ಸಂಘಟನೆಗಳಿಂದ ಮತದಾನ ಜಾಗೃತಿ
Team Udayavani, Apr 3, 2019, 3:00 AM IST
ಕೆ.ಆರ್.ಪುರ: ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಜಯಕರ್ನಾಟಕ ಸಂಘದ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಿದರು.
ಜಾಥದಲ್ಲಿ ಪಾಲ್ಗೊಂಡು ಮಾತನಾಡಿದ ಸಂಘಟನೆಯ ರಾಜ್ಯಧ್ಯಕ್ಷ ಚಂದ್ರಪ್ಪ ,ರಾಜ್ಯ ದೇಶದ ಬೆಳವಣಿಗೆಗೆ ಉತ್ತಮರನ್ನು ಅಯ್ಕೆ ಮಾಡಲು ಮತದಾನ ಮಹತ್ವದಾಗಿರುವುದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಿದರು.
ಮತದಾನ ಮಾಡುವಲ್ಲಿ ಅಸಕ್ತಿ ತೋರುತ್ತಿರುವ ಹಿನ್ನೆಲೆ ದೇಶದಲ್ಲಿ ಶೇ.40,50 ಮತದಾನವಾಗುತ್ತಿದೆ ಹೆಚ್ಚು ಮತದಾನ ಆಗುವ ಉದ್ದೇಶದಿಂದ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಗರದ ವಿವಿಧ ಕಡೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಅರಿವುಮೂಡಿಸಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಮತ್ತು ಚುನಾವಣಾ ಅಯೋಗದಿಂದ ಅನುಮತಿ ಪಡೆದ ಜಯಕರ್ನಾಟಕ ಸಂಘಟನೆಯು ಇಲ್ಲಿನ ಸಾರ್ವಜನಿಕ ಅಸ್ಪತ್ರೆಯಿಂದ ಪ್ರಾರಂಭಿಸಿ, ಕೆ.ಆರ್.ಪುರ ಪ್ರಮುಖ ಬೀದಿಗಳಲ್ಲಿ ಜಾಥ ಮೂಲಕ ಜಾಗೃತಿ ಮೂಡಿಸಿದರು.
ನಗರ ಜಿಲ್ಲಾಧ್ಯಕ್ಷ ಜಗದೀಶ್, ಉಪಾಧ್ಯಕ್ಷ ವಿನೋದ್ ಶೆಟ್ಟಿ, ಕೆ.ಆರ್.ಪುರ ಕ್ಷೇತ್ರದ ಅಧ್ಯಕ್ಷ ಕಲ್ಕೆರೆ ಮಾದೇಶ್‌ಗೌಡ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕಾರ್ಯಕರ್ತರಾದ ತಾಜ್‌ವುದ್ದಿನ್ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.