ವರ್ಷಗಳು ಕಳೆದ್ರೂ ಬಗೆಹರಿಯದ ಕಗ್ಗಂಟು
ಮತ್ತೆ ಶಾಶ್ವತ ಭೂಸ್ವಾಧೀನಕ್ಕೆ ಬಿಎಂಆರ್‌ಸಿಎಲ್ ಚಿಂತನೆ; 3,700 ಚ.ಮೀ. ಬದಲಿಗೆ 850 ಚ.ಮೀ.ಗೆ ಸೀಮಿತ
Team Udayavani, Aug 25, 2021, 4:04 PM IST
ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗ ಮಾರ್ಗಕ್ಕೆ ಕಗ್ಗಂಟಾಗಿರುವ ವೆಲ್ಲಾರ ಜಂಕ್ಷನ್ ಬಳಿಯ ಚರ್ಚ್ ಜಾಗವನ್ನು ಅಗತ್ಯಬಿದ್ದರೆ ಶಾಶ್ವತವಾಗಿ ಭೂಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ಚಿಂತನೆ ನಡೆಸಿದೆ.
ಡೇರಿ ವೃತ್ತ-ನಾಗವಾರ ನಡುವಿನ ಮೆಟ್ರೋ ಸುರಂಗ ಮಾರ್ಗವು ವೆಲ್ಲಾರ ಜಂಕ್ಷನ್ ಮೂಲಕ ಹಾದುಹೋಗಲಿದ್ದು, ಜಂಕ್ಷನ್ ಬಳಿ ಒಂದು ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಬಂಧದ ಕಾಮಗಾರಿಗೆ ಆಲ್ ಸೆಂಟ್ಸ್ ಚರ್ಚ್ ಆವರಣದ ಸುಮಾರು 850 ಚದರ ಮೀಟರ್ ನಷ್ಟು ತಾತ್ಕಾಲಿಕ ಜಾಗದ ಅವಶ್ಯಕತೆ ಇದೆ. ಇದಕ್ಕಾಗಿ ಹಲವು ಬಾರಿ ಚರ್ಚ್ ಆಡಳಿತ ಮಂಡಳಿ ಜತೆ ಚರ್ಚೆ ನಡೆಸಿದರೂ ಮಾತುಕತೆ ವಿಫಲವಾಗಿದೆ.
ಕಳೆದ ಎರಡೂವರೆ ವರ್ಷಗಳಿಂದ ಈ ಜಾಗಕ್ಕಾಗಿ ಬಿಎಂಆರ್‌ಸಿಎಲ್ -ಚರ್ಚ್ ನಡುವೆ ಮಾತುಕತೆ ನಿರಂತರವಾಗಿ ಸಾಗಿದೆ. ಈ ಅವಧಿಯಲ್ಲಿ ಬಿಎಂಆರ್ ಸಿಎಲ್‌ನಲ್ಲಿ ಮೂವರು ವ್ಯವಸ್ಥಾಪಕ ನಿರ್ದೇಶಕರು ಬದಲಾದರು. ಆದರೆ, ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ಮಧ್ಯೆ 3,700 ಚದರ ಮೀಟರ್ ನಷ್ಟು ಬೇಕಿದ್ದ ಜಾಗವನ್ನು ಬಿಎಂಆರ್‌ಸಿಎಲ್ 850 ಚದರ ಮೀಟರ್‌ಗೆ ಸೀಮಿತಗೊಳಿಸಿದೆ.
ಇದನ್ನೂ ಓದಿ:ನಟಿ ಸಂಜನಾ ಗಲ್ರಾನಿಗೆ ಅನಾರೋಗ್ಯ| ಆಸ್ಪತ್ರೆಗೆ ದಾಖಲು
20-25 ಮರಗಳ ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿತ್ತು. ಆದಾಗ್ಯೂ ಪೂರಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಶಾಶ್ವತ ಸ್ವಾಧೀನಕ್ಕೆ ನಿಗಮದ ಉದ್ದೇಶಿಸಿದ್ದು, ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಮತ್ತೊಮ್ಮೆ ಮನವೊಲಿಕೆ ಯತ್ನ: “3700 ಚದರ ಮೀಟರ್ ಜಾಗ ಬೇಕಿತ್ತು. ಆದರೆ, ಅದನ್ನು ನಾವು ಎಲ್ಲ ರೀತಿಯ ಕಸರತ್ತು ಮಾಡಿ 850 ಚದರ ಮೀಟರ್‌ಗೆ ಸೀಮಿತಗೊಳಿ ಸಲಾಗಿದೆ. ಅದೂ ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಉದ್ದೇಶಿತ ಜಾಗ ಹಿಂತಿರುಗಿ ಸಲಾಗುವುದು. ಮರಗಳ ಸ್ಥಳಾಂತರ ಮಾಡುವುದಾಗಿ ಹೇಳಿದ್ದೇವೆ. ಅದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಸಂಬಂಧ ಮತ್ತೊಂದು ಸುತ್ತಿನ ಮನವೊಲಿಕೆ ಪ್ರಯತ್ನ ನಡೆಯಲಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೇಳಿದರು.
“ಈಗಾಗಲೇ 3,800 ಚದರ ಮೀಟರ್‌ನಷ್ಟು ಜಾಗವನ್ನು ನೀಡಲಾಗಿದೆ. ಈಗ ಮತ್ತೆ ಚರ್ಚ್ ಆವರಣದಲ್ಲೇ ಕೇಳುತ್ತಿದ್ದಾರೆ. ಅಷ್ಟಕ್ಕೂಪರ್ಯಾಯ ಗಳಿದ್ದಾಗ್ಯೂ ಉದ್ದೇಶಿತ ಜಾಗದಲ್ಲೇ ಯೋಜನೆ ಕೈಗೆತ್ತಿಕೊಳ್ಳುವುದು ಸರಿ ಅಲ್ಲ. ಹಾಗಾಗಿ, ಬಿಎಂಆರ್‌ಸಿಎಲ್ ಪರ್ಯಾಯ ಮಾರ್ಗಗಳ ಕಡೆಗೆ ಯೋಚನೆ ಮಾಡುವುದು ಉತ್ತಮ’ ಎಂದು ಆಲ್ ಸೆಂಟ್ಸ್ ಸದಸ್ಯ ಎಬೆನಿಜರ್ ಪ್ರೇಮ್‌ಕುಮಾರ್ ತಿಳಿಸಿದರು.
ಪರ್ಯಾಯಗಳಿವೆ; ಸಮುದಾಯದ ವಾದ:
“ಈಗಾಗಲೇ ಮೆಟ್ರೋ ಯೋಜನೆಗೆ ಒಂದು ಭಾಗವನ್ನು ನೀಡಿದ್ದೇವೆ. ಈ ಹಿಂದೆ ಜಲಮಂಡಳಿಗೂ ನೀರು ಪೂರೈಕೆಗೆ ಸಂಬಂಧಿಸಿದಂತೆ ಎರಡು ಎಕರೆ ಕೊಡಲಾಗಿದೆ. ಇದೆಲ್ಲವೂ ಸಾರ್ವಜನಿಕ ಹಿತಾಸಕ್ತಿಯೇ ಆಗಿದೆ. ಈಗ ಚರ್ಚ್ ಆವರಣದ ಜಾಗವನ್ನು ಕೇಳಲಾಗುತ್ತಿದೆ. ಇದಕ್ಕಾಗಿ 80ಕ್ಕೂ ಹೆಚ್ಚು ಮರಗಳು ಬಲಿ ಆಗುತ್ತವೆ. ಎರಡು ಪ್ರವೇಶದ್ವಾರಗಳನ್ನು ಮುಚ್ಚ ಬೇಕಾಗುತ್ತದೆ. 800 ಜನ ಕುಳಿತುಕೊಳ್ಳಲು ಸಾಮರ್ಥ್ಯ ಇರುವ ಆವರಣ ಕೇವಲ 300 ಜನರಿಗೆ ಸೀಮಿತವಾಗುತ್ತದೆ. ವಾಹನಗಳ ನಿಲುಗಡೆಗೆ ಅವಕಾಶ ಇರುವುದಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಸುರಂಗ ಮಾರ್ಗ ಭೂಮಿಯ ಮೇಲ್ಮೈ ಯಿಂದ ಕೇವಲ ಮೂರು ಮೀಟರ್ ಆಳದಲ್ಲಿ ಹಾದುಹೋಗುತ್ತದೆ. ಭವಿಷ್ಯದಲ್ಲಿ ಆ ಭಾಗದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಲು ಆಗುವುದೇ ಇಲ್ಲ. ಅಂದರೆ ಶಾಶ್ವತವಾಗಿ ಆ ಜಾಗ ನಿರುಪಯುಕ್ತ ಆಗಲಿದೆ’ ಎಂಬುದು ಸಮುದಾಯದ ಮುಖಂಡರು ವಾದ ಮುಂದಿಡುತ್ತಾರೆ.
ಮೈಕೋ ಇಂಡಸ್ಟ್ರೀಸ್-ಲ್ಯಾಂಗ್‌ಫೋರ್ಡ್-ವೆಲ್ಲಾರ ಜಂಕ್ಷನ್ ನಡುವೆ ಮೂರು ನಿಲ್ದಾಣಗಳ ಬದಲಿಗೆ 2 ನಿಲ್ದಾಣ ಮಾಡಬಹುದು. ಅಂದರೆ
ವೆಲ್ಲಾರ ಜಂಕ್ಷನ್ ನಿಲ್ದಾಣವನ್ನು ಕೈಬಿಟ್ಟು, ಉಳಿದೆರಡನ್ನು ತುಸು ಹಿಂದೆ- ಮುಂದೆ ಮಾಡಬೇಕಾಗುತ್ತದೆ. ಆಗ 1.38 ಕಿ.ಮೀ.ಗೊಂದು
ನಿಲ್ದಾಣ ಆಗುತ್ತದೆ. ಕೋಟ್ಯಂತರ ಹಣ ಕೂಡ ಉಳಿತಾಯ ಆಗುತ್ತದೆ. ಅಥವಾ ಹೊಸೂರು ರಸ್ತೆಯ ಒಂದು ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಿ, ಅಲ್ಲಿ ನಿಲ್ದಾಣ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬಹುದು ಎಂದೂ ಸಮುದಾಯ ಆಗ್ರಹಿಸುತ್ತದೆ.
ನಿಗಮದ ವಾದ
ಆದರೆ, ಕೆಲವೇ ಕೆಲವರ ಹಿತಕ್ಕಾಗಿ ಒಂದು ನಿಲ್ದಾಣವನ್ನೇ ಕೈಬಿಡಲಾಗುವುದಿಲ್ಲ. ಇದರಿಂದ ಸಾವಿರಾರು ಜನರಿಗೆ ಭವಿಷ್ಯದಲ್ಲಿ ತೊಂದರೆ ಆಗಲಿದೆ. ಇದರ ಬದಲಿಗೆ ರಕ್ಷಣಾ ಇಲಾಖೆ ಜಾಗ ಪಡೆಯಬೇಕಾಗುತ್ತದೆ. ಇದಕ್ಕೆ ವರ್ಷಗಳೇ ಹಿಡಿಯುತ್ತದೆ. ಪರಿಣಾಮ ಯೋಜನೆ ವಿಳಂಬ ವಾಗುತ್ತದೆ. ನಗರದ ಅತಿ ಹೆಚ್ಚು ವಾಹನದಟ್ಟಣೆ ಇರುವ ರಸ್ತೆಗಳ ಪೈಕಿಹೊಸೂರು ರಸ್ತೆ ಕೂಡ ಒಂದು. ಅದನ್ನು ಸ್ಥಗಿತಗೊಳಿಸಿದರೆ,ಲಕ್ಷಾಂತರ ಜನ ನಾಲ್ಕೈದು ವರ್ಷ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸುತ್ತಾರೆ.
-ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.