ನಗರದಲ್ಲಿ ಗತ ವೈಭವ ಮೆರೆದ ವಿಂಟೇಜ್ ಕಾರ್ ರ್ಯಾಲಿ
Team Udayavani, Oct 1, 2018, 12:43 PM IST
ಬೆಂಗಳೂರು: ರಾಜ ಮಹಾರಾಜರು ಸವಾರಿ ಮಾಡಿದ್ದ ಗಣ್ಯಾತೀಗಣ್ಯರು ಓಡಾಡಿದ್ದ ದೇಶ- ವಿದೇಶದ ಸುಮಾರು 50 ವಿಂಟೇಜ್ ಕಾರುಗಳು ದಸರಾ ಪ್ರಯುಕ್ತ ರ್ಯಾಲಿ ಮೂಲಕ ಬೆಂಗಳೂರಿನಿಂದ ಮೈಸೂರಿಗೆ ತೆರಳಿದವು. ಭಾರತದ ಕಾರುಗಳ ಒಕ್ಕೂಟ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ವಿಟೇಜ್ ಕಾರು ರ್ಯಾಲಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದರು.
19ನೇ ಶತಮಾನದ ಸುಮಾರು 50ಕ್ಕೂ ಅಧಿಕ ಕಾರುಗಳ ಮಾಲೀಕರು, ಕುಟುಂಬ ಸಮೇತವಾಗಿ ಹಳೆಯ ಹಾಗೂ ಐತಿಹಾಸಿಕ ರಾಯಲ್ ಕ್ಲಾಸಿಕಲ್ ಕಾರ್ ಡ್ರೈವ್ ಟು ಮೈಸೂರು ರ್ಯಾಲಿಯಲ್ಲಿ ಸಂಭ್ರಮದಿಂದ ಭಾಗಿಯಾದರು. ಕರ್ನಾಟಕದ ಕಾರುಗಳು ಮಾತ್ರವಲ್ಲದೇ ಇಂಗ್ಲೆಂಡ್, ಫ್ರಾನ್ಸ್, ಶ್ರೀಲಂಕದಿಂದಲೂ ಕಾರುಗಳು ಬಂದಿದ್ದವು. ರಾಜ್ಯದ 16, ದೇಶದ ವಿವಿಧ ಭಾಗದ 22 ಕಾರು, ಶ್ರೀಲಂಕದ 9, ಇಂಗ್ಲೆಂಡ್ ಮತ್ತು ಫ್ರಾನ್ಸ್ ತಲಾ ಒಂದೊಂದು ಕಾರು ರ್ಯಾಲಿಯಲ್ಲಿತ್ತು.
ಲಂಡನ್ನಿಂದ ಪ್ಯಾಟ್ರಿಕ್ ರೋಲೇ ದಂಪತಿಗಳು ತಂದಿದ್ದ 1922 ಮಾಡೆಲ್ನ ವಿಂಟೇಜ್ ಕಾರು ಹಾಗೂ 1928ರಲ್ಲಿ ಮೋತಿಲಾಲ್ ನೆಹರು ಅವರು ಬಳಸಿದ್ದ ಕಾರು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮೋತಿಲಾಲ್ ನೆಹರು ಅವರು ಬಳಸಿದ್ದ ಕಾರ್ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಳಿತು ವಿಧಾನಸೌಧ ಸುತ್ತು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Atul Subhash Case: ಪತ್ನಿ ಮೇಲಿನ ಕೇಸ್ ರದ್ದತಿಗೆ ನಿರಾಕರಣೆ
Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್ಐ ಸಸ್ಪೆಂಡ್
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.