ಹೈವೋಲ್ಟೇಜ್ ಕ್ಷೇತ್ರಗಳಲ್ಲೂ ಶಾಕ್‌ ಕೊಟ್ಟ ಮತದಾರರು


Team Udayavani, Nov 4, 2018, 6:00 AM IST

181103kpn11.jpg

ಬೆಂಗಳೂರು: ಉಪಚುನಾವಣೆಯ ಹೈವೋಲ್ಟೇಜ್ ಕ್ಷೇತ್ರಗಳೆಂದೇ ಬಿಂಬಿಸಲ್ಪಟ್ಟಿದ್ದ ಬಳ್ಳಾರಿ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು ಸೇರಿ ಶನಿವಾರ ನಡೆದ ಐದೂ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಮತದಾರರ ಪ್ರತಿಕ್ರಿಯೆ ನೀರಸವಾಗಿತ್ತು. 

ಕಳೆದ ಮೇನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣ ಕಡಿಮೆಯಾಗಿದೆ. ಜಿಲ್ಲಾಡಳಿತಗಳ ಮತದಾನ ಜಾಗೃತಿ ಕಾರ್ಯಕ್ರಮಗಳು ಹಾಗೂ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ಮುಖಂಡರ ಅಬ್ಬರದ ಪ್ರಚಾರ ಮತದಾರರ ಮೇಲೆ ಅಷ್ಟೊಂದು ಪರಿಣಾಮ ಬೀರಿದಂತೆ ಕಂಡಿಲ್ಲ.

ಉಪಚುನಾವಣೆಯ ಹೈವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿಸಲ್ಪಟ್ಟ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲೂ ನೀರಸ ಮತದಾನವಾಗಿದೆ. ಮಾಜಿ ಮುಖ್ಯಮಂತ್ರಿಗಳ ಪುತ್ರರ ನಡುವೆ ಕದನ ಏರ್ಪಟ್ಟಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲೂ ಸಹ ಮತದಾನದ ಪ್ರಮಾಣ ಕಡಿಮೆಯಾಗಿದೆ. ಅನಿರೀಕ್ಷಿತ, ಒತ್ತಾಯಪೂರ್ವಕವಾಗಿ ಎದುರಾದ ಉಪ ಚುನಾವಣೆಯಲ್ಲಿ ಜನ ಒಲ್ಲದ ಮನಸ್ಸಿನಿಂದಲೇ ಮತದಾನ ಮಾಡಿದ್ದಾರೆ. ಮಂಡ್ಯ ಲೋಕಸಭಾ ಉಪ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಲ್ಲಿಯೂ ಜಿಲ್ಲೆಯ ಜನ ನಿರೀಕ್ಷಿತ ಉತ್ಸಾಹ ತೋರದ್ದರಿಂದ ಶೇಕಡಾವಾರು ಮತದಾನದ ಪ್ರಮಾಣ ಕುಸಿತಗೊಂಡಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ.70ರಷ್ಟು ಮತದಾನವಾಗಿದ್ದರೂ, ಕಳೆದ ಮೇನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಿಂತ ಕಡಿಮೆಯಾಗಿದೆ. ಕಳೆದ ಬಾರಿ ರಾಮನಗರ ಕ್ಷೇತ್ರದಲ್ಲಿ ಶೇ 82.55 ಮತದಾನವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ.12ರಷ್ಟು ಕಡಿಮೆ ಮತದಾನವಾಗಿದೆ.

ವನಿತೆಯರನ್ನು ಆಕರ್ಷಿಸದ ಪಿಂಕ್‌ ಮತಗಟ್ಟೆಗಳು:
ಮಹಿಳೆಯರಿಗಾಗಿ ಹಲವೆಡೆ ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಸಖೀಯರಿಗಾಗಿ ನಿರ್ಮಿಸಲಾಗಿದ್ದ ಪಿಂಕ್‌ ಮತಗಟ್ಟೆಗಳು ನೋಡಲು ಆಕರ್ಷಣೀಯವಾಗಿದ್ದರೂ ಮಹಿಳಾ ಮತದಾರರನ್ನು ಮತದಾನಕ್ಕೆ ಆಕರ್ಷಿಸಲಿಲ್ಲ. ಒಬ್ಬೊಬ್ಬರೇ ಮಹಿಳೆಯರು ಬಂದು ಮತ ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು. ಹಕ್ಕು ಚಲಾಯಿಸಲು ಬಂದ ಮಹಿಳೆಯರಿಗೆ ಸಿಬ್ಬಂದಿ, ಪಿಂಕ್‌ ಬಣ್ಣದ ಬಳೆ ಹಾಗೂ ಉಗುರು ಬಣ್ಣ ಹಚ್ಚಿ ಕಳುಹಿಸುತ್ತಿದ್ದರು.

ರಜೆ, ಕೃಷಿ ಕೊಯ್ಲು ಕಾರಣ:
ಸಾಲು, ಸಾಲು ಸರಕಾರಿ ರಜೆ, ಜತೆಗೆ ಶಾಲೆಗಳಿಗೆ ದೀಪಾವಳಿ ರಜೆ ಕೊಟ್ಟಿರುವುದರಿಂದ ಅನೇಕರು ಪ್ರವಾಸಕ್ಕೆ ತೆರಳಿರೋದು, ಹಳ್ಳಿಗಳಲ್ಲಿ ಭತ್ತ, ಮೆಕ್ಕೆಜೋಳ ಕೊಯ್ಲು, 5 ತಿಂಗಳ ಅವ ಧಿಯ ಚುನಾವಣೆ, ಸ್ಥಳೀಯ ಮುಖಂಡರ ಸಮನ್ವಯ ಕೊರತೆ, ದೊಡ್ಡದಾಗಿ ಕೇಳದ ಕಾಂಚಾಣದ ಸದ್ದು, ಚುನಾವಣೆ ಬೂತ್‌ ಬಳಿ ಪಕ್ಷದ ಚಿಹ್ನೆ, ಬಾವುಟ ಪ್ರದರ್ಶನಕ್ಕೆ ಅವಕಾಶ ಇಲ್ಲದಿರುವುದು…ಹೀಗೆ ನಾನಾ ಕಾರಣಗಳಿಂದ ಮತದಾರರ ಒಲವು ಕಂಡು ಬರಲಿಲ್ಲ ಎನ್ನಲಾಗಿದೆ.

ಮಗುವಿನೊಂದಿಗೆ ಇಲ್ಲ ಪ್ರವೇಶ
ಜಮಖಂಡಿ ಕ್ಷೇತ್ರವ್ಯಾಪ್ತಿಯ ಬಹುತೇಕ ಕಡೆ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಮತದಾನಕ್ಕೆ ಬಂದಿದ್ದರು. ಅದರಲ್ಲಿ
ಕೆಲವರು 2ರಿಂದ 3 ತಿಂಗಳ ಹಸುಗೂಸು ಬಗಲಲ್ಲಿ ಹೊತ್ತು ಬಂದಿದ್ದರು. ಆದರೆ, ಪೊಲೀಸ್‌ ಸಿಬ್ಬಂದಿ, ಮಗುವಿನೊಂದಿಗೆ ಬಂದಿದ್ದ ಮಹಿಳೆಯರನ್ನು ಮತಗಟ್ಟೆ ಹೊರಗೇ ತಡೆದು ಮಗುವನ್ನು ಬೇರೆಯವರ ಕೈಯಲ್ಲಿ ಕೊಟ್ಟು ಮತ ಹಾಕಿ ಎಂದು ಸೂಚಿಸಿದ್ದರು.

ಟಾರ್ಚ್‌ ಬೆಳಕಲ್ಲಿ ಅಂಬರೀಶ್‌ ಮತದಾನ
ಮಾಜಿ ಸಚಿವ ಹಾಗೂ ಹಿರಿಯ ಚಿತ್ರನಟ ಅಂಬರೀಶ್‌ ಅವರು ಶನಿವಾರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮದಲ್ಲಿ ಮತದಾನ ಮಾಡಿದರು. ಮತದಾನ ಮಾಡಲು ತೆರಳಿದಾಗ ಕೊಠಡಿ ಕತ್ತಲೆಯಿಂದ ಕೂಡಿತ್ತು. ಹೀಗಾಗಿ, ಮೊಬೈಲ್‌ ಟಾರ್ಚ್‌ ಸಹಾಯದಿಂದ ಅಂಬಿ ಮತ ಚಲಾಯಿಸಿದರು.

ಫೋಟೋ ಕ್ಲಿಕ್ಕಿಸಿದ ಯುವಕನ ಸೆರೆ
ಹೊಸಪೇಟೆ:
ಮತದಾನ ಮಾಡಿದ ಬಳಿಕ ಮತಯಂತ್ರದಿಂದ ಹೊರ ಬಂದ ಮುದ್ರಿತ ಚೀಟಿಯ ಫೋಟೋ ತೆಗೆದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಕೌಲಪೇಟೆ ನಿವಾಸಿ ಇಬ್ರಾಹಿಂ ರಜಾಕ್‌ ಬಂಧಿತ ಆರೋಪಿ.

ನಗರಸಭೆ ಕಾರ್ಯಾಲಯದ ಮತಗಟ್ಟೆ ನಂ.62ರಲ್ಲಿ ಮತದಾ ನಕ್ಕಾಗಿ ಆಗಮಿಸಿದ್ದ ಇಬ್ರಾಹಿಂ ರಜಾಕ್‌ ತಮ್ಮ ಬಳಿಯಿದ್ದ ಮೊಬೈಲ್‌ ಕ್ಯಾಮರಾದಲ್ಲಿ ಮತದಾನ ಮಾಡಿದ ಬಳಿಕ ವಿವಿ  ಪ್ಯಾಟ್‌ನಲ್ಲಿ ಮುದ್ರಿತ ಚೀಟಿಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಮುಂದಾಗಿದ್ದ. ಕೂಡಲೇ ಇದನ್ನು ತಡೆದ ಮತಗಟ್ಟೆ ಅಧಿಕಾರಿ,ಮೊಬೈಲ್‌ ಸಹಿತ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಈ ಸಂಬಂಧ ಪ್ರಕ ರಣ ದಾಖಲಿಸಿ ಕೊಂಡಿದ್ದಾರೆ ಎಂದು ಉಪವಿಭಾಗಾಧಿಕಾರಿ ಲೋಕೇಶ್‌ ತಿಳಿಸಿದ್ದಾರೆ.

ಚುನಾವಣಾ ಸಿಬ್ಬಂದಿ ಸಾವು
ಬಳ್ಳಾರಿ ಉಪ ಚುನಾವಣೆಗೆ ನಿಯೋಜಿಸಲ್ಪಟ್ಟಿದ್ದ ಹೆಚ್ಚುವರಿ ಚುನಾವಣಾ ಸಿಬ್ಬಂದಿಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ. ಕುರುಗೋಡು ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ವೈ.ಎಂ. ಮಂಜುನಾಥ್‌ (57) ಮೃತಪಟ್ಟ ಸಿಬ್ಬಂದಿ.ಇವರನ್ನು ಹೊಸಪೇಟೆ ಆಕಾಶವಾಣಿ ಬಳಿ ಇರುವ ಮತಗಟ್ಟೆ ನಂ.132ಎ ಗೆ ನಿಯೋಜಿಸಲಾಗಿತ್ತು. ಶುಕ್ರವಾರ ಹೊಸ ಪೇಟೆಗೆ ಆಗಮಿಸಿದ್ದ ಮಂಜುನಾಥ್‌ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದನ್ನು ಗಮನಿಸಿದ ಎಸಿ ಲೋಕೇಶ್‌ ಮನೆಗೆ ತೆರಳುವಂತೆ ಸೂಚಿಸಿದ್ದರು. ವಾಪಸ್‌ ಕುರು ಗೋಡಿಗೆ ತೆರಳಿದ ಮಂಜುನಾಥ್‌ ಶನಿವಾರ ನಸುಕಿನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ನೀತಿ ಸಂಹಿತೆ ಉಲ್ಲಂಸಿದ ನ್ಯಾಮಗೌಡ
ಜಮಖಂಡಿ ಕ್ಷೇತ್ರವ್ಯಾಪ್ತಿಯ ನಾಗನೂರ ಮತಗಟ್ಟೆ ಎದುರು ಮತದಾರರಿಗೆ ಆರತಿ ಎತ್ತಿ ಸ್ವಾಗತಿಸುತ್ತಿದ್ದ ಸ್ಥಳಕ್ಕೆ ಆಗಮಿಸಿದ
ಕಾಂಗ್ರೆಸ್‌ ಅಭ್ಯರ್ಥಿ ಆನಂದ ನ್ಯಾಮಗೌಡ, ಆರತಿ ತಟ್ಟೆಗೆ 100 ರೂ. ಹಾಕಿದರು. ಇದರಿಂದಾಗಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿ ಬಂತು.

ಮತಗಟ್ಟೆಗೆ ಬಂದ ನಾಗರಹಾವು 
ಶಿವಮೊಗ್ಗ ಲೋಕಸಭಾ ಕ್ಷೇತ್ರದ ತಾಳಗುಂದ ಹೋಬಳಿ ಕಾನಳ್ಳಿ ಮತಗಟ್ಟೆಯೊಂದರಲ್ಲಿ ನಾಗರಹಾವು ಕಾಣಿಸಿಕೊಂಡ ಘಟನೆ ನಡೆದಿದೆ.ಮತಗಟ್ಟೆ ಸಂಖ್ಯೆ 22ರಲ್ಲಿ ಶುಕ್ರವಾರ ರಾತ್ರಿ ನಾಗರಹಾವು ಪ್ರತ್ಯಕ್ಷವಾಯಿತು. ಇದನ್ನು ಕಂಡ ಚುನಾವಣಾ ಸಿಬ್ಬಂದಿ ಗಾಬರಿಗೊಂಡರು. ಹಾವನ್ನು ಕೊಠಡಿಯಿಂದ ಹೊರಗೆ ಕಳುಹಿಸಲು ಸಿಬ್ಬಂದಿ ಸಾಕಷ್ಟು ಪ್ರಯತ್ನಿಸಿದರೂ ಹಾವು ಅಲ್ಲಿಯೇ ಠಿಕಾಣಿ ಹೂಡಿತ್ತು. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿ ಶಿಕಾರಿಪುರದಿಂದ ಆಗಮಿಸಿದ ಉರಗ ತಜ್ಞರೊಬ್ಬರು ಹಾವನ್ನು ಹಿಡಿದು ಕಾಡಿಗೆ ಬಿಟ್ಟರು.

ಮತಗಟ್ಟೆಯಲ್ಲಿ ಹಾವು: ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಮೊಟ್ಟೆದೊಡ್ಡಿ ಗ್ರಾಮದ ಮತಗಟ್ಟೆ ಸಂಖ್ಯೆ 179ರಲ್ಲಿ
ಹಾವೊಂದು (ಕಟ್ಟಾವು) ಪ್ರತ್ಯಕ್ಷವಾಗಿ ಕೆಲಕಾಲ ಆತಂಕಕ್ಕೆ ಕಾರಣವಾಯಿತು. ಮತಗಟ್ಟೆ ಅಧಿಕಾರಿಗಳು ಗ್ರಾಮಸ್ಥರ ನೆರವಿನಿಂದ ಹಾವನ್ನು ತೆರವುಗೊಳಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟರು.

ಬೂತ್‌ ಏಜೆಂಟ್‌ಗಳೇ ಇಲ್ಲ
ಮತದಾನ ಕೇಂದ್ರದಲ್ಲಿ ಎಲ್ಲ ಪಕ್ಷದ ಒಬ್ಬರಿಗೆ ಚುನಾವಣೆ ಪ್ರಕ್ರಿಯೆ ವೀಕ್ಷಿಸಲು ಅವಕಾಶವಿರುತ್ತದೆ. ಆದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಹುತೇಕ ಕಡೆ ಏಜೆಂಟರ ಕೊರತೆ ಕಾಣುತ್ತಿತ್ತು. ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲಿ ಜೆಡಿಎಸ್‌ ಪರವಾಗಿ ಯಾವ ಪಕ್ಷದಿಂದ ಏಜೆಂಟ್‌ ನಿಲ್ಲಿಸಬೇಕೆಂಬ ಗೋಜಲು ಬಗೆಹರಿಯದೇ ಯಾರನ್ನೂ ನೇಮಿಸಿರಲಿಲ್ಲ. ಬಹುತೇಕ ಮತಗಟ್ಟೆಗಳಲ್ಲಿ ಬಿಜೆಪಿ ಏಜೆಂಟ್‌ಗಳು ಮಾತ್ರ ಇದ್ದರು. ಶಾಸಕ ಬಿ.ಕೆ.ಸಂಗಮೇಶ್‌ಗೆ ಸಚಿವ ಸ್ಥಾನ ತಪ್ಪಿಸಬೇಕೆಂಬ ಕಾರಣದಿಂದಲೇ ಜೆಡಿಎಸ್‌ನ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ ಮತದಾನ ಆಗದಂತೆ ನೋಡಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ. ಭದ್ರಾವತಿಯಲ್ಲಿ ಉತ್ತಮ ಲೀಡ್‌ ಕೊಟ್ಟರೆ ಶಾಸಕ ಸಂಗಮೇಶ್‌ಗೆ ಸಚಿವ ಸ್ಥಾನ ಕೇಳಲು ಬಲ ಬರಲಿದೆ. ಆದರೆ ಇದಕ್ಕೆ ಜೆಡಿಎಸ್‌ನವರು ಉದ್ದೇಶಪೂರ್ವಕವಾಗಿ ಬೂತ್‌ಗಳಲ್ಲಿ ಏಜೆಂಟ್‌ಗಳನ್ನು ನೇಮಕ ಮಾಡಿಲ್ಲ ಎಂಬ ಮಾತು ಕೇಳಿ ಬಂದವು.

ವನಿತೆಯರನ್ನು ಆಕರ್ಷಿಸದ ಪಿಂಕ್‌ ಮತಗಟ್ಟೆಗಳು
ಮಹಿಳೆಯರಿಗಾಗಿ ಹಲವೆಡೆ ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಸಖೀಯರಿಗಾಗಿ ನಿರ್ಮಿಸಲಾಗಿದ್ದ ಪಿಂಕ್‌ ಮತಗಟ್ಟೆಗಳು ನೋಡಲು ಆಕರ್ಷಣೀಯವಾಗಿದ್ದರೂ ಮಹಿಳಾ ಮತದಾರರನ್ನು ಆಕರ್ಷಿಸಲಿಲ್ಲ. ಒಬ್ಬೊಬ್ಬರೇ ಮಹಿಳೆಯರು ಬಂದು ಮತ ಚಲಾಯಿಸುತ್ತಿದ್ದ ದೃಶ್ಯ ಕಂಡು ಬಂತು. ಹಕ್ಕು ಚಲಾಯಿಸಲು ಬಂದ ಮಹಿಳೆ ಯರಿಗೆ ಸಿಬ್ಬಂದಿ, ಪಿಂಕ್‌ ಬಣ್ಣದ ಬಳೆ ಹಾಗೂ ಉಗುರು ಬಣ್ಣ ಹಚ್ಚಿ ಕಳುಹಿಸುತ್ತಿದ್ದರು.

ಶಿವನಿಗೆ ವಿಶೇಷ ಪೂಜೆ
ಬಳ್ಳಾರಿ:
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಜೆ.ಶಾಂತಾ ಪರ ಅಹೋರಾತ್ರಿ ಪ್ರಚಾರ
ಮಾಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಮತದಾನ ದಿನವಾದ ಶನಿವಾರ ಬೆಳಗ್ಗೆ ನಗರದ ಸಿರುಗುಪ್ಪ ರಸ್ತೆಯ ತಮ್ಮ ನಿವಾಸದಲ್ಲಿ ಶಿವಧ್ಯಾನ ಮಾಡಿ ನಂತರ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿದಿನ ಶ್ರೀರಾಮುಲು ತಮ್ಮ ನಿವಾಸದಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ, ಮತದಾನ ದಿನದಂದು ವಿಶೇಷ ಪೂಜೆ ಸಲ್ಲಿಸಿ, ಚುನಾವಣೆಯಲ್ಲಿ ಗೆಲುವು ನಮ್ಮದಾಗಲಿ ಎಂದು ದೇವರಲ್ಲಿ
ಪ್ರಾರ್ಥಿಸಿ ನಂತರ ಮತದಾನ ಮಾಡಿದರು.

ಟಾಪ್ ನ್ಯೂಸ್

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.