ಸ್ಲಂಗಳಿಗೆ ನೀರು: ಇಂದು ಚಾಲನೆ
Team Udayavani, May 26, 2017, 12:18 PM IST
ಬೆಂಗಳೂರು: ಕೊಳೆಗೇರಿ ಪ್ರದೇಶದ ಜನರಿಗೆ ಉಚಿತ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ಶುಕ್ರವಾರ ಚಾಲನೆ ದೊರೆಲಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಂಪುರದಲ್ಲಿ ಜಲಮಂಡಳಿಯಿಂದ ಮೇ 26ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ. ನಗರದ 536 ಕೊಳೆಗೇರಿಗಳ 4 ಲಕ್ಷ ಮಂದಿ ಇದರ ಪ್ರಯೋಜನ ಪಡೆಯಲಿದ್ದಾರೆ. ನಗರದ ಎಲ್ಲ ಕೊಳೆಗೇರಿಗಳಲ್ಲಿ ಸುಮಾರು 79,604 ಮನೆಗಳನ್ನು ಗುರುತಿಸಲಾಗಿದೆ. ಕೊಳೆಗೇರಿ ಅಭಿವೃದ್ದಿ ಮಂಡಳಿಯು 2016ರಲ್ಲಿ ಜಲಮಂಡಳಿಯ 16 ವಿಭಾಗಗಳಲ್ಲಿ ಘೋಷಿತ 246 ಹಾಗೂ ಅಘೋಷಿತ 290 ಸೇರಿ ಒಟ್ಟು 536 ಕೊಳೆಗೇರಿಗಳನ್ನು ಗುರುತಿಸಿದೆ.
ಈ ಎಲ್ಲ ಕೊಳಗೇರಿಗಳಲ್ಲಿ ಜಲಮಂಡಳಿಯ 69 ಸಾವಿರಕ್ಕೂ ಹೆಚ್ಚಿನ ನೀರಿನ ಸಂಪರ್ಕಗಳಿದ್ದು, ಇಲ್ಲಿಗೆ ಮಂಡಳಿಯಿಂದ ಪೂರೈಕೆಯಾಗುವ ಎಲ್ಲ ಸಂಪರ್ಕಗಳಿಗೆ 10 ಸಾವಿರ ಲೀಟರ್ವರೆಗೆ ಉಚಿತವಾಗಿ ನೀರು ಪೂರೈಕೆ ನೀಡಲಾಗುತ್ತದೆ. ಅದನ್ನು ಮೀರಿ ಬಳಸುವ ನೀರಿಗೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ. ಉಚಿತ ನೀರು ಪೂರೈಕೆಯಿಂದಾಗಿ ಜಲಮಂಡಳಿಗೆ ಪ್ರತಿ ತಿಂಗಳಿಗೆ 10.2 ಕೋಟಿ ರೂ. ಹೊರೆಯಾಗಲಿದ್ದು, ಈ ಪೈಕಿ 1 ಕೋಟಿ ರೂ. ಅನ್ನು ರಾಜ್ಯ ಸರ್ಕಾರ ಭರಿಸಲಿದೆ.
ಇದರೊಂದಿಗೆ ಕೊಳಗೇರಿ ಪ್ರದೇಶಗಳ ನಿವಾಸಿಗಳು ಬಾಕಿ ಉಳಿಸಿಕೊಂಡಿದ್ದ 24.5 ಕೋಟಿ ರೂ. ಮೊತ್ತದ ಬಿಲ್ಗಳನ್ನು ಮನ್ನಾ ಮಾಡಲಾಗಿದ್ದು, ಶುಕ್ರವಾರವೇ ಕೊಳಗೇರಿ ನಿವಾಸಿಗಳ ಬಾಕಿ ಬಿಲ್ ಸಹ ಮನ್ನಾ ಮಾಡಿದ ಘೋಷಣೆ ಹೊರಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.