ವಿರಕ್ತರು-ವೀರಶೈವರು ಸಮಾಜದ ಕಣ್ಣುಗಳು
Team Udayavani, Jun 15, 2018, 11:48 AM IST
ಬೆಂಗಳೂರು: ವಿರಕ್ತರು ಮತ್ತು ವೀರಶೈವರು ಸಮಾಜದ ಎರಡು ಕಣ್ಣುಗಳು. ಇವೆರಡರಲ್ಲಿ ಯಾವುದಕ್ಕೇ ನೋವಾದರೂ ಸಮಸ್ಯೆ ಆಗುವುದು ಸಮಾಜಕ್ಕೇ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ತಿಳಿಸಿದರು.
ನಗರದ ಕೊಳದಮಠ ಮಹಾಸಂಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾಮಾತೆ ಶಿವಮ್ಮನವರ 47ನೇ ವಾರ್ಷಿಕ ಪುಣ್ಯಸ್ಮರಣೆ, ರೇಣುಕ, ಬಸವ ಮತ್ತು ಅಕ್ಕಮಹಾದೇವಿ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ…’ ಎಂದು ಬಸವಣ್ಣ ಹೇಳಿದ್ದಾರೆ.
ಆದರೆ, ನಾವೆಲ್ಲಾ “ಇವ ನಮ್ಮನಲ್ಲ’ ಎಂದು ದೂರ ಹೋಗುತ್ತಿರುವುದು ದುರಂತ. ಒಬ್ಬರನ್ನು ಕಂಡರೆ, ಮತ್ತೂಬ್ಬರಿಗೆ ಆಗುವುದಿಲ್ಲ. ಈ ರೀತಿಯ ಮನಃಸ್ಥಿತಿ ಏಕೆ ಎಂದು ಬೇಸರ ವ್ಯಕ್ತಪಡಿಸಿದರು. ಬಸವಣ್ಣ, ಅಲ್ಲಮ, ರೇಣುಕಾಚಾರ್ಯರು ಸೇರಿದಂತೆ ಇವರೆಲ್ಲರೂ ಮಹಾಶಕ್ತಿಗಳು. ಅವರ ಚಿಂತನೆಗಳನ್ನು ಯಾವ ರೀತಿ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಆಲೋಚಿಸಬೇಕು ಎಂದರು.
ಕೊಳದ ಮಠದಲ್ಲಿ ಬಸವಣ್ಣ ಮತ್ತು ರೇಣುಕಾಚಾರ್ಯರ ಜಯಂತ್ಯುತ್ಸವವನ್ನು ಒಟ್ಟಾಗಿ ಆಚರಿಸುವ ಮೂಲಕ ಇವರಿಬ್ಬರೂ ಸಮಾಜದ ಎರಡು ಕಣ್ಣುಗಳು ಎಂಬ ಸಂದೇಶವನ್ನು ಶಾಂತವೀರ ಸ್ವಾಮೀಜಿ ಸಾರಿದ್ದಾರೆ. ಈ ಆಚರಣೆ ಎಲ್ಲ ಮಠಗಳಲ್ಲೂ ಆಗಬೇಕು ಎಂದು ಹೇಳಿದರು.
ಕೊಳದಮಠದ ಶಾಂತವೀರ ಸ್ವಾಮೀಜಿ, ಕೇಂದ್ರ ಮಾಜಿ ಸಚಿವ ಡಾ.ಎಂ.ವಿ ರಾಜಶೇಖರಮೂರ್ತಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ನಿವತ್ತ ಐಪಿಎಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಮತ್ತಿತರರು ಉಪಸ್ಥಿತರಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಸಂಸ್ಥಾಪಕಿ ತೇಜಸ್ವಿನಿ ಅನಂತಕುಮಾರ್ ಅವರಿಗೆ “ಅಲ್ಲಮಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.