ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ
Team Udayavani, Aug 31, 2018, 6:05 AM IST
ಬೆಂಗಳೂರು: ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳು, ರಾಜ್ಯದ 21 ಜಿಲ್ಲೆಗಳ 81 ತಾಲೂಕುಗಳ 102 ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ಮತದಾನ ನಡೆಯಲಿದೆ.
ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, 2,634 ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ 9,121 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಲಿದೆ. ಸೆ.3ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹ ಬಹಿರಂಗವಾಗಲಿದೆ.
ಮೊದಲ ಬಾರಿಗೆ “ನೋಟಾ’ ಬಳಕೆ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ “ನೋಟಾ’
ಬಳಸಲಾಗುತ್ತಿದೆ. ಆದರೆ, ವಿವಿಪ್ಯಾಟ್ ಬಳಸಲಾಗುತ್ತಿಲ್ಲ. ಮತದಾರರಿಗೆ ಅವರ ಭಾವಚಿತ್ರವಿರುವ ಚೀಟಿ ವಿತರಿಸಲಾಗಿದೆ.
ಮತದಾರರಿಗೆ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಲಾಗುತ್ತಿದೆ. ಆದರೆ, ದಕ್ಷಿಣ ಕನ್ನಡ, ಹಾಸನ ಮತ್ತು ಯಾದಗಿರಿ
ಜಿಲ್ಲೆಯಲ್ಲಿ ಬೇರೆ ಚುನಾವಣೆಗಳು ಈಗಷ್ಟೇ ನಡೆದಿರುವುದರಿಂದ ವಿನಾಯ್ತಿ ನೀಡಲಾಗಿದೆ. ಅದರಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲಗೈ ಹೆಬ್ಬೆರಳು, ಹಾಸನ ಜಿಲ್ಲೆಯಲ್ಲಿ ಎಡಗೈ ಕಿರುಬೆರಳು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಎಡಗೈ ಮಧ್ಯದ ಬೆರಳಿಗೆ ಶಾಯಿ ಹಾಕಲು ಸೂಚಿಸಲಾಗಿದೆ. ಭದ್ರತೆಗಾಗಿ ಪೊಲೀಸರು ಸೇರಿ ಒಟ್ಟು 36ರಿಂದ 40 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
49.39 ಲಕ್ಷ ಮತದಾರರು: ಮೈಸೂರು, ತುಮಕೂರು ಶಿವಮೊಗ್ಗ ಮಹಾನಗರ ಪಾಲಿಕೆಗಳಲ್ಲಿ 13.33 ಲಕ್ಷ, ಉಳಿದ 102 ನಗರ ಸ್ಥಳೀಯ ಸಂಸ್ಥೆಗಳಲ್ಲಿ 36.03 ಲಕ್ಷ ಸೇರಿ ಒಟ್ಟು 49.39 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಇದಕ್ಕಾಗಿ 5 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದಕ್ಕೆ ಇವಿಎಂಗಳನ್ನು ಬಳಸಲಾಗುತ್ತಿದ್ದು, 6,174 ಬ್ಯಾಲೆಟ್ ಯೂನಿಟ್, 6,474 ಕಂಟ್ರೋಲ್ ಯೂನಿಟ್‌ಗಳನ್ನು ಸಿದಟಛಿಗೊಳಿಸಲಾಗಿದೆ. ಭದ್ರತೆ ಮತ್ತು ಚುನಾವಣಾ ಕಾರ್ಯಕ್ಕೆ 40 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
29 ಮಂದಿ ಅವಿರೋಧ ಆಯ್ಕೆ: ವಿವಿಧ ನಗರ ಸಭೆಗಳ 12 ವಾರ್ಡ್‌ಗಳಿಂದ ಹಾಗೂ ವಿವಿಧ ಪುರಸಭೆಗಳ 17 ವಾರ್ಡ್‌ಗಳಲ್ಲಿ ಒಟ್ಟು 29 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ಪುರಸಭೆಯ ವಾರ್ಡ್ ಸಂಖ್ಯೆ 19ರಲ್ಲಿ ಎಲ್ಲ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತ ಗೊಂಡಿರುವುದರಿಂದ ಈ ವಾರ್ಡ್‌ನಲ್ಲಿ ಚುನಾವಣೆ ನಡೆಯುತ್ತಿಲ್ಲ.ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರ ಸಭೆಯ ವಾರ್ಡ್ ಸಂಖ್ಯೆ 9ರಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿ ಅಭ್ಯರ್ಥಿ ಸಿ.ಎಸ್.ರಮೇಶ್ ಮೃತಪಟ್ಟಿದ್ದರಿಂದ ಈ ವಾರ್ಡ್‌ನಲ್ಲಿ ಚುನಾವಣೆ ಸ್ಥಗಿತಗೊಳಿಸಲಾಗಿದೆ.
ಕೊಡಗು ಜಿಲ್ಲೆ ಚುನಾವಣೆ ಮುಂದೂಡಿಕೆ: ಪ್ರವಾಹದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ, ವೀರಾಜಪೇಟೆ,
ಸೋಮವಾರಪೇಟೆ ಪಟ್ಟಣ ಪಂಚಾಯಿತಿಗಳ 24 ವಾರ್ಡ್‌ಗಳ ಚುನಾವಣೆಯನ್ನು ಮುಂದೂಡಲಾಗಿದ್ದು, ಹೊಸ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.
22 ಜಿಲ್ಲೆಗಳಲ್ಲಿ ಚುನಾವಣೆ
ಚಿತ್ರದುರ್ಗ, ದಾವಣಗೆರೆ, ತುಮಕೂರು,ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ,ಉಡುಪಿ, ಹಾಸನ, ಮಂಡ್ಯ, ಬೆಳಗಾವಿ,ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ,ಉತ್ತರ ಕನ್ನಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ, ಯಾದಗಿರಿ ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಒಂದಕ್ಕೆ ಮಾತ್ರ ಚುನಾವಣೆ ನಡೆಯುತ್ತಿದೆ. ವಿಜಯಪುರ ಹಾಗೂ ಬೀದರ ಜಿಲ್ಲೆಗಳಲ್ಲಿ ಕೇವಲ ಒಂದೊಂದೇ ಪುರಸಭೆಗೆ ಚುನಾವಣೆ ನಡೆಯುತ್ತಿದೆ.
ನಗರಸಭೆಗಳು
ಚಿತ್ರದುರ್ಗ, ಚಳ್ಳಕೆರೆ, ಚಾಮರಾಜನಗರ,ಕೊಳ್ಳೆಗಾಲ, ಪುತ್ತೂರು, ಉಲ್ಲಾಳ,ಉಡುಪಿ, ಹಾಸನ, ಆರಸೀಕೆರೆ, ಮಂಡ್ಯ,
ಗೋಕಾಕ್, ನಿಪ್ಪಾಣಿ, ಬಾಗಲಕೋಟೆ, ಮುಧೋಳ, ಇಳಕಲ್,ರಬಕವಿ-ಬನಹಟ್ಟಿ, ಜಮಖಂಡಿ, ಹಾವೇರಿ,
ರಾಣೆಬೆನ್ನೂರು, ಕಾರವಾರ,ಶಿರಸಿ, ದಾಂಡೇಲಿ, ಶಹಬಾದ್, ಕೊಪ್ಪಳ,ಗಂಗಾವತಿ, ರಾಯಚೂರು,ಸಿಂಧನೂರು, ಯಾದಗಿರಿ, ಸುರಪುರ.
ಪುರಸಭೆಗಳು
ಹೊಸದುರ್ಗ, ಚನ್ನಗಿರಿ, ಮಧುಗಿರಿ,ಚಿಕ್ಕನಾಯಕನಹಳ್ಳಿ, ಟಿ. ನರಸೀಪುರ,ಪಿರಿಯಾಪಟ್ಟಣ, ಎಚ್.ಡಿ. ಕೋಟೆ,
ಬಂಟ್ವಾಳ, ಕಾರ್ಕಳ, ಕುಂದಾಪುರ,ಚನ್ನರಾಯಪಟ್ಟಣ, ಸಕಲೇಶಪುರ,ಹೊಳೆನರಸೀಪುರ, ಮದ್ದೂರು, ಪಾಂಡವಪುರ, ನಾಗಮಂಗಲ,ರಾಮದುರ್ಗ, ಬೈಲಹೊಂಗಲ,ಸಂಕೇಶ್ವರ, ಸವದತ್ತಿ, ಮೂಡಲಗಿ, ಚಿಕ್ಕೋಡಿ, ಕುಡಚಿ, ಹುಕ್ಕೇರಿ, ಸದಲಗಾ,ಕೊಣ್ಣೂರ, ಮುದ್ದೇಬಿಹಾಳ,ಬಾದಾಮಿ, ಗುಳೇದಗುಡ್ಡ, ಮಹಾಲಿಂಗಪುರ, ತೆರದಾಳ,ಹುನುಗುಂದ, ರೋಣ, ಗಜೇಂದ್ರಗಡ,ಲಕ್ಷ್ಮೇಶ್ವರ, ಹಾನಗಲ್, ಸವಣೂರು, ಹಳಿಯಾಳ, ಕುಮಟಾ, ಅಂಕೋಲಾ,ಸೇಡಂ, ಚಿತ್ತಾಪುರ, ಆಳಂದ, ಜೇವರ್ಗಿ,ಚಿಂಚೋಳಿ, ಅಫಜಲಪುರ, ಕುಷ್ಟಗಿ, ದೇವದುರ್ಗ, ಲಿಂಗಸುಗೂರು,ಮಾನವಿ, ಮುದಗಲ್, ಹಳ್ಳಿಖೇಡ,ಗುರುಮಿಠಕಲ್.
ಪ.ಪಂಚಾಯಿತಿಗಳು
ಹೊನ್ನಾಳಿ, ಜಗಳೂರು, ಗುಬ್ಬಿ,ಕೊರಟಗೆರೆ, ಸಾಲಿಗ್ರಾಮ, ಬೆಳ್ಳೂರು,ರಾಯಬಾಗ, ಖಾನಾಪುರ, ಬೀಳಗಿ,ಕೆರೂರು, ನರೇಗಲ್ಲ, ಮುಳಗುಂದ,ಶಿರಹಟ್ಟಿ, ಹಿರೇಕೆರೂರು, ಯಲ್ಲಾಪುರ,ಮುಂಡಗೋಡ, ಯಲಬುರ್ಗಾ, ಕುಡುತಿನಿ, ಕೊಟ್ಟೂರು, ಹಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.