ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ನೇಕಾರ ಅಭಿವೃದ್ಧಿ ನಿಗಮ
Team Udayavani, Mar 5, 2018, 6:10 AM IST
ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ಬಂದ ಆರು ತಿಂಗಳೊಳಗೆ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿ, 100 ಕೋಟಿ ರೂ.ಗಳ ಅನುದಾನ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ರಾಜ್ಯ ನೇಕಾರ ಮಹಾಸಭಾದಿಂದ ಭಾನುವಾರ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ನೇಕಾರರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. 6 ತಿಂಗಳೊಳಗಾಗಿ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿ, 100 ಕೋಟಿ ರೂ.ಗಳ ಅನುದಾನ ನೀಡಲಿದ್ದೇನೆ. ಹಾಗೆಯೇ ಬೆಂಗಳೂರಿನಲ್ಲಿ ನೇಕಾರರ ಭವನ ನಿರ್ಮಾಣಕ್ಕೆ ಉತ್ತಮ ಪ್ರದೇಶದ ಜಮೀನು ಹಾಗೂ 5 ಕೋಟಿ ರೂ. ಅನುದಾನ ಮಂಜೂರು ಮಾಡುವುದಾಗಿ ಘೋಷಿಸಿದರು. ಸಮಾವೇಶದಲ್ಲಿ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ಪುಷ್ಟಾಂಡಜ ಮಹರ್ಷಿ ಆಶ್ರಮದ ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ, ಗುರುಸಿದ್ದೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಸದ್ಗುರು ಸಿದಾಟಛಿಶ್ರಮದ ಪ್ರಭುಲಿಂಗ ಸ್ವಾಮೀಜಿ, ಸಿದಾಟಛಿರೂಢ ಮಠದ ಘನಲಿಂಗ ಮಹಾಸ್ವಾಮೀಜಿ, ಜಗದ್ಗುರು ವೀರಭಿಕ್ಷಾವರ್ತಿ ಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಮುಖಂಡರಾದ ಸುರೇಶ್ ಕುಮಾರ್, ಬಿ.ಜೆ.ಪುಟ್ಟಸ್ವಾಮಿ, ಎಸ್.ಆರ್.ವಿಶ್ವನಾಥ್, ಎಸ್.ಹರೀಶ್, ರಾಜ್ಯ ನೇಕಾರ ಮಹಾಸಭಾದ ಅಧ್ಯಕ್ಷ ಬಿ.ಎಸ್.ಸೋಮಶೇಖರ ಮೊದಲಾದವರು ಇದ್ದರು.
ಬಿಎಸ್‌ವೈ ಕೊಂಡಾಡಿದ ಈಶ್ವರಪ್ಪ
ನೇಕಾರರ ಸಮಾವೇಶದಲ್ಲಿ ಮಾತನಾಡಿದ ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಮ್ಮ ಭಾಷಣದಲ್ಲಿ ಪೂರ್ತಿಯಾಗಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊಗಳಿ ಹೊನ್ನಶೂಲಕ್ಕೆ ಏರಿಸಿದರು. ಬಿಎಸ್‌ವೈ ಸಿಎಂ ಆಗಿದ್ದಾಗ ಕನಕದಾಸರ
ಮೂಲ ನೆಲೆ ಅಭಿವೃದ್ಧಿಗೆ 25 ಕೋಟಿ ರೂ. ನೀಡಿ, ದೇವರದಾಸಿಮಯ್ಯನವರನ್ನು ನಾಡಿಗೆ ಪರಿಚಯಿಸಲು ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ನೇಕಾರ ಸಮುದಾಯಕ್ಕೆ ಬಿಎಸ್‌ವೈ ನೀಡಿರುವ ಭರವಸೆ ಈಡೇರಿಸಲು ನಾನೂ ನಿಮ್ಮೊಟ್ಟಿಗೆ ಇರುತ್ತೇನೆ. ಯಡಿಯೂರಪ್ಪ ಅವರು ಬಹಳ ಬೇಗ ಎಲ್ಲರನ್ನು ನಂಬುತ್ತಾರೆ ಹಾಗೂ ಒಳ್ಳೊಳ್ಳೆಯ ಸ್ಥಾನವನ್ನು ನೀಡುತ್ತಾರೆ. ಆದರೆ, ದ್ರೋಹ ಮಾಡುವವರು ಮತ್ತು ಮಾಡದವರ ಬಗ್ಗೆ ಗಮನಿಸುತ್ತಿರಬೇಕು ಎಂದು ಸೂಕ್ಷ್ಮವಾಗಿ ಸಲಹೆ ನೀಡಿದರು.
ಮಾನವ ಕುಲದ ಮಾನ ಮರ್ಯಾದೆ ಉಳಿಸುವ ನೇಕಾರರ ಕಷ್ಟ ಸುಖ ನೋಡುವ ಕರ್ತವ್ಯ ಸರ್ಕಾರದ ಮೇಲಿದೆ. ಸಿಎಂ
ಸಿದ್ದರಾಮಯ್ಯ ಅವರು ಐದು ವರ್ಷದಲ್ಲಿ ನೇಕಾರರಿಗೆ ಏನಾದರೂ ಸೌಲಭ್ಯ ನೀಡಿದ್ದಾರೆಯೇ?
– ಕೆ.ಎಸ್.ಈಶ್ವರಪ್ಪ, ಮೇಲ್ಮನೆ ಪ್ರತಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು