ವಿಧಾನ ಮಂಡಲ ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಬಿಜೆಪಿ ನಾಯಕರ ಸೂಚನೆ
Team Udayavani, Sep 14, 2022, 8:11 AM IST
ಬೆಂಗಳೂರು : ವಿಧಾನ ಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಮಾಡುವ ಆರೋಪಗಳಿಗೆ ಒಗ್ಗಟ್ಟಿನಿಂದ ಎದುರಿಸುವಂತೆ ಪಕ್ಷದ ಶಾಸಕರಿಗೆ ಬಿಜೆಪಿ ನಾಯಕರು ಸೂಚನೆ ನೀಡಿದ್ದಾರೆ.
ನಗರದ ಖಾಸಗಿ ಹೊಟೆಲ್ ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ನಾಯಕರು ಶಾಸಕರಿಗೆ ಸರ್ಕಾರದ ವಿರುದ್ಧ ಮಾತಾಡಬೇಡಿ, ಒಟ್ಟಾಗಿ ಮತ್ತೆ ಪಕ್ಷ ಅಧಿಕಾರಕ್ಕೆ ತರೋಣ, ಅವಾಗ ನಿಮಗೆ ಅಧಿಕಾರ ಸಿಗುತ್ತದೆ ಎಂದು ಶಾಸಕರಿಗೆ ನಾಯಕರ ಕಿವಿಮಾತು ಹೇಳಿದ್ದಾರೆ.
ಯಾವುದೇ ವಿಷಯದಲ್ಲೂ ಬೇಸರ ಆಗಬೇಡಿ ಪಕ್ಷದ ಶಾಸಕರನ್ನು ಯಾರು ಕಡೆಗಣಿಸುವ ಪ್ರಶ್ನೆಯೇ ಇಲ್ಲ ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ಪಕ್ಷ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡಲಿದೆ ಯಾವುದೇ ವಿಷಯದಲ್ಲೂ ಯಾರು ಬೇಸರ ಮಾಡಿಕೊಳ್ಳಬೇಡಿ. ಯಾವುದೇ ಸಂದರ್ಭದಲ್ಲೂ ಪಕ್ಷ ಹಾಗೂ ಸರ್ಕಾರದ ವಿರುದ್ಧ ಮಾತಾಡಬೇಡಿ ಚುನಾವಣೆ ಹತ್ತಿರ ಇರುವಾಗ ನಿಮ್ಮ ಮಾತೇ ವಿಪಕ್ಷಗಳಿಗೆ ಆಹಾರ ಆಗುತ್ತದೆ.
ಇದರಿಂದ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಆಗುತ್ತದೆ. ಅಲ್ಲದೇ ಮುಂದೆ ಚುನಾವಣೆ ಮೇಲೂ ಪರಿಣಾಮ ಬೀಳುತ್ತದೆ. ಹೀಗಾಗಿ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡಿ ಬಗೆಹರಿಸಿಕೊಳ್ಳಿ ಅದು ಬಿಟ್ಡು ಮಾಧ್ಯಮಗಳ ಮುಂದೆ, ಬಹಿರಂಗವಾಗಿ ಮಾತಾಡಬೇಡಿ ಚುನಾವಣೆಗೆ ಇನ್ನೂ ಕೇವಳ 7 ತಿಂಗಳು ಮಾತ್ರ ಬಾಕಿ ಇದೆ ಅಧಿವೇಶನ ಮುಗಿಯುತ್ತಿದ್ದಂತೆ ನಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ರೇವೆ. ಪ್ರವಾಸದ ಸಂದರ್ಭದಲ್ಲಿ ನಿಮ್ಮ ಸಹಕಾರ ನಮಗೆ ಬೇಕು ಇನ್ನು ಮುಂದೆ ಪ್ರತಿ ಕಾರ್ಯಕ್ರಮ ಗಳಿಗೂ ರಾಷ್ಟ್ರೀಯ ನಾಯಕರು ಬರುತ್ತಾರೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳಿಗೆ ತಲುಪಿಸಿ, ಮತದಾರರ ಸೆಳೆಯಬೇಕು. ಈ ಮೂಲಕ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಸಮರ್ಥವಾಗಿ ಸಂಘಟಿಸಬೇಕು ಈ ನಿಟ್ಟಿನಲ್ಲಿ ಎಲ್ಲರು ಒಟ್ಟಾಗಿ ಕ್ಷೇತ್ರ ಗಳಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷ ಹಾಗೂ ಸರ್ಕಾರದಲ್ಲಿ ಏನೇ ತೀರ್ಮಾನ ಮಾಡಿದರೂ ವರಿಷ್ಠರು ಮಾಡುತ್ತಾರೆ. ಆದರೆ ನಾವಂತೂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕು. ಹೀಗಾಗಿ ಎಲ್ಲ ಬಿಟ್ಟು ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
50 ಕೋಟಿ ಅನುದಾನ ;
ಪ್ರತಿ ಕ್ಷೇತ್ರ ಗಳಿಗೆ 50 ಕೋಟಿ ಅನುದಾನ ನೀಡುವಂತೆ ಶಾಸಕರು ನಾಯಕರಿಗೆ ಮನವಿ ಮಾಡಿದ್ದಾರೆ. ಚುನಾವಣೆ ವರ್ಷವಾಗಿದ್ದು ಈಗ ಹೆಚ್ಚಿನ ಅನುದಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಸಚಿವರ ಕಾರ್ಯವೈಖರಿ ಬಗ್ಗೆಯೂ ಅಸಮಧಾನ ಹೊರ ಹಾಕಿದ್ದಾರೆ ಎನ್ನಲಾಗಿದ್ದು, ಚುನಾವಣೆ ಹತ್ತಿರ ಬರುತ್ತಿದೆ ಅನುದಾನ ಹೆಚ್ಚಿಗೆ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆಂದು ತಿಳಿದು ಬಂದಿದೆ.
ಕ್ಷೇತ್ರದಲ್ಲಿ ಕೆಲಸ ಆಗದೆ ಮತ ಕೇಳಲು ಆಗುವುದಿಲ್ಲ ನಮ್ಮದೇ ಸರ್ಕಾರ ಅನುದಾನ ಹೆಚ್ಚಿಗೆ ನೀಡಿ ಎಂದು ಶಾಸಕರು ಆಗ್ರಹಿಸಿದ್ದು, ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ, ಸಚಿವರ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದು, ಸಚಿವರು ನಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ನಮ್ಮ ಪೈಲ್ ಗಳು ಸಚಿವರ ಬಳಿಯಿದೆ ಎಂದ ಶಾಸಕರು ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಭೋಪಾಲ್ : ಮೂರೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿದ ಶಾಲಾ ಬಸ್ ಚಾಲಕನ ಮನೆ ಧ್ವಂಸ
ಸಂಪುಟ ವಿಸ್ತರಣೆಗೆ ಆಗ್ರಹ
ಸಚಿವ ಸಂಪುಟ ವಿಸ್ತರಣೆ ಆಗದ ವಿಚಾರ ಬಿಜೆಪಿ ನಾಯಕರ ಮೇಲೆ ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ಅಸಮಾಧಾನ ಹೊರ ಹಾಕಿದ್ದು, ನನ್ನನ್ನು ನಂಭಿಸಿ ದ್ರೋಹ ಮಾಡಿದ್ದೀರಿ ಎಂದು ಸಭೆಯಲ್ಲೇ ಜೋರು ಧ್ವನಿ ಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಂತ್ರಿ ಮಾಡ್ತೀನಿ ಅಂತಾ ನನ್ನನ್ನು ಕರೆದುಕೊಂಡು ಬಂದಿದ್ದೀರಿ.ಆ ನಂತರ ಸ್ವಲ್ಪ ದಿನ ಮಾಡಿ, ಆ ನಂತರ ನನ್ನನ್ನು ಕೈ ಬಿಟ್ಟಿದ್ದೀರಾ ಮತ್ತೆ ಕೇಳಿದ್ರೆ ನನ್ನನ್ನು ಏನು ಅಂತಾ ನೀವು ಮಾತಾಡಿಸಿಲ್ಲ. ನನ್ನ ಕ್ಷೇತ್ರದಲ್ಲಿ ಜನರು ದುಡ್ಡು ತಗೊಂಡು ಹೋದ ಅಂತಾ ಪ್ರಚಾರ ಮಾಡ್ತಿದ್ದಾರೆ
ಇದರಿಂದ ನನ್ನ ಮುಂದಿನ ರಾಜಕೀಯ ಭವಿಷ್ಯ ಏನು ಆಗಬೇಕು..? ನೀವು ಮಾಡಿದ್ದು ಸರೀನಾ..? ನನಗೆ ನಂಭಿಸಿ ಮೋಸ ಮಾಡಿದ್ದೀರಾ ಎಂದು ಬಿಜೆಪಿ ನಾಯಕರ ವಿರುದ್ದ ಶಂಕರ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ ಎಂದು ತಿಳಿದು ಬಂದಿದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಸಚಿವಕಾಂಕ್ಷಿಗಳು ಅಂತರ ಕಾಯ್ದುಕೊಂಡಿದ್ದು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ರಮೇಶ್ ಜಾರಕಿಹೊಳಿ, ರೇಣುಕಾಚಾರ್ಯ ಸೇರಿ 20ಕ್ಕೂ ಹೆಚ್ಚು ಶಾಸಕರು ಸಭೆಗೆ ಗೈರು ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ಲಿಂಬಾವಳಿ ವರ್ಸಸ್ ಅಶೋಕ್
ಶಾಸಕಾಂಗ ಪಕ್ಷದ ಸಭೆಯಲ್ಲಿ ಅಶೋಕ್ ವಿರುದ್ಧ ಅರವಿಂದ ಲಿಂಬಾವಳಿ ಅಸಮಧಾನ ಹೊರಹಾಕಿದ್ದಾರೆ. ಐಟಿ ಕಂಪೆನಿಗಳು ಒತ್ತುವರಿ ಮಾಡಿಕೊಂಡಿವೆ ಎಂದು ಹೇಳಿದ್ದು ತಪ್ಪು ಎಂದ ಲಿಂಬಾವಳಿ ವಾದ ಮಾಡಿದ್ದಾರೆ.
ಬಿಲ್ಡರ್ ಗಳು ಒತ್ತುವರಿ ಮಾಡಿದ್ದು ಕಂಪನಿಗಳು ಅಲ್ಲ ಅದು ನನ್ನ ಕ್ಷೇತ್ರ ಅಲ್ಲಿ ಒತ್ತುವರಿ ಬಗ್ಗೆ ನೀವು ಹೇಳಿಕೆ ನೀಡಿದರೆ ಹೇಗೆ ಎಂದ ಲಿಂಬಾವಳಿ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಬೇಸರಗೊಂಡು ಸಭೆಯಿಂದಲೇ ಸಚಿವ ಆರ್ ಅಶೋಕ್ ಹೊರ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.