ಚಿತ್ರರಂಗದ ಹಿರಿಯ ಕಲಾವಿದೆ ಬಿ.ವಿ.ರಾಧಾ ವಿಧಿವಶ
Team Udayavani, Sep 11, 2017, 6:00 AM IST
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಬಿ.ವಿ.ರಾಧಾ (70) ಭಾನುವಾರ ಬೆಳಗ್ಗೆ ನಿಧನರಾದರು.
ಕೆಲ ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ, ಶನಿವಾರ ಬೆಳಗ್ಗೆ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಭಾನುವಾರ ಮುಂಜಾನೆ ಹೃದಯಾಘಾತದಿಂದ ಕಲ್ಯಾಣನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ರಿ ಧನಲಕ್ಷ್ಮೀ¾ ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಹೊರಮಾವುನಲ್ಲಿರುವ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಸಾವಿನಲ್ಲೂ ಸಾರ್ಥಕತೆ
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆಎಸ್‌ಎಲ್ ಸ್ವಾಮಿ ಅವರನ್ನು ಪ್ರೇಮಿಸಿ ವಿವಾಹವಾಗಿದ್ದ ರಾಧಾರವರು ತಮ್ಮ ವೃತ್ತಿ ಮತ್ತು ಖಾಸಗಿ ಜೀವನದುದ್ದಕ್ಕೂ ರವಿಯವರ ಆದರ್ಶಗಳನ್ನು ಪಾಲಿಸಿಕೊಂಡು ಬಂದವರು. ಅದರಂತೆ ಪತಿ ಕೆಎಸ್‌ಎಲ್ ಸ್ವಾಮಿಯರು ದೇಹದಾನ ಮಾಡಿದ್ದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರಾಧಾರವರ ದೇಹವನ್ನು ಅವರ ಇಚ್ಛೆಯಂತೆ ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ.
250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ
ನಟವೃಂದ ನಾಟಕ ತಂಡದಲ್ಲಿ ಸಕ್ರಿಯ ಕಲಾವಿದೆಯಾಗಿ ರೂಪುಗೊಂಡಿದ್ದ ಬಿ.ವಿ.ರಾಧಾ, ಡಾ.ರಾಜ್‌ಕುಮಾರ್ ಅವರ “ನವಕೋಟಿ ನಾರಾಯಣ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. “ಆರು ಮೂರು ಒಂಭತ್ತು’, “ದೇವರು ಕೊಟ್ಟ ತಂಗಿ’, “ಮಿಥಿಲೆಯ ಸೀತೆಯರು’, ಯಾವ ಜನ್ಮದ ಮೈತ್ರಿ’ ಹಾಗೂ “ಬಲೇ ಅದೃಷ್ಟವೋ ಅದೃಷ್ಟ’ ಚಿತ್ರಗಳಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸಿದ್ದ ರಾಧಾ, ಸುಮಾರು 250 ಕನ್ನಡ ಚಿತ್ರಗಳು ಸೇರಿ ತೆಲುಗು, ಮಲಯಾಳಿ, ತುಳು ಹಾಗು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದರು. ಸಿನಿಮಾ ಜತೆಗೆ ಬಿ.ವಿ.ರಾಧಾ “ಕುಂಕುಮ ಭಾಗ್ಯ’ ಹಾಗೂ “ಚಿ.ಸೌ.ಸಾವಿತ್ರಿ’, “ಪುನರ್ ವಿವಾಹ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ನಟನೆ ಜತೆಗೆ “ಹರಕೆಯ ಕುರಿ’ ಹಾಗೂ “ಜಂಬೂ ಸವಾರಿ’ ಎಂಬ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಆ ಕಾಲದಲ್ಲೇ ಡಾ.ರಾಜ…ಕುಮಾರ್, ಎಂ.ಜಿ ರಾಮಚಂದ್ರನ್, ಶಿವಾಜಿ ಗಣೇಶನ್, ಎನ್.ಟಿ.ರಾಮರಾವ್, ಜೆಮಿನಿ ಗಣೇಶನ್, ಅಕ್ಕಿನೇನಿ ನಾಗೇಶ್ವರ್ ರಾವ್ ಸೇರಿ ಹಲವು ನಟರ ಜತೆ ನಟಿಸಿ ಸೈ ಎನಿಸಿಕೊಂಡಿದ್ದರು.
ಕೈ-ಕಾಲು ಗಟ್ಟಿ ಇದೆ ಕೆಲಸ ಕೊಡಿ!
“ನಮಗೂ ಕೈ ಕಾಲು ಗಟ್ಟಿಯಾಗಿವೆ. ಮುಖ ಕೂಡ ಚೆನ್ನಾಗಿದೆ. ಚೆನ್ನಾಗಿಯೇ ಪಾರ್ಟ್ ಮಾಡ್ತೀವಿ. ದಯತೋರಿ ಪಾರ್ಟ್ ಮಾಡೋಕೆ ಅವಕಾಶ ಕೊಡಿ….’
– ಹೀಗೆ ಕೆಲವು ತಿಂಗಳ ಹಿಂದೆ ನೋವು ತುಂಬಿದ ಮಾತುಗಳಲ್ಲೇ ಹೇಳಿಕೊಂಡಿದ್ದರು ಹಿರಿಯ ಕಲಾವಿದೆ ಬಿ.ವಿ.ರಾಧಾ. “ಜಿಂದಾ’ ಚಿತ್ರದಲ್ಲಿ ನಟಿಸುತ್ತಿದ್ದ ವೇಳೆ ತಮ್ಮ ಸಹ ಕಲಾವಿದರಾದ ಆಶಾಲತಾ ಮತ್ತು ಪುಷ್ಪ ಅವರ ಜತೆ ಪತ್ರಕರ್ತರ ಮುಂದೆ ಬಂದ ರಾಧಾರವರು “ಕೈ ಕಾಲು ಗಟ್ಟಿ ಇದೆ’ ನಮಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ’ ಎಂದಿದ್ದರು.
“ನಾನು ಕನ್ನಡ ಚಿತ್ರರಂಗಕ್ಕೆ ಬಂದು 50 ವರ್ಷಗಳಾಗಿವೆ. ಸಿನಿಮಾದವರಿಗೆ ಬೇರೆ ಕೆಲಸ ಗೊತ್ತಿಲ್ಲ. ನಮಗೂ ಕೈ ಕಾಲು, ಮುಖ ಎಲ್ಲವೂ ಚೆನ್ನಾಗಿದೆ. ನಮಗಿನ್ನೂ ನಟಿಸೋ ತಾಕತ್ತು ಇದೆ. ನಿರ್ಮಾಪಕ, ನಿರ್ದೇಶಕರು ದಯತೋರಿ ಪಾರ್ಟ್ ಕೊಡಿ. ನಾವು ಕೊಟ್ಟ ಕೆಲಸಕ್ಕೆ ಮೋಸ ಮಾಡಲ್ಲ. ಎಲ್ಲರಿಗಿಂತ ಚೆನ್ನಾಗಿಯೇ ನಟನೆ ಮಾಡ್ತೀವಿ. ಪಾತ್ರ ಸಣ್ಣದೋ, ದೊಡ್ಡದೋ ಆ ಬಗ್ಗೆ ಕೇಳ್ಳೋದಿಲ್ಲ. ಹಣದ ವಿಷಯ ಕೂಡ ಮುಖ್ಯ ಆಗಲ್ಲ. ಆದರೆ, ನಮ್ಮಂತಹ ಹಿರಿಯ ಕಲಾವಿದರನ್ನು ಗುರುತಿಸಿ ಕೆಲಸ ಕೊಡಿ. ಹಳಬರಿಗೆ ಹಣಕ್ಕಿಂತ ಕೆಲಸ ಮುಖ್ಯ ಈಗಲೂ ನಾವು ಗಟ್ಟಿಮುಟ್ಟಾಗಿದ್ದೇವೆ. ಹೊಸಬರಿರಲಿ, ಹಳಬರೇ ಇರಲಿ, ನಮ್ಮಂತಹ ಕಲಾವಿದರನ್ನು ಗುರುತಿಸಿ’ ಎಂದು ರಾಧಾ ಅವರು ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.