ನಮಗೆ ಪ್ರತ್ಯೇಕ ರಾಜ್ಯ ಅಲ್ಲ,ಅಭಿವೃದ್ಧಿ ಬೇಕು: ಯತ್ನಾಳ್
Team Udayavani, Jun 8, 2017, 10:47 AM IST
ವಿಧಾನಪರಿಷತ್: “ಕಳೆದ 30-40 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಿಂದ ಆಯ್ಕೆಯಾದ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ವಿಧಾನಸೌಧದಕ್ಕೆ ಬಂದು ನಿದ್ದೆ ಮಾಡಿ ಹೋಗಿ ಆ ಭಾಗಕ್ಕೆ ಅನ್ಯಾಯ ಮಾಡಿದ್ದಾರೆ. ಅನ್ಯಾಯ ಮಾಡಿದವರೇ ಇಂದು ನಮಗೆ ಅನ್ಯಾಯ ಆಗಿದೆ,ಪ್ರತ್ಯೇಕ ರಾಜ್ಯ ಬೇಕು ಎಂದು ಭಾಷಣ ಹೊಡೆಯುತ್ತಾರೆ.
ಆದರೆ, ನಮಗೆ ಪ್ರತ್ಯೇಕ ರಾಜ್ಯ ಅಲ್ಲ, ಅಭಿವೃದ್ಧಿ ಬೇಕು’ ಎಂದು ವಿಧಾನಪರಿಷತ್ತಿನ ಪಕ್ಷೇತರ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ತೀಕ್ಷ್ಣ ಮಾತುಗಳನ್ನಾಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಸಂತ್ರಸ್ತ ಕುಟುಂಬಗಳಿಗೆ ಏಕರೂಪ ಪರಿಹಾರ ಒದಗಿಸುವ ಕುರಿತು ನಿಯಮ 330 ಅಡಿಯಲ್ಲಿ ಪ್ರಸ್ತಾಪಿಸಲಾದ ವಿಷಯದ ಮೇಲೆ ಮಾತನಾಡಿ, “ನನ್ನದು ಅಖಂಡ ಕರ್ನಾಟಕದ ಕಲ್ಪನೆ. ಹಾಗಾಗಿ ಪ್ರತ್ಯೇಕ ರಾಜ್ಯ ಬೇಕಿಲ್ಲ. ಉತ್ತರ ಕರ್ನಾಟಕ ಭಾಗ ಅಭಿವೃದ್ದಿ ಆಗಿದ್ದಿದ್ದರೆ, ಯಾರೂ ಪ್ರತ್ಯೇಕ ರಾಜ್ಯ ಕೇಳುತ್ತಿರಲಿಲ್ಲ. ಅಭಿವೃದ್ಧಿ ಮಾಡದೇ ತಾವೇ ಅನ್ಯಾಯ ಮಾಡಿ, ಈಗ ನಮಗೆ ಅನ್ಯಾಯ ಆಗಿದೆ ಪ್ರತ್ಯೇಕ ರಾಜ್ಯ ಬೇಕು ಎಂದು ಉತ್ತರ ಕರ್ನಾಟಕ ಭಾಗದ ಕೆಲ ಜನಪ್ರತಿ ನಿಧಿಗಳು ಕೇಳುತ್ತಿರುವುದು ವಿಪರ್ಯಾಸ ಎಂದರು.
ಒಗ್ಗಟ್ಟಿನ ಕೊರತೆ: ಮೈಸೂರು ಮಹಾರಾಜರ ಕಾರಣಕ್ಕಾಗಿ ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟಿದರು. ಅಲ್ಲದೇ ಈ ಭಾಗದ ಜನ ಮತ್ತು ಜನಪ್ರತಿನಿಧಿಗಳಿಗೆ ನೀರಾವರಿಯ ಮಹತ್ವ ಗೊತ್ತಿತ್ತು, ಒಗ್ಗಟ್ಟು ಇತ್ತು. ಆದ್ದರಿಂದ ಮೈಸೂರು ಕರ್ನಾಟಕ ಭಾಗ ಅಭಿವೃದ್ಧಿ ಕಂಡಿತು. ಆದರೆ, ನಮ್ಮ ಕಡೆ (ಉತ್ತರ ಕರ್ನಾಟಕ) ಮಹತ್ವ ಗೊತ್ತಾಗಿಲ್ಲ, ಒಗ್ಗಟ್ಟಂತೂ ಇರಲೇ ಇಲ್ಲ. ಈಗಲೂ ಕಿತ್ತಾಟ ನಡೆಯುತ್ತದೆ.
ಜನ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿದರೆ, ಇಲ್ಲಿ ರೊಟ್ಟಿ-ಬ್ಯಾಳಿ ತಿಂದು ನಿದ್ದೆ ಮಾಡಿ ಕಾಲ ಕಳೆದು ಅನ್ಯಾಯ ಮಾಡಿದವರೇ, ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೇ ಅದಕ್ಕಾಗಿ ಪ್ರತ್ಯೇಕ ರಾಜ್ಯ ಬೇಕು ಎಂದು ಭಾಷಣ ಮಾಡುತ್ತಾರೆ ಎಂದು ಯತ್ನಾಳ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.