ಕುಳಿತಲ್ಲೆ ಶಸ್ತ್ರಾಸ್ತ್ರಗಳ ಪರವಾನಗಿ, ನವೀಕರಣ
Team Udayavani, Dec 11, 2021, 10:04 AM IST
Representative Image used
ಬೆಂಗಳೂರು: ಪೊಲೀಸ್ ವ್ಯವಸ್ಥೆಗೆ ಆಧುನಿಕ ತಂತ್ರಜ್ಞಾ ನದ ಸ್ಪರ್ಶ ನೀಡಲು ಹತ್ತಾರು ಕ್ರಮಗಳನ್ನು ಕೈಗೊಂಡಿರುವ ಪೊಲೀಸ್ ಇಲಾಖೆ ಇದೀಗ ಶಸ್ತ್ರಾಸ್ತ್ರ ಪರವಾನಗಿ ಯನ್ನೂ ಆನ್‌ಲೈನ್ ಮೂಲಕ ಒದಗಿಸುತ್ತಿದೆ. ಪೊಲೀಸರ ಈ ಆನ್‌ಲೈನ್ ಕ್ರಮದಿಂದ ಅರ್ಜಿಗಳು ಸಲ್ಲಿಸುವ ಸಂಖ್ಯೆಯೂ ಏರಿಕೆಯಾಗಿದ್ದರೆ, ಶಸ್ತ್ರಾಸ್ತ್ರ ಪರವಾನಗಿ , ನವೀಕರಣ ಮತ್ತಿತ್ತರ ಅರ್ಜಿಗಳ ವಿಲೇವಾರಿಯು ತ್ವರಿತಗತಿಯಲ್ಲಿ ಆಗುತ್ತಿದೆ.
ಇದು ಶಸ್ತ್ರಾಸ್ತ್ರ ಪರವಾನಗಿ ಮತ್ತು ನವೀಕರಣಕ್ಕೆ ಅರ್ಜಿ ಸಲ್ಲಿಸಿದವರ ಕಚೇರಿ “ಅಲೆದಾಟ’ವನ್ನು ಸಹ ತಪ್ಪಿಸಿದೆ. ಈ ಮೊದಲು ಪ್ರತಿ ತಿಂಗಳು ಶಸ್ತ್ರಾಸ್ತ್ರ ಪರವಾನಗಿ ನವೀಕರಣ ಸೇರಿ 50-100 ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಇದೀಗ ಅದು ಎರಡು ಪಟ್ಟು ಹೆಚ್ಚಾಗಿದೆ. ಅಂದರೆ 150-200 ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ಎರಡು ತಿಂಗಳಲ್ಲಿ 450ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಅಷ್ಟೇ ವೇಗದಲ್ಲಿ ಅರ್ಜಿಗಳ ವಿಲೇವಾರಿ ಕೂಡ ಆಗುತ್ತಿವೆ.
ಹೊಸ ಪರವಾನಗಿ ಕೂಡ ಹೆಚ್ಚು: ಇದೇ ವೇಳೆ ಹೊಸ ಶಸ್ತ್ರಾಸ್ತ್ರ ಪರವಾನಗಿ ಸಂಬಂಧ ಅರ್ಜಿಗಳ ಸಂಖ್ಯೆಯೂ ಹೆಚ್ಚಾಗಿವೆ. ಪ್ರತಿ ತಿಂಗಳ 30ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗು ತ್ತಿದ್ದು, ಕಳೆದ ಎರಡು ತಿಂಗಳಲ್ಲಿ 75 ಅರ್ಜಿಗಳು ಬಂದಿ ವೆ.
ಅರ್ಜಿಗಳ ಪೈಕಿ ಶೇ. 95ರಷ್ಟು ಉದ್ಯಮಿಗಳು, ನಿವೃತ್ತ ಸೈನಿಕರು. ರಿಯಲ್ ಎಸ್ಟೇಟ್, ಲಕ್ಷ, ಕೋಟಿಗಟ್ಟಲೇ ವ್ಯವಹಾರ ನಡೆಸುವ ಅಂಗಡಿ ಮಾಲೀಕರು, ಜ್ಯುವೆಲ್ಲರಿ ಮಾಲೀಕರೇ ಇದ್ದಾರೆ. ಇನ್ನುಳಿದಂತೆ ಶೇ.5ರಷ್ಟು ಮಂದಿ ಶೂಟಿಂಗ್ ತರಬೇತಿ ಕೇಂದ್ರದವರು ಹಾಗೂ ಇತರೆ ವರ್ಗದವರು ಇದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಅರ್ಜಿ ಹೆಚ್ಚಾಗಲು ಕಾರಣವೇನು?: ಆನ್‌ಲೈನ್ ಸೇವೆಗೂ ಮೊದಲು ನೇರವಾಗಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಶಸ್ತ್ರಾಸ್ತ್ರ ವಿಭಾಗದಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ ವರ್ಷಕ್ಕೆ 1ರಿಂದ 2 ಸಾವಿರ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು.
ಆದರೆ, ಅರ್ಜಿಗಳ ವಿಲೇವಾರಿ ಬಹಳ ವಿಳಂಬವಾಗುತ್ತಿತ್ತು. ಪೊಲೀಸ್ ಪರಿಶೀಲನೆ, ತಪ್ಪು ದಾಖಲೆಗಳು, ಇದರೊಂದಿಗೆ ಲಂಚಕ್ಕೆ ಬೇಡಿಕೆ ಹೀಗೆ ನಾನಾ ಕಾರಣಗಳಿಗೆ ಆರರಿಂದ ಎಂಟು ತಿಂಗಳವರೆಗೆ ಅರ್ಜಿಗಳ ವಿಲೇವಾರಿ ಮುಂದೂಡಲಾಗುತ್ತಿತ್ತು. ಪೊಲೀಸ್ ಆಯುಕ್ತರ ಕಚೇರಿಗೆ ತಿಂಗಳುಗಟ್ಟಲೇ ಅಲೆದು ಬೇಸತ್ತು ಹೋಗುತ್ತಿದ್ದರು. ಹೀಗಾಗಿ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದರು.
ಆದರೆ, ಇದೀಗ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಮನೆಯಲ್ಲೇ ಕುಳಿತು ಆನ್‌ಲೈನ್‌ಮೂಲಕ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಅಪ್‌ಲೋಡ್ ಮಾಡಬೇಕು. ಬಳಿಕ ಶಸ್ತ್ರಾಸ್ತ್ರ ವಿಭಾಗ ಅಧಿಕಾರಿಗಳು ದಾಖಲೆ ಪರಿಶೀಲಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಿ ದ್ದಾರೆ. ಪೊಲೀಸ್ ಪರಿಶೀಲನೆ ಕೂಡ ವೇಗವಾಗಿ ನಡೆ ಯಲಿದ್ದು, ಠಾಣೆ ಪೊಲೀಸರೇ ಶಸ್ತ್ರಾಸ್ತ್ರ ವಿಭಾಗಕ್ಕೆ ಮಾಹಿತಿ ನೀಡಲಿದ್ದಾರೆ.
ಇದನ್ನೂ ಓದಿ;- 15 ಸಾವಿರ ಶಿಕ್ಷಕರ ನೇಮಕಕ್ಕೆ ನಿರ್ಧಾರ: ಸಚಿವ ಬಿ.ಸಿ. ನಾಗೇಶ್
ಪೂರ್ಣ ಪ್ರಕ್ರಿಯೆ ಮುಗಿದ ಬಳಿಕ ಅರ್ಜಿದಾರರ ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗಲಿದೆ. ಅನಂತರ ಕೆಲ ದಿನಗಳಲ್ಲೇ ಶಸ್ತ್ರಾಸ್ತ್ರ ಪರವಾನಗಿ ಅಥವಾ ನವೀಕರಣ ಆಗಿರುವ ಸಂದೇಶ ಪೋಸ್ಟ್ ಅಥವಾ ಮೊಬೈಲ್ ಸಂದೇಶದ ಮೂಲಕ ಕಳುಹಿಸಲಾಗುತ್ತದೆ ಎಂದು ಶಸ್ತ್ರಾಸ್ತ್ರ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಆನ್‌ಲೈನ್ ವ್ಯವಸ್ಥೆ ವೇಗಗೊಂಡ ಪ್ರಕ್ರಿಯೆ
“ಈ ಮೊದಲು ಅರ್ಜಿ ಸಲ್ಲಿಸಿದ್ದೆ, ಆಗ ಪೊಲೀಸ್ ಪರಿಶೀಲನೆ, ದಾಖಲೆಗಳ ಪರಿಶೀಲನೆ ಎಂದು ಸುಮಾರು ಆರೇಳು ತಿಂಗಳು ತಡ ಮಾಡಿದರು. ಜತೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದೀಗ ಆನ್‌ಲೈನ್ ವ್ಯವಸ್ಥೆ ಮಾಡಿರುವುದರಿಂದ ಎಲ್ಲ ಪ್ರಕ್ರಿಯೆ ಗಳು ವೇಗವಾಗಿ ಆಗುತ್ತಿವೆ. 14 ದಿನಕ್ಕೆ ನನ್ನ ಪೊಲೀಸ್ ಪರಿಶೀಲನೆ ಮುಕ್ತಾಯಗೊಂಡಿದೆ. ಇನ್ನು 15-20 ದಿನದಲ್ಲಿ ಶಸ್ತ್ರಾಸ್ತ್ರ ಪರವಾನಗಿ ಸಿಗಬಹುದು ಎಂದು ಅರ್ಜಿದಾರರೊಬ್ಬರು ಹೇಳಿದರು.
“ಈ ಮೊದಲು ವರ್ಷಕ್ಕೆ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಆ ಅರ್ಜಿಗಳ ವಿಲೇವಾರಿಗಳಿಗೆ ಕೆಲವೊಂದು ಲೋಪದೋಷಗಳಿ ದ್ದವು. ಅವುಗಳನ್ನು ನಿಯಂತ್ರಿ ಸಲು ಆನ್‌ಲೈನ್‌ವ್ಯವಸ್ಥೆ ಮಾಡಲಾಗಿದೆ. ಅದರಿಂದ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ವಿಲೇವಾರಿ ಕೂಡ ವೇಗವಾಗಿ ನಡೆಯುತ್ತಿದೆ ಎಂದರು.”● ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ
ಸೇವೆಗಳನ್ನು ಪಡೆಯುವುದು ಹೇಗೆ?
ಹೊಸದಾಗಿ ರೂಪಿಸಿರುವ www.armsbcp. karnataka.gov.in ವೆಬ್‌ಸೈಟ್‌ಗೆ ಹೋಗಿ, ಅದರಲ್ಲಿ ಕೇಳುವ ಆಯ್ಕೆಗಳನ್ನು ಆಯ್ದುಕೊಂಡು ಹೊಸ ಶಸ್ತ್ರಾಸ್ತ್ರ ಪರವಾನಗಿ ಅಥವಾ ಚಾಲ್ತಿಯಲ್ಲಿರುವ ಶಸ್ತ್ರಾಸ್ತ್ರಗಳ ಪರವಾನಗಿ ಆಯ್ಕೆಗಳಿರುತ್ತವೆ. ಈ ಪೈಕಿ ಚಾಲ್ತಿಯಲ್ಲಿರುವ ಶಸ್ತ್ರಾಸ್ತ್ರಗಳ ಪರವಾನಗಿ ವಿಭಾಗದಲ್ಲಿ ನವೀಕರಣ, ಮರು ನೋಂದಣಿ, ಪ್ರಯಾಣ ಪರವಾನಗಿ, ಹೆಚ್ಚುವರಿ ಶಸ್ತ್ರ ಹೊಂದಲು, ಶಸ್ತ್ರ ತಪಾಸಣೆ, ಮಾರಾಟ-ವರ್ಗಾವಣೆಗೆ ಅನುಮತಿ, ಅವಧಿ ವಿಸ್ತರಣೆ, ನಿಯೋಜಿತರನ್ನು ಸೇರಿಸುವುದು, ತೆಗೆದು, ಹಾಕಲು ಅರ್ಜಿ, ಶಸ್ತ್ರಾಸ್ತ್ರ ಹಿಂಪಡೆಯಲು, ವಿಳಾಸ ಬದಲಾವಣೆ, ವ್ಯಾಪ್ತಿ ವಿಸ್ತರಣೆ ಸೇರಿ ಹತ್ತು ಹಲವು ಸೇವೆಗಳನ್ನು ಪಡೆಯಬಹುದು.
● ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.