂಬಳಕೆಯಲ್ಲಿ ವ್ಯತ್ಯಾಸ ಆಗುತ್ತಿದ್ದು, ವಾಹನಗಳ ಸರಾಸರಿ ವೇಗ ಕಡಿಮೆ ಆಗುವುದರ ಜತೆಗೆ ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೊಸ ವಾಹನಗಳ ನೋಂದಣಿಗೂ ಮುನ್ನ ಆ ವಾಹನ ನಿಲುಗಡೆಗೆ ಜಾಗದ ಲಭ್ಯತೆ ಬಗ್ಗೆ ಮಾಲಿಕರು ದೃಢೀಕರಿಸಬೇಕು. ಪ್ರಸ್ತುತ ಇರುವ ವಾಹನಗಳಿಗೆ ಈ ದೃಢೀಕರಣಕ್ಕೆ ಎರಡು ವರ್ಷ ಕಾಲಾವಕಾಶ ನೀಡಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
ಕಲ್ಯಾಣ ಮಂಟಪಗಳಿಗೂ ಕಡ್ಡಾಯ? ಕಲ್ಯಾಣ ಮಂಟಪಗಳು, ದೊಡ್ಡ ರೆಸ್ಟೋರೆಂಟ್ ಗಳು, ಚಿತ್ರಮಂದಿರಗಳು, ಶಾಪಿಂಗ್ ಕೇಂದ್ರಗಳು ಮತ್ತಿತರ ಕಡೆಗಳಲ್ಲಿ “ಪೀಕ್ ಲೋಡ್ ಪಾರ್ಕಿಂಗ್’ (ದಟ್ಟಣೆ ನಿಲುಗಡೆ ವ್ಯವಸ್ಥೆ) ಸೌಲಭ್ಯ ಹೊಂದಿರುವ ಬಗ್ಗೆಯೂ ದೃಢೀಕರಿಸಿಕೊಳ್ಳಬೇಕು ಎಂದೂ ಕರಡಿನಲ್ಲಿ ತಜ್ಞರು ಶಿಫಾರಸು ಮಾಡಿದ್ದಾರೆ.
ಮೋಟಾರು ವಾಹನ ಕಾಯ್ದೆ ಮತ್ತು ಮಹಾನಗರ ಪಾಲಿಕೆ ಬೈಲಾ ಮೂಲಕ ಈ ಸಂಬಂಧದ ನಿಯಮ ರೂಪಿಸಬೇಕು. ಕಟ್ಟಡ ನಿರ್ಮಾಣ ಯೋಜನೆಗೆ ಅನುಮೋದನೆ ನೀಡುವ ವ್ಯವಸ್ಥೆಯಲ್ಲೂ ಈ ವಾಹನ ನಿಲುಗಡೆ ಜಾಗದ ಲಭ್ಯತೆಗೆ ಸಂಬಂಧಿಸಿದ ನಿಯಮ ಇರಬೇಕು. ಇದಲ್ಲದೆ, ಆನ್-ಸ್ಟ್ರೀಟ್ ಪಾರ್ಕಿಂಗ್ (ರಸ್ತೆಗಳ ಬದಿ ನಿಲುಗಡೆ) ಪ್ರೋತ್ಸಾಹಿಸದಿರಲು “ವಾಹನ ನಿಲುಗಡೆ ಶುಲ್ಕ’ ನೀತಿ ಪರಿಚಯಿಸಬೇಕು. ಈಗಾಗಲೇ ಇರುವ ಆನ್-ಸ್ಟ್ರೀಟ್ ಪಾರ್ಕಿಂಗ್ ಶುಲ್ಕಕ್ಕಿಂತ ಆಫ್-ಸ್ಟ್ರೀಟ್ ಪಾರ್ಕಿಂಗ್ (ವಾಹನ ನಿಲುಗಡೆಗಾಗಿಯೇ ನಿರ್ಮಿಸಿದ ತಾಣಗಳು) ಶುಲ್ಕ ಕಡಿಮೆ ಇರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Arrested: ಟ್ಯಾಟೂ ಆರ್ಟಿಸ್ಟ್ ಬಂಧನ: 2.50 ಕೋಟಿ ರೂ. ಡ್ರಗ್ಸ್ ಜಪ್ತಿ
Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.