Street trading: ಬೀದಿ ವ್ಯಾಪಾರಕ್ಕಾಗಿ ಶೀಘ್ರ ವೆಂಡಿಂಗ್ ಜೋನ್
Team Udayavani, Dec 19, 2023, 11:03 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಹಲವು ವಲಯಗಳಲ್ಲಿ ಶೀಘ್ರದಲ್ಲೇ ವೆಂಡಿಂಗ್ ಜೋನ್ ತಲೆ ಎತ್ತಲಿವೆ. ಈಗಾಗಲೇ ಪಾಲಿಕೆ ಫುಟ್‌ಪಾತ್ ವ್ಯಾಪಾರ ತೆರವು ಕಾರ್ಯಾಚರಣೆ ನಡೆಸಿರುವುದರಿಂದ ಬೀದಿ ವ್ಯಾಪಾರಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಪಟ್ಟಣ ವ್ಯಾಪಾರ ಸಮಿತಿ ವೆಂಡಿಂಗ್ ಜೋನ್ ತೆರೆಯಲು ಜಾಗಗಳ ಹುಡುಕಾಟ ನಡೆದಿದೆ. ಶೀಘ್ರದಲ್ಲೇ ಅಂತಿಮಗೊಳಿಸುವ ಸಾಧ್ಯತೆಯಿದೆ.
ಬೆಂಗಳೂರು ಹೊರತು ಪಡಿಸಿ ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಮೈಸೂರು, ತುಮಕೂರು ಹಾಸನ, ಕಾರವಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೆಂಡಿಂಗ್ ಜೋನ್ ಮತ್ತು ಫುಡ್‌ಸ್ಟ್ರೀಟ್ ತೆರೆಯಲಾಗಿದೆ. ಅದೇ ಮಾದರಿ ಸಿಲಿಕಾನ್ ಸಿಟಿಯಲ್ಲಿ “ವೆಂಡಿಂಗ್ ಜೋನ್ ಮತ್ತು ನೋ ವೆಂಡಿಂಗ್ ಜೋನ್’ಗಳು ತಲೆ ಎತ್ತಲಿವೆ. ಪಟ್ಟಣ ವ್ಯಾಪಾರ ಸಮಿತಿ ಸದಸ್ಯರು ಈಗಾಗಲೇ ಬಿಬಿಎಂಪಿ ವಲಯ ಎಂಜಿನಿಯರ್ ಜತೆಗೂಡಿ ವೆಂಡಿಂಗ್ ಜೋನ್ ತೆರೆಯುವ ಸಂಬಂಧ ಸ್ಥಳ ಪರಿಶೀಲಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಮಾರುಕಟ್ಟೆ ವಲಯ ತೆರೆಯಲು ಸ್ಥಳಗಳ ಸರ್ವೇ ಕಾರ್ಯ ನಡೆಸಲಾಗಿದೆ. ಮಲ್ಲೇ ಶ್ವರದ ಸಂಪಿಗೆ ರಸ್ತೆ, ಮಹದೇವಪುರ, ದಾಸನಪುರ, ಗಾಂಧಿನಗರ, ರಾಜರಾಜೇಶ್ವರಿ ನಗರ ವಲಯ, ಪಾಲಿಕೆ ದಕ್ಷಿಣ ವಲಯ, ಗೋವಿಂದರಾಜನಗರ ಸೇರಿದಂತೆ ಹಲವು ಕಡೆ ಸ್ಥಳ ಪರಿಶೀಲಿಸಲಾಗಿದೆ ಎಂದು ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಹಾಗೂ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರುಗಳ ಒಕ್ಕೂಟ ರಾಜ್ಯಾಧ್ಯಕ್ಷ ಸಿ.ಈ.ರಂಗಸ್ವಾಮಿ ಹೇಳುತ್ತಾರೆ.
ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಾಲ್ಕೈದು ವರ್ಷಗಳಿಂದ ರಾಜಧಾನಿಯಲ್ಲಿ ವೆಂಡಿಂಗ್ ಜೋನ್ ತೆರೆಯುವಂತೆ ಪಾಲಿಕೆಗೆ ಮನವಿ ಮಾಡುತ್ತಲೇ ಬರಲಾಗಿದೆ. ಆದರೆ, ಅಧಿಕಾರಿಗಳ ಇಚ್ಛಾಶಕ್ತಿ ಕೊರೆತೆಯಿಂದ ಸಾಧ್ಯವಾಗಲಿಲ್ಲ. ಫುಟ್‌ಪಾತ್ ಮೇಲೆ ವ್ಯಾಪಾರಿಗಳನ್ನು ಪಾಲಿಕೆ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ವೆಂಡಿಂಗ್ ಜೋನ್ ಇಲ್ಲದೆ ಬೀದಿ ವ್ಯಾಪಾರಿಗಳ ಜೀವನ ನಿರ್ಹಣೆಯೇ ಕಷ್ಟವಾಗಿದೆ ಎಂದು ದೂರುತ್ತಾರೆ.
ಸಮಿತಿಯಲ್ಲಿ ಅಂತಿಮ ನಿರ್ಧಾರ: ವೆಂಡಿಂಗ್ ಜೋನ್ ತೆರೆಯುವ ಬಗ್ಗೆ ಪಟ್ಟಣ ವ್ಯಾಪಾರ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ಸಮಿತಿಯಲ್ಲಿ ಚುನಾಯಿತ ಸದಸ್ಯರು, ಪಾಲಿಕೆ ಜಂಟಿ ಆಯುಕ್ತರು, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು, ಬ್ಯಾಂಕ್ ವ್ಯವಸ್ಥಾಪಕರು, ಎಂಜಿನಿಯರ್‌ಗಳು, ಮನೆ ನಿವಾಸಿ ಸಂಘ, ಕಾರ್ಮಿಕರ ಸಂಘ, ಅಂಗಡಿ ಮಾಲಿಕರು, ಎನ್‌ಜಿಒಗಳು ಇರಲಿವೆ.
ಪಟ್ಟಣ ಸಮಿತಿಯ ಚುನಾಯಿತ ಸದಸ್ಯರು ಸ್ಥಳ ಸರ್ವೇ ನಡೆಸಿದ ಬಳಿಕ ಆ ಪ್ರದೇಶಗಳ ಸಾಧಕ-ಬಾಧಕ, ಸಂಚಾರ ದಟ್ಟಣೆ, ಸ್ಥಳೀಯ ನಿವಾಸಿಗಳ ಹಿತ ಸೇರಿದಂತೆ ಮತ್ತಿತರರ ವಿಚಾರಗಳ ಬಗ್ಗೆ ಸಮಿತಿಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಬಳಿಕ ಸಂಚಾರ ಪೊಲೀಸರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ನಿರ್ಧಾರಕ್ಕೂ ಮನ್ನಣೆ ನೀಡಿ, ವೆಂಡಿಂಗ್ ಜೋನ್ ತೆರೆಯುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಟ್ಟಣ ವ್ಯಾಪಾರ ಸಮಿತಿ ತಿಳಿಸಿದೆ.
ಮಾರಾಟ ಮತ್ತು ಮಾರಾಟ ರಹಿತ ವಲಯ ವರ್ಗೀಕರಣ:
ಮಾರಾಟ ಮತ್ತು ಮಾರಾಟ ರಹಿತ ವಲಯ ವರ್ಗೀಕರಣಕ್ಕೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಪೂರ್ಣ ಪ್ರಕ್ರಿಯೆಗಳನ್ನು ನಿಬಂಧನೆ ಪ್ರಕಾರ ಮಾಡಬೇಕಾಗುತ್ತದೆ. ಈಗ ಮುಖ್ಯ ರಸ್ತೆಗಳಿಂದ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗುತ್ತಿದೆ. ಸ್ವಲ್ಪ ಸಮಯ ಅದೇ ರಸ್ತೆಯಲ್ಲಿ ಸಾಗಿದರೆ ಮತ್ತೆ ಮಾರಾಟಗಾರರು ಮರಳಿರುತ್ತಾರೆ. ನೀವು ವ್ಯಾಪಾರ ಮಾಡಲೆಂದೇ ಪ್ರತ್ಯೇಕ ವಲಯ ಸ್ಥಾಪಿಸಬೇಕಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಸ್ಥಳಗಳು ಮಾರಾಟಗಾರರಿಗೆ ಸೂಕ್ತವಾಗಿವೆಯೇ ಎಂಬುವುದು ಸೇರಿದಂತೆ ವ್ಯಾಪಾರಿಗಳಿಗೆ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ವೆಂಡಿಂಗ್ ಜೋನ್ ತೆರೆಯಬೇಕಾಗುತ್ತದೆ. ಜತೆಗೆ ವಾಹನ ದಟ್ಟಣೆ ಕಡಿಮೆಯಿರುವ ಕಡೆಗಳಲ್ಲಿ ಸ್ಥಳೀಯ ನಿವಾಸಿಗಳು ಸಂಘ ಸಂಸ್ಥೆಗಳು ಅಪಸ್ವರ ಎತ್ತುವ ಸಾಧ್ಯತೆ ಇದೆ. ಹಾಗೆಯೇ ವಾಹನ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ವ್ಯಾಪಾರ ವಲಯ ತೆರೆಯಲು ಆಗುವುದಿಲ್ಲ ಎಂದು ತಿಳಿಸುತ್ತಾರೆ.
ಕೇಂದ್ರ ನಗರಾಭಿವೃದ್ಧಿ ಇಲಾಖೆ ಮತ್ತು ರಾಜ್ಯ ವ್ಯಾಪ್ತಿಯಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಅನು ದಾನ ನೀಡಲಿದೆ. ಜತೆಗೆ ಶೇ.25 ಅನು ದಾನ ವೆಂಡಿಂಗ್ ಜೋನ್ ವಲಯ ನಿರ್ಮಾಣಕ್ಕಾಗಿಯೇ ಮೀಸರಿಲಿದೆ. ಆದರೆ ಅದನ್ನು ಪಾಲಿಕೆ ಅಧಿಕಾರಿಗಳು ಬಳಸಿಕೊಳ್ಳುತ್ತಿಲ್ಲ. ಹಲವು ಜಿಲ್ಲೆಗಳಲ್ಲಿ ಫುಡ್‌ಸ್ಟ್ರೀಟ್ ಮತ್ತು ವೆಂಡಿಂಗ್ ಜೋನ್ ತೆರೆಯಲಾಗಿದೆ. ಆ ಕೆಲಸ ರಾಜಧಾನಿಯಲ್ಲೂ ಆಗಬೇಕಾಗಿದೆ.-ಸಿ.ಈ.ರಂಗಸ್ವಾಮಿ, ಪಟ್ಟಣ ವ್ಯಾಪಾರ ಸಮಿತಿ ಸದಸ್ಯ
-ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.