ನೀರು ಶುದ್ಧೀಕರಣಸಾಧನ ಬಿಡುಗಡೆ
Team Udayavani, May 31, 2018, 11:58 AM IST
ಬೆಂಗಳೂರು: ಪ್ರತಿಷ್ಠಿತ ಬ್ಲೂ ಸ್ಟಾರ್ ಲಿಮಿಟೆಡ್ ಹೊಸದಾಗಿ ಮೂರು ಶ್ರೇಣಿಯ, 12 ಮಾದರಿಯ ನೀರು ಶುದ್ಧೀಕರಣ ಸಾಧನಗಳನ್ನು ಪರಿಚಯಿಸಿದೆ. ರಿವರ್ಸ್ ಆಸ್ಮೋಸಿಸ್ (ಆರ್‌ಒ), ಅಲ್ಟ್ರಾವೈಲೆಟ್ (ಯುವಿ) ವಿಧಾನದಡಿ ಶುದ್ಧೀಕರಣ ವ್ಯವಸ್ಥೆ ಜತೆಗೆ ಅತ್ಯಾಧುನಿಕ ಇಮ್ಯುನೋ ಬೂಸ್ಟ್ ತಂತ್ರಜ್ಞಾನದಡಿ ನೀರು ಸಂಸ್ಕರಿಸುವ ಶುದ್ಧೀಕರಣ ಸಾಧನಗಳನ್ನು ಸಂಸ್ಥೆಯು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನಗರದಲ್ಲಿ ಬುಧವಾರ ಹೊಸ ಸಾಧನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಬ್ಲೂ ಸ್ಟಾರ್ ಲಿಮಿಟೆಡ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಬಿ.ತ್ಯಾಗರಾಜನ್, ಸುದೀರ್ಘ 75ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಸಂಸ್ಥೆಯು ಜನರಿಗೆ ಗುಣಮಟ್ಟದ ನೀರು ಶುದ್ಧೀಕರಣ ಸಾಧನಗಳನ್ನು ಪರಿಚಯಿಸಿದೆ. ವರ್ಷಗಳು ಕಳೆದಂತೆ ನದಿ, ಕೆರೆ ನೀರು, ಅಂತರ್ಜಲ ನೀರು ಕಲುಷಿತಗೊಳ್ಳುತ್ತಿದ್ದು, ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆ ಹಿನ್ನೆಲೆಯಲ್ಲಿ ಶುದ್ಧ ನೀರಿನ ಸಾಧನಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.
12 ಮಾದರಿ ಬಿಡುಗಡೆ: ಸುಧಾರಿತ ಎಲೆನರ್, ಜೆನಿಯಾ ಹಾಗೂ ಅರಿಸ್ಟೋ ಶ್ರೇಣಿಗಳಡಿ 12 ಹೊಸ ಮಾದರಿಗಳನ್ನು ಪರಿಚಯಿಸಲಾಗಿದೆ. ಎಲೆನರ್ ಶ್ರೇಣಿಯು ಅತ್ಯಾಧುನಿಕ ಇಮ್ಯುನೋ ಬೂಸ್ಟ್ ತಂತ್ರಜ್ಞಾನ ಒಳಗೊಂಡಿದೆ. ಈ ತಂತ್ರಜ್ಞಾನವು ನೀರಿನಲ್ಲಿನ ಪಿಎಚ್ ಪ್ರಮಾಣ ವೃದ್ಧಿಗೆ ಸಹಕಾರಿಯಾಗಲಿದೆ. ಈ ಶ್ರೇಣಿಯ ನೀರು ಶುದ್ಧೀಕರಣ ಸಾಧನಗಳು 15,400 ರೂ.ನಿಂದ 17,900 ರೂ. ದರದಲ್ಲಿ ಲಭ್ಯವಿದೆ ಎಂದು ಹೇಳಿದರು.
ಜೆನಿಯಾ ಶ್ರೇಣಿಯ ಸಾಧನಗಳಲ್ಲಿ ಆರ್‌ಒ ವಿಧಾನ ಮಾತ್ರವಲ್ಲದೇ ಆರ್‌ಒ ಮತ್ತು ಯುವಿ ವಿಧಾನದಡಿ ನೀರು ಶುದ್ಧವಾಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮಾದರಿಯು 10,900 ರೂ.ನಿಂದ 12,900 ರೂ. ದರದಲ್ಲಿ ಸಿಗಲಿದೆ. ಅರಿಸ್ಟೋ ಶ್ರೇಣಿಯಡಿ ಸುಧಾರಿತ ಶುದ್ಧೀಕರಣ ಸಾಧನಗಳು 11,400 ರೂ.ನಿಂದ 13,400 ರೂ. ಬೆಲೆಗಳಲ್ಲಿ ಲಭ್ಯವಿದೆ. “ಇ- ಕಾಮರ್ಸ್’ ಸಂಸ್ಥೆಗಳ ಮೂಲಕವೂ ಖರೀದಿಗೆ ಅವಕಾಶವಿದೆ ಎಂದು ತಿಳಿಸಿದರು. ಸಂಸ್ಥೆಯ ಗಿರೀಶ್ ಹಿಂಗೊರಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.