
ನಿಯಮ ಉಲ್ಲಂಘನೆ: 25 ಸಾವಿರ ರೂ. ಮೌಲ್ಯದ ದಿಚಕ್ರ ವಾಹನಕ್ಕೆ ಬಿತ್ತು 3.04 ಲಕ್ಷ ರೂ. ದಂಡ!
Team Udayavani, Feb 12, 2024, 11:24 AM IST

ಬೆಂಗಳೂರು: ಆ ದ್ವಿಚಕ್ರ ವಾಹನದ ಇಂದಿನ ಬೆಲೆ ಅಂದಾಜು 25-30 ಸಾವಿರ ರೂ. ಇರಬಹುದು. ಆದರೆ, ಆ ದ್ವಿಚಕ್ರ ವಾಹನದ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ಯಡಿ ದಾಖಲಾಗಿರುವ ಪ್ರಕರಣಗಳ ದಂಡ ದ ಮೊತ್ತ ಬರೋಬ್ಬರಿ 3 ಲಕ್ಷ ರೂ.ಗೂ ಅಧಿಕ! ಅಚ್ಚರಿಯಾದರೂ ನಿಜ.
2021ರ ಜ. 2ರಿಂದ 2024 ಫೆ.5 ರವರೆಗೆ ಕೆಎ-05ಕೆಎಫ್ -7969 ನೋಂದಣಿ ಸಂಖ್ಯೆಯ ಆಕ್ಟೀವ್ ಹೊಂಡಾ ವಿರುದ್ಧ 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘನೆ ಆರೋಪವಿದ್ದು, ಬರೋಬ್ಬರಿ 3,04,500 ರೂ. ದಂಡ ವಿಧಿಸಲಾಗಿದೆ.
ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಗಳು ಹಾಗೂ ರಸ್ತೆ ಮಧ್ಯೆ ನಿಂತು ಸಂಚಾರ ನಿರ್ವಹಣೆ ಮಾಡುವ ಪೊಲೀಸ್ ಸಿಬ್ಬಂದಿ ಮೊಬೈಲ್‌ನಲ್ಲಿ ತೆಗೆದಿ ರುವ ಫೋಟೋಗಳ ಆಧರಿಸಿ ಈ ದಂಡ ವಿಧಿಸಲಾಗಿದೆ.
ಸುಧಾಮನಗರದ ನಿವಾಸಿ ವೆಂಕಟರಾಮನ್ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ತಮ್ಮ ಆಕ್ಟೀವ್ ಹೊಂಡಾ ದ್ವಿಚಕ್ರ ವಾಹನದಲ್ಲಿ ಮನೆ ಸಮೀ ಪವೇ ಹೆಲ್ಮೆಟ್ ಧರಿಸದೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ಒನ್ ವೇ ಸಂಚಾರ, ಸಿಗ್ನಲ್ ಜಂಪ್, ಜಿಬ್ರಾ ಕ್ರಾಸ್‌ನಲ್ಲಿ ನಿಲುಗಡೆ ಸೇರಿ ಕಳೆದ ನಾಲ್ಕು ವರ್ಷದಲ್ಲಿ 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ. ಇತ್ತೀಚೆಗೆ ಸಂಚಾರ ನಿಯಮ ಉಲ್ಲಂಘನೆಯ 50 ಸಾವಿರಕ್ಕೂ ಅಧಿಕ ದಂಡ ಹೊಂದಿರುವವರ ಮನೆಗಳಿಗೆ ತೆರಳಿ ದಂಡ ಪಾವತಿಸಿಕೊಳ್ಳುವ ಕಾರ್ಯವನ್ನು ನಗರ ಸಂಚಾರ ಪೊಲೀಸರು ಆರಂಭಿಸಿದ್ದಾರೆ.
ಈ ವೇಳೆ ಬಾಕಿ ಉಳಿದುಕೊಂಡಿರುವ ವಾಹನಗಳ ಸಂಖ್ಯೆಯನ್ನು ಆಧರಿಸಿ ಪರಿಶೀಲಿಸುವ ವೇಳೆ ವೆಂಕಟರಾಮನ್ ಅವರ ದ್ವಿಚಕ್ರ ವಾಹನ ಕೂಡ ಪತ್ತೆಯಾಗಿದೆ. ಹೀಗಾಗಿ ಅವರ ಮನೆ ವಿಳಾಸ ಪತ್ತೆ ಹಚ್ಚಿ ನೋಟಿಸ್ ಕೊಡಲಾಗಿತ್ತು. ಆದರೆ, ಸರಿಯಾದ ಉತ್ತರ ನೀಡಿರಲಿಲ್ಲ ಎಂದು ಸಂಚಾರ ಪೊಲೀಸರು ಹೇಳಿದರು.
ದ್ವಿಚಕ್ರ ವಾಹನವೇ ತೆಗೆದುಕೊಂಡು ಹೋಗಿ ಎಂದ ಮಾಲಿಕ!: ಕೆಲ ದಿನಗಳ ಹಿಂದೆ ವೆಂಕಟರಾಮನ್ ಮನೆಗೆ ತೆರಳಿದ ಸಂಚಾರ ಪೊಲೀಸರು, ನೋಟಿಸ್ ನೀಡಿ ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆಗ ದಂಡ ದ ಮೊತ್ತ ಕಂಡು ಶಾಕ್‌ಗೆ ಒಳಗಾದ ವೆಂಕಟರಾಮನ್, “ಅಷ್ಟು ದೊಡ್ಡ ಮೊತ್ತದ ದಂಡ ಕಟ್ಟಲು ಸಾಧ್ಯವಿಲ್ಲ. ಬೇಕಾದರೆ ನನ್ನ ದ್ವಿ ಚಕ್ರ ವಾಹನವನ್ನೇ ತೆಗೆದುಕೊಂಡು ಹೋಗಿ’ ಎಂದಿದ್ದಾರೆ. ಅದಕ್ಕೆ ಸ್ಥಳದಲ್ಲೇ ಉತ್ತರಿ ಸಿದ ಸಂಚಾರ ಪೊಲೀಸರು, “ನಿಮ್ಮ ದ್ವಿಚಕ್ರ ವಾಹ ನ ಅಂದಾಜು 25-20 ಸಾವಿರ ರೂ.ಗೆ ಮಾರಾಟವಾಗಬಹುದು. ಈ ವಾಹನ ತೆಗೆದುಕೊಂಡು ಹೋಗಿ, ಏನು ಮಾಡುವುದು. ನಿಗದಿತ ಸಮಯದಲ್ಲಿ ಬಂದು ದಂಡ ಕಟ್ಟಿ’ ಎಂದು ಸೂಚಿಸಿ ತೆರಳಿದ್ದಾರೆ.
50 ಸಾವಿರ ರೂ.ಗೂ ಹೆಚ್ಚಿನ ದಂಡ ಇರುವ ವಾಹನ ಮಾಲಿಕರ ಮನೆಗೆ ತೆರಳಿ ನೋಟಿಸ್ ಕೊಡಲಾಗುತ್ತಿದೆ. ಅದೇ ರೀತಿ ವಾಹನಗಳ ನೊಂದಣಿ ಸಂಖ್ಯೆ ಆಧರಿಸಿ ಪರಿಶೀಲನೆ ವೇಳೆ ಈ ವಾಹನ ಮಾಲಿಕನ ವಿರುದ್ಧ 3 ಲಕ್ಷ ರೂ. ಅಧಿಕ ದಂಡ ಇರುವುದ ಗೊತ್ತಾಗಿದೆ. ಸದ್ಯ ನೋಟಿಸ್ ನೀಡಿದ್ದೇವೆ. ಒಂದು ವೇಳೆ ನಿಗದಿತ ಸಮಯಕ್ಕೆ ಪಾವತಿಸದಿದ್ದರೆ, ಕೋರ್ಟ್ ಸೂಚನೆಯಂತೆ ಮುಂದಿನ ಕಾನೂನು ಪ್ರಕ್ರಿಯೆ ನಡೆಸಲಾಗುತ್ತದೆ. -ಅನಿತಾ ಬಿ.ಹದ್ದಣ್ಣನವರ್, ಡಿಸಿಪಿ, ಪಶ್ಚಿಮ ಸಂಚಾರ ವಿಭಾಗ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.