Water wasted: ಫ್ಲ್ಯಾಟ್‌ಗಳಲ್ಲೇ ಅರ್ಧ ನೀರು ಪೋಲು


Team Udayavani, Oct 7, 2023, 10:53 AM IST

tdy-10

ಬೆಂಗಳೂರು: ರಾಜಧಾನಿಯಲ್ಲಿನ ಅಪಾರ್ಟ್ ಮೆಂಟ್‌ಗಳಿಂದಲೇ ಅರ್ಧಕರ್ಧ ಕಾವೇರಿ ನೀರು ಪೋಲಾಗುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಇದಕ್ಕೆ ಕಡಿವಾಣ ಹಾಕದಿದ್ರೆ ಕೆಲವೇ ತಿಂಗಳಲ್ಲಿ ಸಿಲಿಕಾನ್‌ ಸಿಟಿಗೂ ಕುಡಿಯುವ ನೀರಿನ ಬಿಸಿ ತಟ್ಟುವ ಲಕ್ಷಣ ಗೋಚರಿಸಿದೆ. ‌

ಬಿಬಿಎಂಪಿ ವ್ಯಾಪ್ತಿಯ 10 ಲಕ್ಷ ಅಪಾರ್ಟ್‌ಮೆಂಟ್‌ಗಳು ಕಾವೇರಿ ನೀರನ್ನೇ ಅವಲಂಬಿ ಸಿವೆ. ಅಂದಾಜಿನ ಪ್ರಕಾರ 40 ಲಕ್ಷ ಜನ ಪ್ಲ್ರಾಟ್‌ಗಳಲ್ಲೇ ವಾಸಿಸುತ್ತಿದ್ದಾರೆ. ಪ್ರಮುಖ ಕೈಗಾರಿಕಾ ಪ್ರದೇಶಗಳಾದ ವೈಟ್‌ ಫೀಲ್ಡ್‌, ಮಹದೇವಪುರ, ಎಲೆಕ್ಟ್ರಾನಿಕ್‌ ಸಿಟಿ, ಸರ್ಜಾಪುರದ ಬಳಿ ಕಚೇರಿಗೆ ಸಮೀಪ ಲಕ್ಷಾಂತರ ಟೆಕಿಗಳು ಬಾಡಿಗೆ ಫ್ಲ್ಯಾಟ್‌ಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಇಲ್ಲಿಗೆ ಜಲಮಂಡಳಿಯಿಂದ ಕಾವೇರಿ ನೀರು ಪೂರೈಕೆ ಆಗುವ ಪೈಪ್‌ಲೈನ್‌ಗಳಲ್ಲಿ ಅಲ್ಲಲ್ಲಿ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಇನ್ನು ಇಲ್ಲಿನ ನಲ್ಲಿಗಳು, ವಾಲ್ಟ್ ಗಳಿಂದಲೂ ನೀರು ಪೋಲಾಗುತ್ತಿದೆ. ಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಕೊಳವೆಬಾವಿಗಳಲ್ಲಿ ನೀರು ಬರುತ್ತಿದ್ದರೂ ಇಲ್ಲಿನ ವಾಸಿಗಳು ದೈನಂದಿನ ಕೆಲಸಗಳಿಗೂ ಕಾವೇರಿ ನೀರನ್ನೇ ಬಳಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಅರ್ಧಕ್ಕರ್ಧ ಕಾವೇರಿ ನೀರು ಪ್ಲ್ರಾಟ್‌ಗಳಲ್ಲಿ ಪೋಲಾಗುತ್ತಿರುವ ಆರೋಪ ಕೇಳಿ ಬಂದಿದೆ. ಈ ಅವ್ಯವಸ್ಥೆಗಳು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ಬಂದರೂ ಸರ್ಕಾರದಿಂದ ಸೂಚನೆ ಬರುವವರೆಗೂ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೈಕಟ್ಟಿ ಕುಳಿತ್ತಿದ್ದಾರೆ. ‌

ಅಪಾರ್ಟ್‌ಮೆಂಟ್‌ಗಳಿಗೆ ಟ್ಯಾಂಕರ್‌ ನೀರು: ನಗರದ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಬೋರ್‌ವೆಲ್‌ ಬತ್ತಿದ್ದರಿಂದ ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದಾರೆ. ಅಪಾರ್ಟ್‌ಮೆಂಟ್‌ಗಳ ನೀರು ಪೂರೈಕೆಗೆ ಬೋರ್‌ವೆಲ್‌ಗ‌ಳಿಂದ ನಿರಂತರ ನೀರು ತೆಗೆಯುತ್ತಿರುವುದರಿಂದ ಅಂತರ್ಜಲ ಮಟ್ಟ ಮತ್ತಷ್ಟು ಕುಸಿದಿದ್ದು, ಕಲುಷಿತ ನೀರು ದೊರೆಯುತ್ತಿದೆ. ಬೋರ್‌ವೆಲ್‌ಗ‌ಳಿಂದ ನೀರು ಪಂಪ್‌ ಮಾಡಿ ತೆಗೆಯುತ್ತಿರುವ ಟ್ಯಾಂಕರ್‌ಗಳು ನೀರಿನ ಪರೀಕ್ಷೆ ಮಾಡದೆಯೇ ಅಪಾಟ್‌ ìಮೆಂಟ್‌ಗಳಿಗೆ ಪೂರೈಕೆ ಮಾಡುತ್ತಿವೆ. ಈ ನೀರಿನ ಬಳಕೆಯಿಂದ ಚರ್ಮರೋಗ ಸೇರಿ ಹಲವು ಕಾಯಿಲೆಗಳಿಗೂ ಕಾರಣವಾಗಿದೆ.

ನೀರಿನ ಸಮಸ್ಯೆಯಿಂದ ಪ್ಲ್ರಾಟ್‌ ತೊರೆದ ಬಾಡಿಗೆದಾರರು: ಕೆಂಗೇರಿ, ಜಯನಗರ, ಬೊಮ್ಮನಹಳ್ಳಿ, ದಾಸರಹಳ್ಳಿ ಭಾಗಗಳಲ್ಲಿರುವ ಕೆಲ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರಿನ ಸಂಪರ್ಕವಿದ್ದರೂ ವಾರಕ್ಕೆ ಒಂದು ಅಥವಾ ಎರಡು ದಿನ ಮಾತ್ರ ನೀರು ದೊರೆಯುತ್ತಿದೆ. ಕೆಲವೊಂದು ಪ್ಲ್ರಾಟ್‌ನ ಬಾಡಿಗೆದಾರರು ನೀರಿನ ಸಮಸ್ಯೆಯಿಂದ ನೊಂದು ಮನೆ ತೊರೆದಿದ್ದಾರೆ. ಆದರೆ, ದಿನನಿತ್ಯ ಕಾವೇರಿ ನೀರು ಬರುವ ಅಪಾರ್ಟ್‌ಮೆಂಟ್‌ಗಳಲ್ಲಿ ಗಾರ್ಡನ್‌ಗಳಿಗೆ, ಮನೆ ಶುಚಿಗೊಳಿಸುವುದೂ ಸೇರಿ ದೈನಂದಿನ ಕಾರ್ಯಗಳಿಗೇ ಅತ್ಯಧಿಕ ಪ್ರಮಾಣದಲ್ಲಿ ಕಾವೇರಿ ನೀರನ್ನು ಬಳಸಿ ಪೋಲು ಮಾಡುತ್ತಿರುವುದು ದುರಾದೃಷ್ಟಕರ ಎಂಬುದು ಜಲ ತಜ್ಞರ ಅಭಿಪ್ರಾಯ.

ನೀರು ಪೋಲು ಮಾಡದಂತೆ ಜಲಮಂಡಳಿ ಮನವಿ:ಬೆಂಗಳೂರಿನ ಒಂದೊಂದು ಪ್ರದೇಶದ ಅಪಾರ್ಟ್‌ಮೆಂಟ್‌ಗಳಿಗೂ ಒಂದೊಂದು ದಿನಕ್ಕೆ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳಿಗೆ ದಿನ ಬಿಟ್ಟು ದಿನ ನೀರು ಪೂರೈಕೆ ಆಗುತ್ತದೆ. ಇನ್ನು ಕೆಲವು ಅಪಾರ್ಟ್‌ಮೆಂಟ್‌ಗಳಿಗೆ 3 ದಿನಕ್ಕೊಮ್ಮೆ ಪೂರೈಸಲಾಗುತ್ತಿದೆ. ಪ್ರತ್ಯೇಕ ಅಪಾರ್ಟ್‌ಮೆಂಟ್‌ ಗಳಿಗೆ ಇಂತಿಷ್ಟೇ ನೀರು ಪೂರೈಕೆ ಮಾಡಬೇಕೆಂಬ ನಿಯಮಗಳಿಲ್ಲ. ಕಾವೇರಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ 3-4 ವರ್ಷಗಳಿಂದ ನಿರಂತರ ಪೂರೈಸಲಾಗುತ್ತಿರುವ 1,450 ಎಂಎಲ್‌ಡಿ ನೀರು ಈಗಲೂ ಪೂರೈಕೆಯಾಗುತ್ತಿದೆ. ಕಾವೇರಿ ನೀರನ್ನು ಮಿತವಾಗಿ ಬಳಸಿದರೆ ಉತ್ತಮ. ಅನಗತ್ಯವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ಪೂಲು ಮಾಡಬಾರದು ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರ ಬಿ.ಸುರೇಶ್‌ ಈ ಮೂಲಕ ಮನವಿ ಮಾಡಿದ್ದಾರೆ.

ಅಂತರ್ಜಲಮಟ್ಟ ಕುಸಿತ: ಮಳೆ ಕೊರತೆ, ಉಷ್ಣಾಂಶ ಹೆಚ್ಚಳದಿಂದ ಅಂತರ್ಜಲ ಮಟ್ಟ ರಾಜಧಾನಿಯಲ್ಲೂ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇನ್ನು ಬೆಂಗಳೂರಿನಲ್ಲಿ ತೆರೆದ ಬಾವಿ, ಕೊಳವೆ ಬಾವಿ ಸೇರಿ ಸಾರ್ವ ಜನಿಕ ಜಲಾಶಯಗಳು ಬತ್ತಿ ಹೋಗಿ ಜಲಾಕ್ಷಮ ಉಂಟಾ ಗುವ ಲಕ್ಷಣ ಗೋಚರಿಸಿವೆ. ಮುಂದಿನ ವರ್ಷ ಮಳೆ ಆರಂಭ ವಾಗುವವರೆಗೂ ಬಹುತೇಕ ಅಪಾರ್ಟ್‌ಮೆಂಟ್‌ ವಾಸಿಗಳು ಸಂಪೂರ್ಣ ಕಾವೇರಿ ನೀರಿಗೆ ಅವಲಂಬಿತರಾಗಿದ್ದಾರೆ. ಕಾವೇರಿ ನೀರು ಪೂರೈಕೆ ಆಗದ ಕೆಲವು ದಿನಗಳಲ್ಲಿ ದುಪ್ಪಟ್ಟು ಹಣ ಕೊಟ್ಟು ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಾರೆ. ಇದು ಭಾರಿ ಹೊರೆಯಾಗು ತ್ತಿದೆ ಎಂಬುದು ಅಪಾರ್ಟ್‌ಮೆಂಟ್‌ ನಿವಾಸಿಗಳ ಗೋಳು. ನೀರನ್ನು ಪೋಲು ಮಾಡದೇ, ಪ್ರಸ್ತುತ ಲಭ್ಯ ಇರುವ ನೀರನ್ನು ಅಗತ್ಯ ಉಪಯೋಗಕ್ಕೆ ಮಾತ್ರ ಬಳಸಿದರೆ ಮುಂದೆ ನೀರಿನ ಬವಣೆಯಿಂದ ಪಾರಾಗಬಹುದು ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ಶೇ.50 ಎಸ್‌ಟಿಪಿ ನೀರು ಚರಂಡಿಗೆ: ಅಪಾರ್ಟ್‌ಮೆಂಟ್‌ಗಳಿಗೆ ಎಸ್‌ಟಿಪಿ(ನೀರು ಸಂಸ್ಕರಣ ಘಟಕ) ಅಳವಡಿಸುವಂತೆ 2017ರಲ್ಲಿ ಜಲಮಂಡಳಿ ಆದೇಶಿಸಿತ್ತು. ಈ ನೀರನ್ನು ಗಾರ್ಡನ್‌ಗಳಿಗೆ, ಕಾರು ಕ್ಲಿನಿಂಗ್‌ ಇನ್ನೀತರ ಕಾರ್ಯಗಳಿಗೆ ಉಪಯೋಗಿಸಲು ಸೂಚಿಸಿತ್ತು. ಅಪಾರ್ಟ್‌ಮೆಂಟ್‌ ನಿವಾಸಿಗಳು ಈ ಸಂಸ್ಕರಣಾ ನೀರು ಬಳಸಿದರೆ ಪೋಲಾಗುವ ಅರ್ಧಕ್ಕರ್ಧ ಕಾವೇರಿ ನೀರು ಉಳಿತಾಯವಾಗಲಿದೆ ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಆದರೆ, ಶೇ.70 ಅಪಾರ್ಟ್‌ ಮೆಂಟ್‌ಗಳಲ್ಲಿ ಎಸ್‌ಟಿಪಿಗಳಲ್ಲಿ ಸಂಸ್ಕರಣೆಯಾಗುವ ನೀರು ಬಳಕೆಯಾಗುತ್ತಿಲ್ಲ. ಶೇ.50 ನೀರು ಗಾರ್ಡನ್‌ಗೆ ಬಳಸಿದರೆ, ಉಳಿದ ಶೇ.50 ನೀರು ಚರಂಡಿ ಸೇರುತ್ತಿದೆ.

ಬೆಂಗಳೂರಿನಲ್ಲಿ ಬಹುತೇಕ ಅಪಾರ್ಟ್‌ ಮೆಂಟ್‌ಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಯಾಗುತ್ತಿದೆ. ಅಪಾರ್ಟ್‌ ಮೆಂಟ್‌ ನಿವಾಸಿಗಳು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ನೀರನ್ನು ಬಳಸಬೇಕು. ಅನಗತ್ಯವಾಗಿ ನೀರು ಪೋಲು ಮಾಡಬೇಡಿ. ಬಿ.ಸುರೇಶ್‌, ಪ್ರಧಾನ ಮುಖ್ಯ ಅಭಿಯಂತರ,ಜಲಮಂಡಳಿ.

 -ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.