ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧ?

ಐಐಎಸ್ಸಿಯಿಂದ ಸರ್ಕಾರಕ್ಕೆ ಶಿಫಾರಸು | ನಿಷೇಧದಿಂದ 1.40 ಲಕ್ಷ ಕಿ.ಮೀ. "ವಾಹನಗಳ ಕ್ರಮಿಸುವ ಪ್ರಮಾಣ' ಇಳಿಕೆ

Team Udayavani, Sep 11, 2020, 11:24 AM IST

ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧ?

ಸಾಂದರ್ಭಿಕ ಚಿತ್ರ

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ವಾಹನಗಳ ಸಂಚಾರ ನಿಷೇಧದಿಂದ ಬೆಂಗಳೂರು ಮಹಾನಗರ ಪ್ರದೇಶದಲ್ಲಿ ವಾಹನಗಳ ಕ್ರಮಿಸುವ ದೂರ (ಕಿ.ಮೀ. ಗಳಲ್ಲಿ) ಕಡಿಮೆಯಾಗಿದ್ದು, ಪರೋಕ್ಷವಾಗಿ ಇದು ವಾಯುಮಾಲಿನ್ಯ ತಗ್ಗುವಿಕೆಗೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯಾನದಲ್ಲಿ ಶಾಶ್ವತವಾಗಿ ವಾಹನ ಸಂಚಾರ ನಿಷೇಧಿಸಬೇಕು.

ಹೀಗೆಂದು, ಪ್ರತಿಷ್ಠಿತ ಭಾರತೀಯ ಸಂಶೋಧನಾ ಸಂಸ್ಥೆ (ಐಐಎಸ್ಸಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ.ಐಐಎಸ್ಸಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಸಾರಿಗೆ ವ್ಯವಸ್ಥೆಗಳ ಎಂಜಿನಿಯರಿಂಗ್‌ನ ಸಹ ಪ್ರಾಧ್ಯಾಪಕ ಹಾಗೂ ಭಾರತೀಯ ಸಾರಿಗೆ ಸಂಶೋಧನಾ ಸಮೂಹದ ಅಧ್ಯಕ್ಷ ಪ್ರೊ.ಆಶಿಶ್‌ ವರ್ಮ ನೇತೃತ್ವದ ತಜ್ಞರ ತಂಡ “ಕಬ್ಬನ್‌ ಉದ್ಯಾನದಲ್ಲಿವಾಹನಗಳ ನಿಷೇಧದಿಂದ ಸಂಚಾರ ದಟ್ಟಣೆ ಮೇಲಿನ ಪರಿಣಾಮ’ ಕುರಿತು ವೈಜ್ಞಾನಿಕ ವರದಿ ಸಿದ್ಧಪಡಿಸಿದೆ.ಅದರಂತೆ ಕಬ್ಬನ್‌ ಉದ್ಯಾನದಲ್ಲಿ ವಾಹನಗಳ ಸಂಚಾರ ನಿಷೇಧಿಸಿದ್ದರಿಂದ ಒಟ್ಟಾರೆ ಬೆಂಗಳೂರು ಮಹಾನಗರ ಪ್ರದೇಶದಲ್ಲಿ ನಿತ್ಯ 1.40 ಲಕ್ಷ ಕಿ.ಮೀ. ವಾಹನಗಳ ಕ್ರಮಿಸುವ ಪ್ರಮಾಣ ಕಡಿಮೆಯಾಗಿದೆ.

ಸಾಮಾನ್ಯವಾಗಿ ಉದ್ಯಾನದ ಸುತ್ತಲಿನ ರಸ್ತೆಗಳ ಮೂಲಕ ಹಾದುಹೋಗುವ ವಾಹನ ಸವಾರರು ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಹಾಗೂ ಶುದ್ಧ ಗಾಳಿ ಇರುವುದರಿಂದ ತುಸು ದೂರವಾದರೂ ಉದ್ಯಾನದಲ್ಲಿ ನುಸುಳುತ್ತಿದ್ದರು. ಆದರೆ, ನಿಷೇಧದಸಮಯದಲ್ಲಿ ಆ ಸವಾರರು ಪರ್ಯಾಯ ಮಾರ್ಗ ಬಳಸುತ್ತಿದ್ದಾರೆ. ಇದರಿಂದ ನೆರೆಯ ರಸ್ತೆಗಳ ಮೇಲೂ ಯಾವುದೇ ರೀತಿ ವಾಹನ ದಟ್ಟಣೆ ಏರಿಕೆ ಆಗಿಲ್ಲ. ಇದೆಲ್ಲದರ ಪರಿಣಾಮ ನಿತ್ಯ 32.08 ದಶಲಕ್ಷ ಕಿ.ಮೀ. ಸಂಚರಿಸುತ್ತಿದ್ದ ವಾಹನಗಳು ಕ್ರಮಿಸುವ ದೂರ(ವೆಹಿಕಲ್‌ ಕಿಲೋಮೀಟರ್ ಟ್ರಾವೆಲ್ಡ್‌-ವಿಕೆಟಿ) ಈಗ 31.94 ದಶಲಕ್ಷ ಕಿ.ಮೀ.ಗೆ ತಗ್ಗಿದೆ. ಅಂದರೆ ಶೇ.0.44ರಷ್ಟು ಇಳಿಕೆಯಾಗಿದೆ ಎಂಬ ಅಂಶ ವರದಿಯಿಂದ ಬೆಳಕಿಗೆ ಬಂದಿದೆ.

ತಗ್ಗಲಿದೆ ವಾಯು ಮಾಲಿನ್ಯ: ತಜ್ಞರು ವೆಹಿಕಲ್‌ ಕಿಲೋಮೀಟರ್ ಟ್ರಾವೆಲ್ಡ್‌ ಅನ್ನು ಸಾಮಾನ್ಯ ಬಳಕೆ ಮತ್ತು ಕಬ್ಬನ್‌ ಉದ್ಯಾನದಲ್ಲಿ ಟ್ರಾಫಿಕ್‌ ಇಲ್ಲದಿರುವ ಸಂದರ್ಭ ಎಂದು 2 ರೀತಿ ವಿಂಗಡಿಸಿದ್ದಾರೆ. ಆಗ ಈ ವ್ಯತ್ಯಾಸ ಕಂಡು ಬಂದಿದೆ. ಅಷ್ಟೇ ಅಲ್ಲ, ಕಾರ್ಬನ್‌ ಡೈ ಆಕ್ಸೈಡ್‌, ಉಸಿರಾಡುವಾಗ ದೇಹ ಸೇರುವ ದೂಳಿನ ಕಣ 2.5 ಪ್ರಮಾಣ ಕ್ರಮವಾಗಿ ನಿತ್ಯ (ಪ್ರತಿ ವ್ಯಕ್ತಿಗೆ) ಶೇ.59, ಶೇ. 1.33 ತಗ್ಗಿರುವುದು ಕಂಡು ಬಂದಿದೆ. ಅಷ್ಟಕ್ಕೂ ಕಬ್ಬನ್‌ ಉದ್ಯಾನವನ್ನು ಸಂಚಾರ ಮುಕ್ತಗೊಳಿಸಿದಾಗಲೂ ನೃಪತುಂಗ, ಡಾ.ಅಂಬೇಡ್ಕರ್‌ರಸ್ತೆ ಸೇರಿ ಸುತ್ತಲಿನ ರಸ್ತೆಗಳಲ್ಲಿಯೂ ದಟ್ಟಣೆ ತಗ್ಗಿರುವುದು ಕಂಡಿಲ್ಲ. ಹೀಗಾಗಿ ಈಗ ಉದ್ಯಾನವನ್ನು ಮುಕ್ತಗೊಳಿಸುವುದರಿಂದ ಯಾವುದೇ ಪ್ರಯೋಜನಗಳಿಲ್ಲ. ಬದಲಿಗೆ ವಾಹನ ಸಂಚಾರ ನಿಷೇಧದಿಂದ ನಗರದ “ಲಂಗ್‌ ಸ್ಪೇಸ್‌’ ಅನ್ನು ರಕ್ಷಿಸಿದಂತಾಗುತ್ತದೆ. ಹೀಗೆ ಶಾಶ್ವತವಾಗಿ ವಾಹನ ಸಂಚಾರವನ್ನು ನ್ಯೂಯಾರ್ಕ್‌ನ ಕೇಂದ್ರೀಯ ಉದ್ಯಾನ (ಸೆಂಟ್ರಲ್‌ ಪಾರ್ಕ್‌)ವನ್ನು ಅಲ್ಲಿನ ನಗರ ಪ್ರಾಧಿಕಾರ ನಿಷೇಧಿಸಿದ ಉದಾಹರಣೆ ಕೂಡ ಇದೆ ಎಂದೂ ವರದಿ ತಿಳಿಸಿದೆ.

‌ಸಂಸ್ಥೆ ಶಿಫಾರಸುಗಳು ಏನೇನು? :

  • ವಾಹನ ಕ್ರಮಿಸುವ ದೂರ, ಅದರಿಂದ ವಾಯುಮಾಲಿನ್ಯ ತಗ್ಗುವಿಕೆ ದೃಷ್ಟಿಯಿಂದ ಕಬ್ಬನ್‌ ಉದ್ಯಾನದಲ್ಲಿ ಶಾಶ್ವತವಾಗಿ ಸಂಚಾರ ನಿಷೇಧಿಸಬೇಕು.
  • ನಿಷೇಧಿಸಿದರೆ ಸಮೂಹ ಸಾರಿಗೆ, ಸೈಕ್ಲಿಂಗ್‌, ವಾಕಿಂಗ್‌ ಉತ್ತೇಜಿಸಿದಂತಾಗುತ್ತದೆ.
  • ಈಗಾಗಲೇ ಉದ್ಯಾನದ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ತುಸು ಅನನುಕೂಲ ಆಗಬಹುದು. ಇದನ್ನು ತಪ್ಪಿಸಲು ಕಬ್ಬನ್‌ ಉದ್ಯಾನಕ್ಕೆ ಬಸ್‌-ಮೆಟ್ರೋ ಸೇವೆ ಹೆಚ್ಚಿಸಬೇಕು.
  • ಅಲ್ಲಿನ ನೌಕರರು-ಭೇಟಿ ನೀಡುವವರ ಬಗ್ಗೆ ಸಮೀಕ್ಷೆ ನಡೆಸಿ, ಹತ್ತಿರದ ಮೆಟ್ರೋ ನಿಲ್ದಾಣ  ದಿಂದ ಆಯಾ ಕಚೇರಿಗಳಿಗೆ ಸಮೂಹ ಸಾರಿಗೆ ಸೇವೆ ಒದಗಿಸಬೇಕು. ಅಲ್ಲದೆ ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ಸುಧಾರಿಸಬೇಕು
  • ನಗರದ ಉದ್ಯಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೆಲದಡಿ ಅತ್ಯಂತ ಕಡಿಮೆ ಪ್ರಮಾಣದ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು.
  • ಸಾಮಾಜಿಕ ಚಟುವಟಿಕೆಗೆ ಉದ್ಯಾನವನ್ನು ಮತ್ತಷ್ಟು ಮುಕ್ತಗೊಳಿಸಬೇಕು. ಈ ಬಗ್ಗೆ ನೀಲನಕ್ಷೆ-ದೀರ್ಘಾವಧಿ ಯೋಜನೆ ರೂಪಿಸುವ ಅವಶ್ಯಕತೆ ಇದೆ.

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.