ಪ್ರಗತಿ ಆಧಾರದಲ್ಲಿ ಮತ ಯಾಚನೆ

Team Udayavani, May 8, 2018, 12:32 PM IST

pragati.jpg

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಮಾಜಿ ಉಪಮುಖ್ಯಮಂತ್ರಿ, ಹಾಲಿ ಬಿಜೆಪಿ ಶಾಸಕ ಆರ್‌.ಅಶೋಕ್‌ ಚುನಾವಣಾ ಪ್ರಚಾರ ಚುರುಕುಗೊಳಿಸಿದ್ದಾರೆ.

ನೂರಾರು ಬೆಂಬಲಿಗರು ಹಾಗೂ ಕಾರ್ಯಕರ್ತರ ಜತೆಗೂಡಿ ಕ್ಷೇತ್ರದಾದ್ಯಂತ ಪಾದಯಾತ್ರೆ, ಮನೆ ಮನೆ ಪ್ರಚಾರ ನಡೆಸುತ್ತಿದ್ದು, ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮತ್ತೂಮ್ಮೆ ಶಾಸಕನಾಗಿ ಆರಿಸುವಂತೆ ಮತದಾರರ ಬಳಿ ಸೋಮವಾರ ಕೋರಿದರು.

ಕರಿಸಂದ್ರ ವಾರ್ಡ್‌ನಲ್ಲಿ ಕಾರ್ಯಕರ್ತರ ಜತೆಗೂಡಿ ಪಾದಯಾತ್ರೆ ಮೂಲಕ ಪ್ರಚಾರಕ್ಕ ಆಗಮಿಸಿದ ಅಶೋಕ್‌ಗೆ, ಮಹಿಳೆಯರು ಆರತಿ ಎತ್ತುವ ಮೂಲಕ ಗೆಲುವು ಸಾಧಿಸುವಂತೆ ಹಾರೈಸಿದರು. ಕೇಂದ್ರಸರ್ಕಾರ ಹಾಗೂ ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಯೋಜನೆಗಳನ್ನು ಮತದಾರರ  ಮುಂದಿಟ್ಟ ಅಶೋಕ್‌, ಈ ಬಾರಿಯೂ  ತಮ್ಮ ಪರ ಮತಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದರು.

ಕರಿಸಂದ್ರ ಸುತ್ತಮುತ್ತಲ ಭಾಗಗಳಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅಶೋಕ್‌, ಕಳೆದ ಐದು ವರ್ಷಗಳಲ್ಲಿ ರಾಜ್ಯಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫ‌ಲವಾಗಿದೆ. ಜತೆಗೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ. ಮೂಲಭೂತ ಸೌಕರ್ಯಗಳು, ರಸ್ತೆಗಳ ಕಾಮಗಾರಿ ನಡೆಸದೆ ವಿಳಂಬ ಮಾಡಿದೆ ಎಂದು ಆರೋಪಿಸಿದರು. ಹೀಗಾಗಿ ಈ ಬಾರಿ ರಾಜ್ಯದ ಜನತೆ ಬದಲಾವಣೆ ಬಯಸಿದ್ದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು  ಭರವಸೆ ವ್ಯಕ್ತಪಡಿಸಿದರು.

ಈ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕನಾಗಿ, ಸಾರಿಗೆ, ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಈ ಹಿಂದಿನ ಬಿಜೆಪಿ ಸರ್ಕಾರ ಬಡವರ, ಶೋಷಿತರ, ಹಿಂದುಳಿದವರ ಎಲ್ಲ ಸಮುದಾಯದವರಿಗೆ ಸಮಾನ ಆದ್ಯತೆ ನೀಡಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿತ್ತು. ಮತ್ತದೆ ಅಭಿವೃದ್ಧಿ ಆಡಳಿತ ನೀಡುವ  ಭರವಸೆಯೊಂದಿಗೆ ಈ ಬಾರಿ ಸರ್ಕಾರ ಬದಲಿಸಿ ಬಿಜೆಪಿ ಬೆಂಬಲಿಸಿ ಎಂದು ಕೋರಿದರು.

ಶಾಸಕನಾಗಿ ಕ್ಷೇತ್ರದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಕಾಮಗಾರಿ, ಉದ್ಯಾನವನಗಳ ನಿರ್ಮಾಣ ಸೇರಿ ಸರ್ಕಾರಿ ಯೋಜನೆಗಳು ಬಡವರಿಗೆ, ಅರ್ಹರಿಗೆ ತಲುಪುವಂತೆ ಮಾಡಿದ್ದೇನೆ. ಕ್ಷೇತ್ರದ ಎಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಮತ್ತೂಮ್ಮೆ ಶಾಸಕನಾಗಿ ಗೆದ್ದೇ ಗೆಲ್ಲುವು ವಿಶ್ವಾಸವಿದೆ ಎಂದರು. ಅಲ್ಲದೆ, ಶಾಸಕನಾಗಿ ಮಾಡಿದ ಹಲವು ಜನಪರ ಕಾರ್ಯಗಳೇ ತಮಗೆ ಈ ಬಾರಿಯೂ ಶ್ರೀ ರಕ್ಷೆಯಾಗಲಿವೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

9

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.