ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ
Team Udayavani, Jan 20, 2019, 6:36 AM IST
ಕೆಂಗೇರಿ: ಶ್ರೀ ಮಲೆ ಮಾದೇಶ್ವರ ಸ್ವಾಮಿ ಪಾದಯಾತ್ರಾ ಬಳಗ ಕೈಗೊಂಡಿರುವ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪಾದಯಾತ್ರೆಯು ಕೆಂಗೇರಿಯ ತುಪ್ಪದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶನಿವಾರ ಆರಂಭವಾಯಿತು.
ಕೆಂಗೇರಿಯ ಡಾ.ರಾಜಕುಮಾರ್ ವೃತ್ತದ ಬಳಿ ಇರುವ ದೇವಾಲಯದಲ್ಲಿ ತುಪ್ಪದ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ಬಿಬಿಎಂಪಿ ಮಾಜಿ ಸದಸ್ಯ ರ.ಆಂಜಿನಪ್ಪ, ಪಾದಯಾತ್ರೆಗೆ ಚಾಲನೆ ನೀಡಿ, ಕೆಂಗೇರಿ ಸುತ್ತಲ ಮಹದೇಶ್ವರ ಸ್ವಾಮಿ ಭಕ್ತರು ಸತತ 19 ವರ್ಷಗಳಿಂದ ಬೆಟ್ಟಕ್ಕೆ ಪಾದಯಾತ್ರೆ ಹೋಗುತ್ತಿದ್ದಾರೆ. ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ಯಾತ್ರಿಗಳ ಸಂಖ್ಯೆ, ಇಂದು 350 ದಾಟಿದೆ ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜೆ.ರಮೇಶ್ ಮಾತನಾಡಿ, ಆರು ದಿನಗಳ ಪಾದಯಾತ್ರೆಗೆ ಹಲವು ದಾನಿಗಳು ನೆರವು ನೀಡಿದ್ದಾರೆ. ಜ.24ರಂದು ಸ್ವಾಮಿಗೆ ಬಂಗಾರದ ರಥೋತ್ಸವ ನೆರವೇರಿಸುವ ಮೂಲಕ ಯಾತ್ರೆ ಕೊನೆಗೊಳ್ಳಲಿದೆ ಎಂದರು.
ಯಾತ್ರೆ ಅಂಗವಾಗಿ ಜ.27ರಂದು ಪಾದಯಾತ್ರಾ ಬಳಗದಿಂದ ತುಪ್ಪದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ “ಮಹದೇಶ್ವರ ಪರ’ ಆಯೋಜಿಸಲಾಗಿದೆ ಎಂದು ಕುವೆಂಪು ಕನ್ನಡ ಯುವಕರ ಸಂಘದ ಅಧ್ಯಕ್ಷ ಎನ್.ಗುರುದೇವ್ ಹೇಳಿದರು. ಕಾಂಗ್ರೆಸ್ ಮುಖಂಡ ರವಿ ರಬ್ಬಣ್ಣ, ಮಹೇಶ್ ಬಾಬು ಮತ್ತಿತರರು ಪಾದಯಾತ್ರಿಗಳಿಗೆ ಶುಭ ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್