ರಾಜಧಾನಿಗೆ ಕಡಿಮೆ ಮತದಾನದ ಹಣೆಪಟ್ಟಿ
Team Udayavani, Apr 24, 2023, 12:43 PM IST
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸಿಲಿಕಾನ್‌ಸಿಟಿ ಬೆಂಗಳೂರಲ್ಲಿ ವರ್ಷದಿಂದ ವರ್ಷಕ್ಕೆ ಮತದಾನದ ಶೇಕಡವಾರು ಪ್ರಮಾಣ ಕಡಿಮೆ ಆಗುತ್ತಿರುವುದು ಚುನಾವಣಾ ಆಯೋಗದ ಆತಂಕಕ್ಕೆ ಕಾರಣವಾಗಿದೆ. 2013 ಮತ್ತು 2018ರ ವಿಧಾನ ಸಭೆಯ ಚುನಾವಣಾ ಮತದಾನದ ಅಂಕಿ -ಅಂಶಗಳನ್ನು ತಾಳೆ ಮಾಡಿ ನೋಡಿದಾಗ ವರ್ಷದಿಂದ ವರ್ಷಕ್ಕೆ ಶೇಕಡಾವರು ಪ್ರಮಾಣ ಕುಸಿತ ಕಂಡಿದೆ.
ಅದರಲ್ಲೂ ದಾಸರಹಳ್ಳಿ ಕ್ಷೇತ್ರ ಮತ್ತು ಸಿ.ವಿ ರಾಮನ್ ನಗರ ಕ್ಷೇತ್ರ ಸೇರಿದಂತೆ ರಾಜಧಾನಿ ವ್ಯಾಪ್ತಿಯ 14 ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದ್ದು, ರಾಜ್ಯದಲ್ಲಿ ಕಡಿಮೆ ಮತದಾನವಾಗಿರುವ ಕ್ಷೇತ್ರಗಳು ಎಂಬ ಅಪಖ್ಯಾತಿಗೆ ಒಳಗಾಗಿದೆ. ಇದನ್ನು ಹೋಗಲಾಡಿ ಸುವ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತರಾಗಿದ್ದಾರೆ. 2013ರಲ್ಲಿ ದಾಸರಹಳ್ಳಿ ಕ್ಷೇತ್ರದಲ್ಲಿ ಶೇ.55.04 ಮತದಾನವಾಗಿತ್ತು. ಆದರೆ, 2018ರಲ್ಲಿ ಶೇ.48.03ಕ್ಕೆ ಕುಸಿತ ಕಾಣುವ ಮೂಲಕ ಮತದಾನದ ಪ್ರಮಾಣ ಮೈನಸ್ 7.37ಕ್ಕೆ ಇಳಿಕೆಯಾಯಿತು. ಜತೆಗೆ ಸಿ.ವಿ. ರಾಮನ್‌ನಗರ ಕ್ಷೇತ್ರದಲ್ಲಿ 2013ರಲ್ಲಿ ಶೇ.54.10 ಮತದಾನ ಆಗಿತ್ತು. ಆದರೆ, ಕಳೆದ ಬಾರಿ ಶೇ.48.98ಕ್ಕೆ ಕುಸಿದಿತ್ತು. ಆ ಮೂಲಕ ಮತ ದಾನದ ಪ್ರಮಾಣ -5.12ಕ್ಕೆ ಇಳಿಕೆ ಆಯಿತು.
ಹಾಗೆಯೇ ಐಟಿ-ಬಿಟಿ ಹಬ್ ಕ್ಷೇತ್ರಗಳ ಸೆರಗಿ ನಲ್ಲಿರುವ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಶೇ.53.30 ಮತದಾನವಾಗಿತ್ತು. ಆದರೆ, 2018 ಚುನಾವಣೆಯಲ್ಲಿ 50.09ಕ್ಕೆ ಇಳಿಕೆ ಯಾಗಿತ್ತು. ಆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ಮತ್ತು ಬೆಂಗಳೂರು ನಗರ ಜಿಪಂ ಸಿಬ್ಬಂದಿಗಳು ಮತದಾನದ ಶೇಕಡವಾರು ಪ್ರಮಾಣ ಹೆಚ್ಚಳಕ್ಕೆ ಪಣತೊಟ್ಟಿದ್ದಾರೆ.
ಕಾಲೇಜುಗಳಲ್ಲಿರುವ ಮತದಾರರಿಗೆ ಅರಿವು: ಈಗಾಗಲೇ ಐಟಿ-ಬಿಟಿ, ಕೈಗಾರಿಕಾ ಪ್ರದೇಶ, ಗಾರ್ಮೆಂಟ್‌ನಲ್ಲಿ ಮತದಾನದ ಬಗ್ಗೆ ಅರಿವಿನ ಬೀಜ ಬಿತ್ತಿರುವ ಪಾಲಿಕೆ ಅಧಿಕಾರಿಗಳು ಈಗ ಕಾಲೇಜುಗಳನ್ನು ಕೇಂದ್ರೀಕರಿಸಿದ್ದಾರೆ. ಕೆಲವು ಪದವಿ ಕಾಲೇಜುಗಳಲ್ಲಿ 200 ರಿಂದ 300 ವರೆಗೂ ಯುವ ಮತದಾರರು ಇದ್ದಾರೆ. ಅವರು ಮತದಾನ ಕೇಂದ್ರಕ್ಕೆ ಆಗಮಿಸಿದರೆ. ಮತದಾನದ ಸಂಖ್ಯೆ ಮತ್ತಷ್ಟು ದ್ವಿಗುಣವಾಗಲಿದೆ. ಆ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಬಳಿಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡಲಾಗುವುದು ಎಂದು ಸ್ಥಳೀಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ವಿಜಯ ಕಾಲೇಜಿನಲ್ಲಿ 500 ಯುವ ಮತದಾರರು: ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು. ಬೆಂಗಳೂರು ದಕ್ಷಿಣ ವಲಯ ವ್ಯಾಪ್ತಿಯ ವಿಜಯ ಕಾಲೇಜಿನಲ್ಲಿ ಸುಮಾರು 500 ಯುವ ಮತದಾರರಿದ್ದಾರೆ. ಅಂತಹ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿಗೆ ತೆರಳಿ ವಿದ್ಯಾರ್ಥಿಗಳು ತಪ್ಪದೇ ಮತದಾನದ ದಿನದ ಮಾಡುವಂತೆ ಖುದ್ದಾಗಿ ಮನವಿ ಮಾಡಿಕೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ. ಜತೆಗೆ ಮೇ. 10 ರವರೆಗೂ ಎಲ್ಲಾ ಕಾಲೇಜು, ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಮತದಾನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮತದಾನ ಶೇಕಡವಾರು ಪ್ರಮಾಣ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಐಟಿ -ಬಿಟಿ, ಮತ್ತು ಗಾರ್ಮೆಂಟ್ ಮಾಲೀಕರ ಜತೆಗೂ ಸಮಾಲೋಚನೆ ನಡೆಸಲಾಗಿದೆ. ಅಂದು ನೌಕರರಿಗೆ ರಜೆ ನೀಡುವಂತೆ ಮನವಿ ಮಾಡಲಾಗಿದೆ. ಜತೆಗೆ ಕಾಲೇಜುಗಳಲ್ಲಿ ಮತದಾನದ ಅರಿವು ಮೂಡಿಸಲಾಗುತ್ತದೆ. ● ತುಷಾರ್ ಗಿರಿನಾಥ್, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆ ಮುಖ್ಯ ಆಯುಕ್ತರು
-ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.