ಏನಿದು ವಿವಿಪ್ಯಾಟ್‌? ಗೊತ್ತೇ ಇಲ್ಲ ಅಂತಾರೆ ನಮ್‌ ಜನ!


Team Udayavani, Apr 23, 2018, 12:49 PM IST

yenidu-vv.jpg

ಬೆಂಗಳೂರು: ಇವಿಎಂಗಳ ದುರ್ಬಳಕೆ, ತಿರುಚುವಿಕೆಗೆ ಈಗ ಸಾಧ್ಯವಿಲ್ಲ. ಏಕೆಂದರೆ ಇವಿಎಂನಲ್ಲಿ ಹಾಕಿದ ಮತ ಕಣ್ಣಾರೆ ಕಂಡು ಖಾತರಿಪಡಿಸಿಕೊಳ್ಳಲು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ವಿವಿಪ್ಯಾಟ್‌ ಬಳಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ರಾಜ್ಯದ ಶೇ.72ರಷ್ಟು ಮಂದಿಗೆ ವಿವಿಪ್ಯಾಟ್‌ ಏನೆಂದು ಮತ್ತು ಹೇಗೆಂದು ಗೊತ್ತೇ ಇಲ್ಲ. 

ಹೌದು ! ಇದು ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೋ ಸಾಮಾಜಿಕ ಸಂಘಟನೆ ಮಾಡುತ್ತಿರುವ ಆರೋಪವಲ್ಲ. ಬದಲಾಗಿ ಸ್ವತಃ ಚುನಾವಣಾ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಈ ಸತ್ಯಾಂಶ ಬೆಳಕಿಗೆ ಬಂದಿದೆ. 

2018ರ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಇವಿಎಂಗಳ ಬಗ್ಗೆ ಅಪಸ್ವರ, ಆಕ್ಷೇಪಗಳು ಕೇಳಿ ಬಂದಿದ್ದವು. ನಮಗೆ ಇವಿಎಂ ಬೇಡ, ಬ್ಯಾಲೆಟ್‌ ಪೇಪರ್‌ ಬೇಕು ಎಂಬ ಬೇಡಿಕೆ ಸಹ ಆಯೋಗದ ಮುಂದೆ ಇಡಲಾಗಿತ್ತು. ಇವಿಎಂಗಳನ್ನು ತಿರುಚಲಾಗುತ್ತದೆ, ಅವುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪಗಳನ್ನು ಸಾರಾಸಗಟವಾಗಿ ಆಯೋಗ ತಳ್ಳಿ ಹಾಕಿತ್ತು. 

ಏಕೆಂದರೆ, ಇವಿಎಂನಲ್ಲಿ ಹಾಕಿದ ಮತ ಖಚಿತಪಡಿಸಿಕೊಳ್ಳಲು ವಿವಿಪ್ಯಾಟ್‌ ಇರುತ್ತದೆ. ಹಾಗಾಗಿ, ಇವಿಎಂಗಳ ಬಗ್ಗೆ ಅನುಮಾನ, ಅಪನಂಬಿಕೆ ಬೇಡ ಎಂದು ಹೇಳಿತ್ತು. ಆದರೆ, ಯಾವ ಇವಿಎಂಗಳ ಬಗೆಗಿನ ಅನುಮಾನಗಳನ್ನು ದೂರ ಮಾಡಲು ಆಯೋಗ ವಿವಿಪ್ಯಾಟ್‌ ತರಲಾಗಿದೆಯೋ, ಅದರ ಬಗ್ಗೆಯೇ ರಾಜ್ಯದ ಶೇ.72.4ರಷ್ಟು ಜನರಿಗೆ ತಿಳಿದಿಲ್ಲ.

ಬೆಳಗಾವಿ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ, ಶೇ. 89.5, ಮೈಸೂರು ವಿಭಾಗದಲ್ಲಿ ಶೇ. 84.1,  ಕಲಬುರಗಿ ವಿಭಾಗದಲ್ಲಿ ಶೇ.83.9 ಮತ್ತು ಬೆಂಗಳೂರು ವಿಭಾಗದಲ್ಲಿ ಶೇ.43.8 ಮಂದಿಗೆ ವಿವಿಪ್ಯಾಟ್‌ ಮತ್ತದರ ಅನುಕೂಲತೆಗಳ ಬಗ್ಗೆ ಗೊತ್ತಿಲ್ಲ.  ಅದೇ ರೀತಿ ಗ್ರಾಮೀಣ ಭಾಗದ ಶೇ. 74.2 ಮತ್ತು ನಗರ ಭಾಗದ ಶೇ.70.4 ರಷ್ಟು ಮಂದಿಗೆ ವಿವಿಪ್ಯಾಟ್‌ ಬಗ್ಗೆ ತಿಳಿದಿಲ್ಲ.

ವಿವಿಧ ಸಾಮಾಜಿಕ ಗುಂಪು ಮತ್ತು ಸಮುದಾಯಗಳಾದ ಎಸ್ಸಿಗಳಲ್ಲಿ ಶೇ.76.5, ಎಸ್ಟಿಗಳಲ್ಲಿ ಶೇ.72.2, ಓಬಿಸಿ ವರ್ಗಗಳಲ್ಲಿ ಶೇ.72.9 ಮತ್ತು ಇತರ ವರ್ಗಗಳಲ್ಲಿ ಶೇ.68.5ರಷ್ಟು ಜನರಿಗೆ ವಿವಿಪ್ಯಾಟ್‌ಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಪುರುಷರಲ್ಲಿ ಶೇ.70, ಮಹಿಳೆಯರಲ್ಲಿ ಶೇ.75 ಮತ್ತು ತೃತೀಯ ಲಿಂಗಿಗಳಲ್ಲಿ ಶೇ. 63ರಷ್ಟು ಮಂದಿ ವಿವಿಪ್ಯಾಟ್‌ ಏನೆಂದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. 

ಯುವಕರಲ್ಲಿ ಅತಿ ಹೆಚ್ಚು: ವಿವಿಪ್ಯಾಟ್‌ ಅನ್ನುವುದು ಆಧುನಿಕ ತಂತ್ರಜ್ಞಾನದ ಒಂದು ಉಪಕರಣ. ವಿಪರ್ಯಾಸವೆಂದರೆ ಈಗಿನ ಐಟಿ ಯುಗದ ಯುವಕರಿಗೇ ಇದರ ಬಗ್ಗೆ ಅತಿ ಹೆಚ್ಚು ಗೊತ್ತಿಲ್ಲ. 18ರಿಂದ 25 ವರ್ಷದ ಶೇ.79, 26ರಿಂದ 35 ವರ್ಷದ ಶೇ. 75.6, 36ರಿಂದ 45 ವರ್ಷದ ಶೇ.73, 46ರಿಂದ 60 ವರ್ಷದ ಶೇ. 69  ಹಾಗೂ 60 ವರ್ಷ ಮೇಲ್ಪಟ್ಟ ಶೇ. 66 ಮಂದಿಗೆ ವಿವಿಪ್ಯಾಟ್‌ ಬಗ್ಗೆ ತಿಳಿದಿಲ್ಲ. 

“ನೋಟಾ’ ಡೋಂಟ್‌ ನೋ: ಅಭ್ಯರ್ಥಿಗಳ ಬಗ್ಗೆ ಅಸಮ್ಮತಿ, ಅಸಮಧಾನವಿದ್ದರೆ ಯಾರಿಗೂ ಮತಹಾಕದಿರುವಂತೆ 2013ರಲ್ಲಿ “ನೋಟಾ’ (ನನ್‌ ಆಫ್ ದಿ ಅಬೌ) ಜಾರಿಗೆ ತರಲಾಗಿದೆ. ಚುನಾವಣಾ ಆಯೋಗ ಈಗ ನಡೆಸಿರುವ ಸಮೀಕ್ಷೆಯಲ್ಲಿ ಶೇ. 55ರಷ್ಟು ಮಂದಿಗೆ ಇವಿಎಂಗಳಲ್ಲಿ ನೋಟಾಗೆ ಅವಕಾಶವಿರುವ ಬಗ್ಗೆ ಗೊತ್ತಿಲ್ಲ.

ಬೆಳಗಾವಿ ವಿಭಾಗದಲ್ಲಿ ಶೇ. 68, ಕಲಬುರಗಿ ವಿಭಾಗದಲ್ಲಿ ಶೇ. 66, ಮೈಸೂರು ವಿಭಾಗದಲ್ಲಿ ಶೇ. 63 ಹಾಗೂ ಬೆಂಗಳೂರು ವಿಭಾಗದಲ್ಲಿ ಶೇ. 32ರಷ್ಟು ಮಂದಿಗೆ ನೋಟಾ ಬಗ್ಗೆ ಗೊತ್ತಿಲ್ಲ. ಪುರುಷರಲ್ಲಿ ಶೇ. 52, ಮಹಿಳೆಯರಲ್ಲಿ ಶೇ. 58, ತೃತೀಯ ಲಿಂಗಿಗಳಲ್ಲಿ ಶೇ. 22, ಗ್ರಾಮೀಣ ಭಾಗದಲ್ಲಿ ಶೇ. 55, ನಗರ ಭಾಗದಲ್ಲಿ ಶೇ. 54, ಎಸ್ಟಿಗಳಲ್ಲಿ ಶೇ. 61, ಎಸ್ಟಿಗಳಲ್ಲಿ ಶೇ. 57,

ಓಬಿಸಿಗಳಲ್ಲಿ ಶೇ. 54 ಮತ್ತು ಇತರ ವರ್ಗಗಳಲ್ಲಿ ಶೇ. 50. 18ರಿಂದ 25 ವರ್ಷದ ಶೇ. 63, 26ರಿಂದ 35 ಶೇ. 57, 36ರಿಂದ 45 ವರ್ಷದ ಶೆ. 55, 46ರಿಂದ 60 ವರ್ಷದ ಶೇ. 53, 60 ವರ್ಷ ಮೇಲ್ಪಟ್ಟ ಶೇ. 50ರಷ್ಟು ಮಂದಿಗೆ ನೋಟಾ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲ. ಶೇ. 20ರಷ್ಟು ಮಂದಿಗೆ ಮುಂಬರುವ ಚುನಾವಣೆಯಲ್ಲಿ ಮತ ಹಾಕುವ ಉದ್ದೇಶ ತಮಗಿಲ್ಲ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. 

ಮತಕ್ಕೆ ಬೇಕು ಮುಖ್ಯಸ್ಥರ ಅನುಮತಿ: ಶೇ. 9.2ರಷ್ಟು ಪುರುಷರು ಹಾಗೂ ಶೇ. 8.ರಷ್ಟು ಮಹಿಳೆಯರ ಮತದಾನದ ಮೇಲೆ ಕುಟುಂಬದ ಮುಖ್ಯಸ್ಥರ ಪ್ರಭಾವವಿರುತ್ತದೆ. ಈ ಪ್ರಮಾಣ ಎಸ್ಟಿ, ಎಸ್ಟಿ ವರ್ಗಗಳಲ್ಲಿ ಹೆಚ್ಚಿದೆ. ಶೇ. 16ರಷ್ಟು ಎಸ್ಸಿ ಹಾಗà ಶೇ.11.7ರಷ್ಟು ಎಸ್ಟಿ , ಇತರರು ಶೇ. 7.7 ಮತ್ತು ಓಬಿಸಿ ಶೇ. 6ರಷ್ಟು ಮಹಿಳಾ ಮತ್ತು ಪುರುಷ ಮತದಾರರು ಕುಟುಂಬದ ಮುಖ್ಯಸ್ಥರ ಅಣತಿಯಂತೆ ಮತ ಹಾಕುತ್ತಾರೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. 

ರಾಜ್ಯಾದ್ಯಂತ ಹೇಗೆ ನಡೆದಿದೆ ಈ ಸಮೀಕ್ಷೆ?: ಮತದಾರರ ನೋಂದಣಿ, ಮತದಾನ ಸೇರಿದಂತೆ ಒಟ್ಟಾರೆ ಚುನಾವಣಾ ಪ್ರಕ್ರಿಯೆ ಬಗ್ಗೆ ಮತದಾರರ ಅಥವಾ ಸಾರ್ವಜನಿಕರ ತಿಳುವಳಿಕೆ, ಕುತೂಹಲ, ಅನುಮಾನಗಳು, ಸಕ್ರೀಯ ಪಾಲ್ಗೊಳ್ಳುವಿಕೆ ಮತ್ತಿತರರ ವಿಷಯಗಳ ಬಗ್ಗೆ ತಿಳಿದುಕೊಂಡು ಕೊರತೆ ಅಥವಾ ಅವಶ್ಯಕತೆ ಕಂಡು ಬರುವ ವಿಷಯಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ 2018ರ ವಿಧಾನಸಭೆ ಚುನಾವಣೆ ಮುಂದಿಟ್ಟುಕೊಂಡು ಚುನಾವಣಾ ಆಯೋಗ ಕೆ.ಎ.ಪಿ (ನಾಲೇಜ್‌, ಆಟಿಟ್ಯೂಡ್‌ ಆ್ಯಂಡ್‌ ಪ್ರಾಕ್ಟಿಸ್‌) ಹೆಸರಿನಲ್ಲಿ ಸರ್ವೆ ನಡೆಸಿದೆ.

ನಾಲ್ಕು ಕಂದಾಯ ವಿಭಾಗಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ವಯಸ್ಸು, ಭೌಗೋಳಿಕವಾರು, ಶೈಕ್ಷಣಿಕ ಅರ್ಹತೆ, ಲಿಂಗ, ಉದ್ಯೋಗ, ಶೈಕ್ಷಣಿಕ ಅರ್ಹತೆ, ಎಸ್ಸಿ, ಎಸ್ಟಿ ಹಾಗೂ ಇತರೆ ವರ್ಗಗಳಿಂದ ವಿವಿಧ 129 ಅಂಶಗಳ ಬಗ್ಗೆ ರಾಜ್ಯದ ಏಳು ಸಾವಿರ ಕುಟುಂಬಗಳಿಂದ  ಮಾಹಿತಿ ಕಲೆ ಹಾಕಲಾಗಿದೆ. 

ಕೆಎಪಿ ಸರ್ವೆ ಎರಡು ತಿಂಗಳ ಹಿಂದೆ ನಡೆಸಿದ್ದು, ಹಾಗಾಗಿ, ವಿವಿಪ್ಯಾಟ್‌ ಬಗ್ಗೆ ಮಾಹಿತಿ ಇಲ್ಲದಿರುವ ಪ್ರಮಾಣ ಹೆಚ್ಚಾಗಿ ಕಾಣುತ್ತಿದೆ. ಆದರೆ, ಈ ಹಂತದಲ್ಲಿ ಸರ್ವೆ ನಡೆಸಿದರೆ ವಿವಿಪ್ಯಾಟ್‌ ಬಗ್ಗೆ ಹೆಚ್ಚಿನ ಜನರಲ್ಲಿ ತಿಳಿವಳಿಕೆ ಇರುವುದು ಗೊತ್ತಾಗುತ್ತದೆ.
-ರಾಘವೇಂದ್ರ, ಉಪ ಮುಖ್ಯ ಚುನಾವಣಾಧಿಕಾರಿ

* ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Choo Mantar Movie Review

Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!

4-ct-ravi

Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-bng

Actor Darshan: 6 ತಿಂಗಳ ಬಳಿಕ ದರ್ಶನ್‌ ಭೇಟಿ: ಪವಿತ್ರಾ ಭಾವುಕ

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

6-bng

Actor Darshan: 6 ತಿಂಗಳ ಬಳಿಕ ದರ್ಶನ್‌ ಭೇಟಿ: ಪವಿತ್ರಾ ಭಾವುಕ

Nimma Vasthugalige Neeve Javaabdaararu movie review

Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ

Bangladesh: Tamim Iqbal bids farewell to international cricket

Bangladesh: ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ತಮೀಮ್‌ ಇಕ್ಬಾಲ್

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?

5-mudhol

Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.